ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ 2025-28 ರ ಆಡಳಿತದ ಮಂಡಳಿ ಪುನರ್ ರಚನೆಯಾಗಿದೆ. ಜೂನ್ 29 ರಂದು ನಡೆದ ಸಂಘದ 2024-25ರ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿ ಪುನರ್ ರಚನೆಯಾಗಿದೆ. ನೂತನ ಜಿಲ್ಲಾಧ್ಯಕ್ಷರಾಗಿ ಗಂಗಾಧರ ಗೌಡ ಪುನರ್ ಆಯ್ಕೆಯಾಗಿದ್ದಾರೆ.
ಸಂಘದ ಉಪಾದ್ಯಕ್ಷೆಯಾಗಿ ಶ್ರೀಮತಿ ಶಾರದಾ ಪೇರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಕೆರ್ವಾಶೆ, ಸಹ ಕಾರ್ಯದರ್ಶಿಯಾಗಿ ಕುಮಾರಿ ಚಾಂದಿನಿ ಶಿರ್ಲಾಲು, ಕೋಶಾಧಿಕಾರಿಯಾಗಿ ಶ್ರೀಮತಿ ಸುಂದರಿ ಪೇರಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಅಜಿತ್ ಅಂಡಾರು, ಸಹ ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಕಬ್ಬಿನಾಲೆ, ವಕ್ತಾರರಾಗಿ ದಿನೇಶ್ ಗೌಡ ನೂರಾಳ್ ಬೆಟ್ಟು, ಸಹ ವಕ್ತಾರೆಯಾಗಿ ಶ್ರೀಮತಿ ಸುಜಾತ ಕಬ್ಬಿನಾಲೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.