Home Blog Page 83

ಕಾರ್ಕಳ:ನೂತನ ಅಧ್ಯಕ್ಷರ ಆಯ್ಕೆಯಿಂದ ಪಕ್ಷಕ್ಕೆ ಬಲ:ಉದಯ ಶೆಟ್ಟಿ ಮುನಿಯಾಲು

0

ನೂತನ ಅಧ್ಯಕ್ಷರ ಆಯ್ಕೆಯಿಂದ ಪಕ್ಷಕ್ಕೆ ಬಲ: ಉದಯ ಶೆಟ್ಟಿ ಮುನಿಯಾಲು

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು , ಕಾಂಗ್ರೆಸ್ ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉದಯ ಶೆಟ್ಟಿ ಮುನಿಯಾಲು ಅವರು ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆಯಿಂದ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದರು

ಕಾರ್ಕಳ ಬ್ಲಾಕ್ ಸಮಿತಿಗೆ ಆಯ್ಕೆಯಾದ ಶುಭದ್ ರಾವ್ ಮತ್ತು ಹೆಬ್ರಿ ಬ್ಲಾಕ್ ಸಮಿತಿಗೆ ಆಯ್ಕೆಯಾದ ಗೋಪಿನಾಥ್ ಭಟ್ ಅವರುಗಳು ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವರ್ಷದಿಂದ ದುಡಿಯುತ್ತಾ ವಿವಿಧ ಸ್ಥರಗಳ ಜವಾಬ್ದಾರಿಯನ್ನು ನಿರ್ವಹಿಸಿ ಇಂದು ಬ್ಲಾಕ್ ಅಧ್ಯಕ್ಷರುಗಳಾಗಿ ಆಯ್ಕೆಯಾಗಿರುವುದು ಇದು ಕಾರ್ಯಕರ್ತರಿಗೆ ಸಂದ ಗೌರವವಾಗಿದೆ ಎಂದರು. ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸುವ ಜವಾಬ್ದಾರಿ ಎಲ್ಲರದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಉದಯ ಶೆಟ್ಟಿ ಮುನಿಯಾಲು ಅವರ ಮಾರ್ಗದರ್ಶನದಂತೆ ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಗೆ ನೂತನ ಅದ್ಯಕ್ಷರಾಗಿ ಭಾನು ಭಾಸ್ಕರ್ ಹಾಗೂ ಕಾರ್ಕಳ ನಗರ ಕಾಂಗ್ರೆಸ್ ಸಮಿತಿಗೆ ರಾಜೇಂದ್ರ ಕಾರ್ಕಳ ಅವರುಗಳನ್ನು ಆಯ್ಕೆ ಪ್ರಕ್ರೀಯೆ ನಡೆಯಿತು.

ಸಭೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸಿನ ನಿಕಪೂರ್ವ ಅದ್ಯಕ್ಷರಾದ ಸದಾಶಿವ ದೇವಾಡಿಗ, ನೂತನ ಅದ್ಯಕ್ಷರಾದ ಶುಭದ್ ರಾವ್, ಹೆಬ್ರಿ ಬ್ಲಾಕ್ ಅದ್ಯಕ್ಷರಾದ ಗೋಪಿನಾಥ್ ಭಟ್, ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ಉದಯ.ವಿ. ಶೆಟ್ಟಿ, ಕಜಾರ್ಜ್ ಕ್ಯಾಸ್ತಲಿನೊ, ಗ್ಯಾರಂಟಿ ಸಮಿತಿ ಅನುಷ್ಠಾನ ಸಮಿತಿಯ ಅದ್ಯಕ್ಷರಾದ ಅಜಿತ್ ಹೆಗ್ಡೆ ಮಾಳ, ಅನಿತಾ ಡಿಸೋಜ, ನಗರ ಮಹಿಳಾ ಕಾಂಗ್ರೆಸ್ ಘಟಕದ ಅದ್ಯಕ್ಷೆ ರೀನಾ ಡಿಸೋಜ, ಉಮೇಶ್ ರಾವ್ ಬಜಗೋಳಿ, ಎಸ್ಸಿ ಘಟಕದ ಅಣ್ಣಪ್ಪ ನಕ್ರೆ, ಅಲ್ಪ ಸಂಖ್ಯಾತ ಘಟಕದ ಶಬೀರ್ ಅಹಮ್ಮದ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ, ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷರಾದ ಯೋಗೀಶ್ ಇನ್ನಾ ಧನ್ಯವಾದವಿತ್ತರು.

