ಕೆ. ಎಂ. ಈ.ಎಸ್. ವಿದ್ಯಾ ಸಂಸ್ಥೆಯಲ್ಲಿ ವಿವಿಧ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಸುರೇಶ್ ವಿದ್ಯಾರ್ಥಿಗಳ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ದೇಹದ ಆರೋಗ್ಯ ಚೆನ್ನಾಗಿದ್ದರೆ ಮನಸ್ಸಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಟೆಕ್ ವೊಂಡೊ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗೆ ಇದು ಅವಶ್ಯಕ. ಅಬಾಕಸ್ ವಿದ್ಯಾರ್ಥಿಗಳ ಬುದ್ದಿವಂತಿಕೆ, ಯೋಚನಾಶಕ್ತಿ ಹೆಚ್ಚಿಸುತ್ತದೆ. ಇವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು. ಚಿತ್ರಕಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ ಸುಜಿಂದ್ರ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿರುವ ಸುನಿತಾ ಮತ್ತು ಶ್ರೀನಾಥ್ ಅಬಾಕಸ್ ಮತ್ತು ವೇದಿಕ್ ಗಣಿತದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣರಾವ್ ಮಾತನಾಡಿ ಬೇರೆ ಬೇರೆ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಒಂದೇ ವೇದಿಕೆಯಲ್ಲಿರುವುದು ನಮ್ಮೆಲ್ಲರ ಭಾಗ್ಯ. ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಸಂಪೂರ್ಣ ಉಪಯೋಗ ಪಡೆಯಬೇಕು ಎಂದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೊಲಿಟಾ ಡಿ ಸಿಲ್ವ ಸ್ವಾಗತಿಸಿದರು. ರೇಷ್ಮಾ ನಜೀರ್ ವಂದಿಸಿದರು. ಎಲ್ವಿನಾ ಕಾರ್ಯಕ್ರಮ ಸಂಯೋಜಿಸಿದರು.