ಕರಾವಳಿಯಲ್ಲಿ ಸ್ಪೆಷಲ್ ಆಕ್ಷನ್ ಫೋರ್ಸ್ ಕೆಲಸ ಶುರು!-ಕಾರ್ಕಳದ ಯುವಕನ ಬಂಧನ
ಕರಾವಳಿಯಲ್ಲಿ ವಿಶೇಷ ಕಾರ್ಯಪಡೆ ಎಸ್‍ಎಎಫ್ ತಂಡ ಸಕ್ರಿಯವಾಗಿದೆ. `ರಕ್ತಕ್ಕೆ ರಕ್ತವೇ ಬೇಕು’ ಎಂದು ಸ್ಟೇಟಸ್ ಹಾಕಿದವನನ್ನು ಎಸ್‍ಎಎಫ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿಯ ಕಾರ್ಕಳ ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್ ಎಂದು ಗುರುತಿಸಲಾಗಿದೆ. ಈತ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ. ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು. ಜೀವಕ್ಕೆ ಜೀವನೇ ಬೇಕು ಎಂದು ಮಾರಕಾಯುಧಗಳ ಚಿಹ್ನೆ ಬಳಸಿ ಸ್ಟೇಟಸ್ ಹಾಕಿದ್ದ.
ಈ ಹಿನ್ನಲೆ ಆರೋಪಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‍ಎಸ್ ಕಲಂ 196, 353 (2), 351 (3)ರ ಅಡಿ ಎಫ್‍ಐಆರ್ ದಾಖಲಾಗಿದೆ. ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.