ಕಾರ್ಕಳ:ಫುಟ್ಬಾಲ್ ಪಂದ್ಯಾಟದಲ್ಲಿ ವಫಾ ಸಂಶುದ್ದೀನ್ ರಾಜ್ಯಮಟ್ಟಕ್ಕೆ ಆಯ್ಕೆ

0

ಕಾರ್ಕಳ:ಫುಟ್ಬಾಲ್ ಪಂದ್ಯಾಟದಲ್ಲಿ ವಫಾ ಸಂಶುದ್ದೀನ್ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಕರ್ನಾಟಕ ಸರಕಾರ ಹಾಗೂ ಡಾ.ಎನ್‌ಎಸ್‌ಎಎಮ್ ಪದವಿಪೂರ್ವ ಕಾಲೇಜು, ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವಫಾ ಸಂಶುದ್ದೀನ್ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾಳೆ. ಮುಂದೆ ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯಾಟದಲ್ಲಿ ವಫಾ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾಳೆ.

ಕಾರ್ಕಳ:ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆ್ಯಂಡ್ ಟ್ರಸ್ಟೆಡ್ ಪದವಿಪೂರ್ವ ಕಾಲೇಜು-2024 ಪ್ರಶಸ್ತಿಯ ಗರಿ

0

ಕಾರ್ಕಳ:ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆ್ಯಂಡ್ ಟ್ರಸ್ಟೆಡ್ ಪದವಿಪೂರ್ವ ಕಾಲೇಜು-2024 ಪ್ರಶಸ್ತಿಯ ಗರಿ

ಕಾರ್ಕಳ: ತಾಲೂಕಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿಗೆ ದಿ ಗ್ರೇಟ್ ಇಂಡಿಯನ್ ಎಂಟರ್‌ಪ್ರೆನರ್‌ಶಿಫ್, ಬ್ಯುಸಿನೆಸ್ ಹಾಗೂ ಸ್ಟಾರ್ಟಪ್ ಸಂಸ್ಥೆಯು ಕೊಡಮಾಡುವ ಭಾರತದ ಎಲೈಟ್ ಎಜುಕೇಷನ್ ಹಾಗೂ ಇನ್ಸ್ಟಿಟ್ಯೂಷನಲ್ ಎಕ್ಷಲೆನ್ಸ್ ಪ್ರಶಸ್ತಿಯ ಅಡಿಯಲ್ಲಿ 2024ನೇ ಸಾಲಿನ “ಮೋಸ್ಟ್ ಪ್ರಾಮಿಸಿಂಗ್ ಹಾಗೂ ಟ್ರಸ್ಟೆಡ್ ಪದವಿಪೂರ್ವ ಕಾಲೇಜು- 2024” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ, ಅತ್ಯುತ್ತಮ ಆಡಳಿತ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರತಿಭೆಗೂ ಮೀರಿದ ಫಲಿತಾಂಶ, ನಿರಂತರವಾಗಿ ದಾಖಲಿಸಿದ ಅತ್ಯುತ್ತಮ ಫಲಿತಾಂಶಗಳ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಇದೇ 2024 ಅಕ್ಟೋಬರ್ ತಿಂಗಳ 25ನೇ ತಾರೀಖಿನಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಂಕರ್ ಹ್ಯಾಬಿಟೇಟ್ ಟೆಕ್ನಾಲಜಿ ಗ್ರೂಪ್‌ನ ಮುಖ್ಯಸ್ಥರಾದ ಪದ್ಮಶ್ರೀ ಡಾ.ಗೋಪಾಲನ್ ನಾಯರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕ್ರೈಸ್ಟ್ ಕಿಂಗ್ ಆಡಳಿತ ಮಂಡಳಿಯ ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಮನೋರೋಗ ತಜ್ಞರಾದ ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ್ ಹಾಗೂ ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದ ಮಾಜಿ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀಕಂಠೇಶ್ವರ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ‘ಶೆಟ್ಟಿ ಡಿಜಿಟಲ್ ಲೈಫ್’ನಲ್ಲಿ ಬಂಪರ್ ಆಫರ್ ಬೈಕ್ ಗೆಲ್ಲುವ ಸುವರ್ಣಾವಕಾಶ

