ಕ್ರೈಸ್ಟ್ ಕಿಂಗ್ : ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ ನಿಮಿತ್ತ ಗೋಶಾಲೆ ಹಾಗೂ ವೃದ್ಧಾಶ್ರಮ ಭೇಟಿ

0
filter: 0; jpegRotation: 0; fileterIntensity: 0.000000; filterMask: 0;

ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಹಿರಿಯರ ಬಗ್ಗೆ ಗೌರವ ಮತ್ತು ಇಳಿ ವಯಸ್ಸಿನಲ್ಲಿ ಹಿರಿಯರ ಬಗ್ಗೆ ತೊರಬೇಕಾದ ಕಾಳಜಿ, ಪ್ರೀತಿ, ಗೌರವಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ ನಿಮಿತ್ತ ಗೋಶಾಲೆ ಹಾಗೂ ವೃದ್ಧಾಶ್ರಮ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಹೈನುಗಾರಿಕೆ ಹಾಗೂ ಗೋವುಗಳ ವಿವಿಧ ತಳಿಗಳ ಬಗ್ಗೆ ಅಧ್ಯಯನ ಮಾಡಲು ತೆಳ್ಳಾರು ರಸ್ತೆಯ ಶೇಷಾದ್ರಿ ನಗರದಲ್ಲಿರುವ ಶ್ರೀ ವೆಂಕಟರಮಣ ಗೋಶಾಲೆಗೆ ಭೇಟಿ ನೀಡಲಾಯಿತು. ಅದೇ ರೀತಿ ತೆಳ್ಳಾರು ರಸ್ತೆಯ ಗಜ್ರಿಯಾ ಆಸ್ಪತ್ರೆಯ ಬಳಿಯ ವಾತ್ಸಲ್ಯ ಸೇವಾ ಟ್ರಸ್ಟ್ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ಕಾರ್ಯಚಟುವಟಿಕೆಗಳು ಹಾಗೂ ಹಿರಿಯ ನಾಗರೀಕರ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಗೋಶಾಲೆಯಲ್ಲಿ ಅಲ್ಲಿನ ವ್ಯವಸ್ಥಾಪಕರಾದ ಕೇಶವ ನಾಯಕ್ ಹಾಗೂ ವೃದ್ಧಾಶ್ರಮದಲ್ಲಿ ಅಲ್ಲಿನ ವ್ಯವಸ್ಥಾಪಕರಾದ ಸಂದೀಪ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಉಪನ್ಯಾಸಕರಾದ ಪ್ರಕಾಶ್ ಭಟ್, ಉಮೇಶ್ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್, ಶ್ರೀಮತಿ ಶಹನಾಝ್, ಶ್ರೀಮತಿ ಸುಕನ್ಯಾ, ಶ್ರೀಮತಿ ಶಿಜಿ ಭೇಟಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

   

LEAVE A REPLY

Please enter your comment!
Please enter your name here