ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳನ್ನು ಬಿಡುಗಡೆ ಮಾಡಲಾಗುವುದು. ಆದರೆ, ರಾಜ್ಯ ಸರ್ಕಾರಗಳು ಯಾರಿಗೆ ಕೊಡಬಹುದು ಎಂದು ಫಲಾನುಭವಿಗಳನ್ನು ಗುರುತಿಸುತ್ತವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಜಾತಾ ಶರ್ಮಾ, ಎಲ್ಪಿಜಿ ವಿಚಾರದಲ್ಲಿ ಜನರು ಆತಂಕ ಪಡಬಾರದು ಎಂದು ಮನವಿ ಮಾಡಿದ್ದಾರೆ. ‘ಗೃಹೇತರ ಬಳಕೆಯ ಎಲ್ಪಿಜಿ ಅಥವಾ ಕಮರ್ಷಿಯಲ್ ಎಲ್ಪಿಜಿ ವಿಚಾರದಲ್ಲಿ ನಾವು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಂತಹ ಕೆಲ ವಲಯಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಅದರಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮಾಡುವಂತೆ ರಾಜ್ಯ ಸರ್ಕಾರಗಳಿಗೆ ನೀಡಿದ್ದೇವೆ. ಆದ್ಯತೆ ಮೇರೆಗೆ ಕಮರ್ಷಿಯಲ್ ಸಿಲಿಂಡರ್ಗಳನ್ನು ನೀಡಲಾಗುವುದು’ ಎಂದು ಸುಜಾತಾ ಶರ್ಮಾ ತಿಳಿಸಿದ್ದಾರೆ.
‘ನಮಗೆ ಬೇಕಾದ ಎಲ್ಪಿಜಿಯಲ್ಲಿ ಶೇ. 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಶೇ. 90ರಷ್ಟು ಹಾರ್ಮುಜ್ ಮೂಲಕ ಬರುತ್ತದೆ. ಪರಿಸ್ಥಿತಿ ಕ್ಲಿಷ್ಟಕರವಾಗಿದೆಯಾದರೂ ಸರ್ಕಾರವು ಜನರಿಗೆ ಎಲ್ಪಿಜಿ ಪೂರೈಕೆ ಸಮರ್ಪಕವಾಗಿ ಆಗುವುದನ್ನು ಖಚಿಪಡಿಸಲು ಯತ್ನಿಸುತ್ತಿದೆ. ನಿತ್ಯವೂ 50 ಲಕ್ಷ ಸಿಲಿಂಡರ್ಗಳನ್ನು ಪೂರೈಸುತ್ತಿದ್ದೇವೆ. ಆದರೆ, ಜನರು ಆತಂಕದಿಂದ ಎಲ್ಪಿಜಿ ಬುಕಿಂಗ್ ಮಾಡುವುದು ಹೆಚ್ಚಾಗಿದೆ. ಈ ರೀತಿ ಪ್ಯಾನಿಕ್ ಬುಕಿಂಗ್ ತಪ್ಪಿಸಲು ನಾಗರಿಕರನ್ನು ಕೇಳಿಕೊಳ್ಳುತ್ತೇವೆ’ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿ ಮನವಿ ಮಾಡಿದ್ದಾರೆ.