0

ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ‘ಶೆಟ್ಟಿ ಡಿಜಿಟಲ್ ಲೈಫ್’ನಲ್ಲಿ ಬಂಪರ್ ಆಫರ್

ಬೈಕ್ ಗೆಲ್ಲುವ ಸುವರ್ಣಾವಕಾಶ

ಕಾರ್ಕಳದ ಶೆಟ್ಟಿ ಡಿಜಿಟಲ್ ಲೈಫ್ ನಲ್ಲಿ ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ಲಕ್ಕಿ ಕೂಪನ್ಸ್ ಜೊತೆಗೆ ಆಕರ್ಷಕ ಬಹುಮಾನ ಲಭ್ಯವಿದೆ.

ಮೊಬೈಲ್ ಖರೀದಿಯ ಜತೆಗೆ ಲಕ್ಕಿ ಕೂಪನ್ ಲಭ್ಯವಿದ್ದು ಇದರಿಂದ ಸ್ಮಾರ್ಟ್ ಟಿವಿ,ಏರ್ ಕಂಡಿಷನರ್,ಬ್ಲೂಟೂಥ್ ಸ್ಪೀಕರ್,ಮಿಕ್ಸರ್, ಗ್ರೈ೦ಡರ್ ಹಾಗೂ ಏಳು ಬೈಕ್ ಗಳನ್ನು ಗೆಲ್ಲುವ ಸುವರ್ಣಾವಕಾಶ.

ಇಂದೇ ಭೇಟಿ ನೀಡಿ ಶೆಟ್ಟಿ ಡಿಜಿಟಲ್ ಲೈಫ್ ರಾಮ್ ದೇವ್ ಫ್ಯಾನ್ಸಿ ಮೂರುಮಾರ್ಗ ಹಳೆಯ ಆಶಿರ್ವಾದ್ ಹೋಟೆಲ್ ಬಳಿ ಕಾರ್ಕಳ.

ಮೊಬೈಲ್: 8381000394,7899707394

ಬಜಗೋಳಿಯ ಅಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್

0

ಬಜಗೋಳಿ:ಅಮ್ಮ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್

ಬಜಗೋಳಿ:ಅಮ್ಮ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್

ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ.ಪ್ರತೀ 2000ರೂಪಾಯಿ ಖರೀದಿಗೆ ಪಡೆಯಿರಿ ಲಕ್ಕಿ ಕೂಪನ್ಸ್

32″ ಎಲ್ಈಡಿ ಟಿವಿ ಕೇವಲ 6,990ಕ್ಕೆ, 43″ಆಂಡ್ರಾಯಿಡ್ ಟಿವಿ ಕೇವಲ13,990ಕ್ಕೆ,50″4k UHD ಆಂಡ್ರಾಯಿಡ್ ಟಿವಿ ಕೇವಲ 29,990ಕ್ಕೆ ಲಭ್ಯವಿದೆ.

