ನಿಟ್ಟೆ:ಗ್ರಂಥಾಲಯ ಸಪ್ತಾಹ-2026 ಉದ್ಘಾಟನೆ
ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಗ್ರಂಥಾಲಯ ಸಪ್ತಾಹ – 2026 ಇಂದು ಉದ್ಘಾಟನೆಗೊಂಡಿತು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಲೂನ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಸ್ಪರ್ಧೆಗಳಿಗೆ ಚಾಲನೆಯಿತ್ತು ಶುಭ ಹಾರೈಸಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ನಾಗೇಶ್ ಪ್ರಭು ದೀಪ ಪ್ರಜ್ವಲಿಸುವ ಮೂಲಕ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಗ್ರಂಥಾಲಯ ಸಿಬ್ಬಂದಿಗಳು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಂಥಪಾಲಕ ಡಾ. ಪ್ರೀತಂ ಶೆಟ್ಟಿ ಕೆ. ವಿ. ಸ್ವಾಗತಿಸಿ ಪ್ರಸ್ತಾವನೆಗೈದರು. ಸಹಾಯಕ ಗ್ರಂಥಪಾಲಕ ಸುಧಾಕರ್ ಕೆ. ವಂದಿಸಿದರು. ಇನ್ನೋರ್ವ ಸಹಾಯಕ ಗ್ರಂಥಪಾಲಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಂಥಾಲಯ ಸಿಬ್ಬಂದಿಗಳು ಸಹಕರಿಸಿದರು.
