ಸಿಂಗಲ್ ಡೋರ್ ರೆಫ್ರಿಜಿರೇಟರ್ ರೂ.11,990ಕ್ಕೆ,ಡಬಲ್ ಡೋರ್ ಪ್ಯಾನಸಾನಿಕ್ ರೆಫ್ರಿಜಿರೇಟರ್ ಕೇವಲ 22,990 ರೂಪಾಯಿಗೆ ದೊರೆಯಲಿದೆ.

ಫುಲ್ ಅಟೋಮೆಟಿಕ್ ವಾಷಿಂಗ್ ಮೆಷಿನ್ 13,990ಕ್ಕೆ ಪ್ರಾರಂಭವಾಗಲಿದ್ದು, ಸೆಮಿ ಅಟೋಮೆಟಿಕ್ ವಾಷಿಂಗ್ ಮೆಷಿನ್ ಕೇವಲ 8,990ಕ್ಕೆ ಸಿಗಲಿದೆ.

ಲುಮಿನೋಸ್ ಇನ್ವರ್ಟರ್ 150Ah ಬ್ಯಾಟರಿ 1050 UPS ಕೇವಲ ರೂ18,990ಕ್ಕೆ ಸಿಗಲಿದೆ.COAT +NILKAMAL MATTERS +2 PILLOWS + BED SHEET ಕೇವಲ ರೂ13,490ಕ್ಕೆ
ಗೋದ್ರೇಜ್ ಕಬಾಟುಗಳು ಕೇವಲ 7,490ಕ್ಕೆ ಗೋದ್ರೇಜ್ ರಾಜ ರಾಣಿ ಕಬಾಟುಗಳು ರೂ 11,990ಕ್ಕೆ ದೊರೆಯಲಿದೆ

3 ಸೀಟರ್ ಸೋಫಾ ರೂ5,990ಕ್ಕೆ,5 ಸೀಟರ್ ಸೋಫಾ ಸೆಟ್ 10,990ಕ್ಕೆ ಸಿಗಲಿದೆ.2ಲೀ -TILTING ಗ್ರೈ೦ಡರ್ ಕೇವಲ Rs 5,490ಕ್ಕೆ,ಮಿಕ್ಸಿ 2490ಕ್ಕೆ ದೊರೆಯಲಿದ್ದು,ಗ್ಯಾಸ್ ಸ್ಟವ್ ಜತೆಗೆ ತವಾ ಉಚಿತವಾಗಿ ಸಿಗಲಿದೆ

ಅಮ್ಮ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಸೇಲ್ & ಸರ್ವಿಸ್
ಹೆಸರಾಂತ ಗೃಹೋಪಯೋಗಿ ವಸ್ತುಗಳ ಮಳಿಗೆ
ಪ್ರೈಮರಿ ಶಾಲೆಯ ಎದುರು, ತುಡರ್ ಕಾಂಪ್ಲೆಕ್ಸ್, ಬಜಗೋಳಿ
ಸಂಪರ್ಕಿಸಿ:9901658176, 7338458176

ದೀಪಾವಳಿ ವಿಶೇಷ ಆಫರ್

ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಬೆಳಕಿನ ಹಬ್ಬದ ಉತ್ಸವ ದೀಪಾವಳಿ ಪ್ರಯುಕ್ತ ಭರ್ಜರಿ ಆಫರ್

0

ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಬೆಳಕಿನ ಹಬ್ಬದ ಉತ್ಸವ ದೀಪಾವಳಿ ಪ್ರಯುಕ್ತ ಭರ್ಜರಿ ಆಫರ್

20 ವರ್ಷಗಳಿಂದ ಕಾರ್ಕಳದಲ್ಲಿ ಸೇಲ್ಸ್ ಮತ್ತು ಸರ್ವಿಸ್ ನಲ್ಲಿ ಮನೆ ಮಾತಾಗಿರುವ ಜೆಎಂಜೆ ಇಲೆಕ್ಟ್ರಾನಿಕ್ಸ್ ನಲ್ಲಿ ಮತ್ತು ಶಿರ್ವ ಹೊಸ ಶಾಖೆಯಲ್ಲೂ ಬೆಳಕಿನ ಹಬ್ಬದ ಉತ್ಸವ ಪ್ರಾರಂಭಗೊಂಡಿದೆ.

ವಿಸ್ತಾರವಾದ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಡಿಸ್ಪ್ಲೇ ಹೊಂದಿರುವ ಜೆಎಂಜೆಯಲ್ಲಿ ಎಲ್ ಇ ಡಿ ಟೀವಿಗಳು ಕೇವಲ 5990ಕ್ಕೆ, ಟಿಸಿಲ್/ಗಿಲ್ಮ 65″ ಗೂಗಲ್ ಟಿವಿ ಕೇವಲ 49990,ರೆಫರಿಜೆರೇಟರ್ ಕೇವಲ 12990ಕ್ಕೆ, ವೋಲ್ಟಾಸ್ 7 ಕೆಜಿ ವಾಷಿಂಗ್ ಮಷೀನ್ ಕೇವಲ 7990ಕ್ಕೆ,ಐಎಫ್ ಬಿ ಫ್ರಂಟ್ ಲೋಡ್ 26990ಕ್ಕೆ ಆರಂಭವಾಗಲಿದೆ.

ಮಿಕ್ಸಿ ಸ್ಟವ್ ಕಿಚನ್ ಅಪ್ಪಲಯನ್ಸ್ ಮೇಲೆ 50% ರಷ್ಟು ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಆಫರ್ , ಕಂಬೋ ಆಫರ್ ಗಳು, ಗ್ರಹಉಪಯೋಗಿ ವಸ್ತುಗಳ ಮೇಲೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಲ್ಲಿ 20% ತನಕ ಕ್ಯಾಶ್ ಬ್ಯಾಕ್ ಲಭ್ಯ.
ಎಲ್ ಇ ಡಿ ಟೀವಿಯಲ್ಲಿ ಸೋನಿ, ಸ್ಯಾಮ್ ಸಾಂಗ್, ಎಲ್ ಜಿ, ಪಾನಸೋನಿಕ್, ಹೈರ್, ಹೈಸೆನ್ಸ್, ಇಂಟೆಕ್ಸ್, ಇಂಪೆಕ್ಸ್, ವಿಲೆಟ್ ಇನ್ನಿತರ ಬ್ರಾಂಡಗಳು ಲಭ್ಯವಿದೆ.

ಹೈರ್, ಪಾನಸೋನಿಕ್, ಐ ಎಫ್ ಬಿ, ಸ್ಯಾಮ್ ಸಂಗ್, ಎಲ್ ಜಿ, ವಿರ್ಲಿಪೂಲ್, ಬೋಸ್ಚ್ ಕಂಪೆನಿಯ ರೆಫರಿಜೆರೇಟರ್ ಮತ್ತು ವಾಷಿಂಗ್ ಮಷೀನ್ ಗಳು.

ಏರ್ ಕಂಡೀಶನರ್ ಗಳಲ್ಲಿ ಎಲ್ ಜಿ, ಪಾನಸೋನಿಕ್, ಲ್ಲೊಯ್ಡ್, ಹೈರ್, ಗೋದ್ರೇಜ್, ಡೈಕಿನ್, ಕ್ಯಾರಿಯರ್, ಒನಿಡ,ವಿಶಾಲ ಶ್ರೇಣಿ,ಉಚಿತ ಅಳವಡಿಕೆ, ತನ್ನದೇ ಸರ್ವಿಸ್ ಟೀಮ್ ಹೊಂದಿದ್ದು ಕ್ಲಪ್ತ ಸಮಯದಲ್ಲಿ ಇನ್ಸ್ಟಾಲೇಷನ್ ಮತ್ತು ಸರ್ವಿಸ್ ಒದಗಿಸಲಾಗುದು.

ವಿಗಾರ್ಡ್, ಸುಪ್ರೀಂ, ಮೈಕ್ರೋಟೆಕ್ ಈಸ್ಟಮನ್ ಸೋಲಾರ್ ಇನ್ವರ್ಟರ್, ನೀರಿನ ಸೋಲಾರ್, ಹೋಂ ಇನ್ವರ್ಟರ್ ಯುಪಿಎಸ್ ಸಿಸ್ಟಮ್ ಗಳ ಮಾರಾಟ, ಅಳವಡಿಸಿ ಕೊಡಲಾಗುದು.

ಪ್ರೆಸ್ಟೀಜ್, ಪಾನಸೋನಿಕ್, ಹಾವೇಲ್ಸ್, ಪ್ರೀತಿ, ಪ್ರಿಮಿಯರ್, ಬ್ಲೋ ಹಾಟ್, ಉಷಾ, ಮೆಕ್ಕೋಯ್, ಗ್ರೀನ್ ಚೆಫ್, ಫಿಜಾನ್ ಬ್ರಾಂಡ್ ನ ಕಿಚನ್ ಅಪ್ಲೈಯಯನ್ಸ್ ಗಳು ದೊರೆಯುತ್ತದೆ.

ಕುರ್ಲೊನ್ ಸ್ಲೀಪವೆಲ್ ಬೆಡ್ ಕಾಟ್ ಗಳು,3 ಸೀಟರ್ ಸೋಫಾ, ಕಾರ್ನರ್ ಸೋಫಾ ಗ್ರಾಹಕರಿಗೆ ತಕ್ಕಂತೆ ತಯಾರಿಸಿ ಕೊಡಲಾಗುವುದು.
ಜೆ ಎಂ ಜೆ ಇಲೆಕ್ಟ್ರಾನಿಕ್ಸ್ ಫರ್ನಿಚರ್ಸ್:
ಸಕೀನ ಪ್ಲಾಜ ಮಂಗಳೂರು ರಸ್ತೆ ಕಾರ್ಕಳ -9845110840,9844896668.
ಮರೀನಾ ಗ್ರೇಸ್ ಬಿಲ್ಡಿಂಗ್, ನೆಕ್ಸ್ಟ್ ಟು ಕರ್ನಾಟಕ ಬ್ಯಾಂಕ್, ಶಿರ್ವ -9741311424,9008158872

 

ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಗೆ ನೂತನ ಅದ್ಯಕ್ಷರ ಆಯ್ಕೆ ಕಾರ್ಕಳ ಬ್ಲಾಕ್ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶುಭದರಾವ್ ಮತ್ತು ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಪಿನಾಥ್ ಭಟ್

0

ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಗೆ ನೂತನ ಅದ್ಯಕ್ಷರ ಆಯ್ಕೆ

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ ಬ್ಲಾಕ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಶುಭದರಾವ್ ಮತ್ತು ಗೋಪಿನಾಥ್ ಭಟ್ ಇವರುಗಳನ್ನು ನೇಮಿಸಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅದ್ಯಕ್ಷರಾದ  ಡಿ.ಕೆ ಶಿವಕುಮಾರ್ ಆದೇಶವನ್ನು ನೀಡಿದ್ದಾರೆ.

ಕಾರ್ಕಳ ಬ್ಲಾಕ್ ಅದ್ಯಕ್ಷರಾಗಿದ್ದ ಸದಾಶಿವ ದೇವಾಡಿಗ ಹಾಗೂ ಹೆಬ್ರಿ ಬ್ಲಾಕ್ ಅದ್ಯಕ್ಷರಾಗಿದ್ದ ಚಂದ್ರಶೇಖರ್ ಬಾಯರಿಯವರ ಅದ್ಯಕ್ಷ ಅವಧಿಯು ಪೂರ್ಣಗೊಂಡ ಹಿನ್ನಲೆಯಲ್ಲಿ ನೂತನ ಅದ್ಯಕ್ಷರ ಆಯ್ಕೆ ನಡೆದಿದೆ.

ಬ್ಲಾಕ್ ಅದ್ಯಕ್ಷ ಸ್ಥಾನಕ್ಕೆ ಅಯ್ಕೆಯ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯಿಲಿಯವರ ಮಾರ್ಗದರ್ಶನದಲ್ಲಿ ಕೆ.ಪಿ.ಸಿ.ಸಿ‌ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿಯವರು ಸಮ್ಮುಖದಲ್ಲಿ ಪಕ್ಷದ ಮುಖಂಡರು ಹಾಗೂ ವಿವಿದ ಘಟಕದ ಪಧಾದಿಕಾರಿಗಳ ಅಭಿಪ್ರಾಯವನ್ನು ಕಾಂಗ್ರೆಸ್ ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು.

ಶುಭದರಾವ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದು ಪ್ರಸ್ತುತ ಬ್ಲಾಕ್ ಕಾಂಗ್ರೇಸ್ ವಕ್ತಾರಾಗಿ, ಮತ್ತು ಕಾರ್ಕಳ ಪುರಸಭೆಗೆ ಸತತ ಮೂರನೇ ಬಾರಿ ಆಯ್ಕೆಯಾದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೋಪಿನಾಥ್ ಭಟ್ ಪ್ರಸ್ತುತ ವರಂಗ ಪಂಚಾಯಿತಿ ಎರಡನೇ ಬಾರಿ ಸದಸ್ಯರಾಗಿ ಅಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಅದ್ಯಕ್ಷ ಆಯ್ಕೆಯ ಆದೇಶ ಪ್ರತಿಯನ್ನು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಕಾಂಗ್ರೇಸ್ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಾರಿ, ಪ್ರವೀಣ್ ಬಲ್ಲಾಳ್, ರಮೇಶ್ ಕಾಂಚನ್, ಅಜಿತ್ ಹೆಗ್ಡೆ ಮಾಳ, ಲಕ್ಷ್ಮಣ್ ಆಚಾರ್, ಅಮೃತ್ ಶೆಣೈ, ವಿವೇಕಾನಂದ ಶೆಣೈ, ಸುಧಾಕರ ಶೆಟ್ಟಿ, ಹೇಮಂತ್ ಆಚಾರ್ಯ, ಕೃಷ್ಣ ಶೆಟ್ಟಿ ಬಜಗೋಳಿ, ಸುನೀಲ್ ಭಂಡಾರಿ, ಯೋಗೀಶ್ ಇನ್ನಾ, ದೀಪಕ್ ಶೆಟ್ಟಿ, ಪ್ರದೀಪ್ ಬೇಲಾಡಿ, ಸಂಜಯ್ ಆಚಾರ್ಯ ಉಡುಪಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಶಿರ್ಲಾಲು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ರಾಜು ಶೆಟ್ಟಿ ನಿಧನ

0

ಶಿರ್ಲಾಲು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ರಾಜು ಶೆಟ್ಟಿ ನಿಧನ

ಶಿರ್ಲಾಲು ಎಸ್. ರಾಜು ಶೆಟ್ಟಿ (75) ಅವರು ಅ.26 ರಂದು ಶಿರ್ಲಾಲಿನ ಸ್ವಗ್ರಹದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು.ಇವರು 35 ವರ್ಷಗಳ ಕಾಲ ಅಂಚೆ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ ನಿವೃತ ಜೀವನ ನಡೆಸುತ್ತಿದ್ದರು.ಮೃತರು ಪತ್ನಿ ಓರ್ವ ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

ರಾಜು ಶೆಟ್ಟಿರವರು ಶಿರ್ಲಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು.5 ವರ್ಷಗಳ ಕಾಲ ಶಿರ್ಲಾಲ್ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಹಾಲು ಉತ್ಪಾಕರ ಸಹಾಕರಿ ಸಂಘದ ಕಾರ್ಯದರ್ಶಿ ಆಗಿದ್ದರು ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

 

ಬಜಗೋಳಿ:ಸ್ವರ್ಣ ಮೊಬೈಲ್ಸ್ ನಲ್ಲಿ ದೀಪಾವಳಿ ಬಂಪರ್ ಆಫರ್ ಟಿವಿ,ಏಸಿ, ಬೈಕ್ ಗೆಲ್ಲುವ ಅವಕಾಶ

0

ಬಜಗೋಳಿ:ಸ್ವರ್ಣ ಮೊಬೈಲ್ಸ್ ನಲ್ಲಿ ದೀಪಾವಳಿ ಬಂಪರ್ ಆಫರ್

ಟಿವಿ,ಏಸಿ, ಬೈಕ್ ಗೆಲ್ಲುವ ಅವಕಾಶ

ಬಜಗೋಳಿಯ ಸ್ವರ್ಣ ಮೊಬೈಲ್ಸ್ ನಲ್ಲಿ ದೀಪಾವಳಿ ಆಫರ್ ಪ್ರಾರಂಭಗೊಂಡಿದೆ.ಒಂದು ಸ್ಮಾರ್ಟ್ ಫೋನ್ ಖರೀದಿಗೆ ಲಕ್ಕಿ ಕೂಪನ್ ದೊರೆಯಲಿದ್ದು ಅದೃಷ್ಟಶಾಲಿಗಳಿಗೆ ಟಿವಿ,ಬ್ಲೂಟೂತ್, ಏಸಿ, ಮಿಕ್ಸಿ ಹಾಗೂ ಏಳು ಬೈಕ್ ಗೆಲ್ಲುವ ಸುವರ್ಣಾವಕಾಶವಿದೆ.

ಯಾವುದೇ ಬ್ರಾಂಡ್ ನ ಮೊಬೈಲ್ ನೊಂದಿಗೆ ಖಚಿತ ಉಡುಗೊರೆ ಜೊತೆಗೆ ಗ್ಲಾಸ್ ಗಾರ್ಡ್, ಪೌಚ್, ನೆಕ್ ಬ್ಯಾಂಡ್, ಪವರ್ ಬ್ಯಾಂಕ್, ಏರ್ ಬಡ್ಸ್ ಉಚಿತವಾಗಿ ಸಿಗಲಿದೆ.

ಎಕ್ಸೆ೦ಜ್ ಆಫರ್ ಜೊತೆಗೆ ಕಡಿಮೆ ಕಂತುಗಳಲ್ಲಿ ಬಡ್ಡಿದರದೊಂದಿಗೆ ಇಎಂಐ ಮೂಲಕ ಮೊಬೈಲ್ ಖರೀದಿಸಬಹುದು.ಸರ್ಟಿಫೈಡ್ ಟೆಕ್ನಿಷಿಯನ್ ಗಳಿಂದ ಉತ್ತಮ ಸರ್ವಿಸ್ ಲಭ್ಯವಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದೇ ಭೇಟಿ ನೀಡಿ ಸ್ವರ್ಣ ಮೊಬೈಲ್ಸ್ ಬಸ್ ನಿಲ್ದಾಣದ ಬಳಿ ಬಜಗೋಳಿ

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು

0

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು

ಕಾರ್ಕಳ: ಹಾಸನದ ಎಸ್ ಡಿಎಂ ಆಯುರ್ವೇದ ಕಾಲೇಜಿನಲ್ಲಿ ಕಳೆದ ವಾರ ನಡೆದ ರಾಜ್ಯಮಟ್ಟದ ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು ಅವರು ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಅವರು ಈಗ ದಕ್ಷಿಣ ವಲಯ ಆಯ್ಕೆ ಶಿಬಿರದಲ್ಲಿ ಪ್ರತಿಷ್ಠಿತ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ.