ನಂದಳಿಕೆ ಬೋರ್ಡ್ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭ.
ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಬೋರ್ಡ್ ಶಾಲೆ ಶತಮಾನವನ್ನು ಪೂರೈಸಿ ಹಲವಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾದ ಹೆಮ್ಮೆಯ ಶಾಲೆ.
ಈ ಶಾಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಸುಸಜ್ಜಿತ ಶೌಚಾಲಯ,ಹೂತೋಟ, ಸುಸಜ್ಜಿತ ಸಭಾಂಗಣದೊಂದಿಗೆ ಬಲಿಷ್ಠವಾದ ಹಳೆ ವಿದ್ಯಾರ್ಥಿ ಸಂಘದೊಂದಿಗೆ, ವಿದ್ಯಾ ವಿಕಾಸ ಸಮಿತಿ, ಎಸ್ ಡಿ ಎಂ ಸಿ ಸಮಿತಿಯೊಂದಿಗೆ ಮುನ್ನಡೆಯುತ್ತಿದ್ದು, ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಇಂಗ್ಲಿಷ್ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಇದೀಗ ಈ ವರ್ಷದಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ಶಿಕ್ಷಣವನ್ನು ಪ್ರಾರಂಭಿಸಲು ನುರಿತ ಅಧ್ಯಾಪಕರ ಸಂಯೋಜನೆಯ ಸಕಲ ಸೌಕರ್ಯದೊಂದಿಗೆ ವಿದ್ಯಾರ್ಥಿಗಳನ್ನು ತನ್ನತ್ತ ಬರ ಮಾಡಲು ಸಿದ್ಧತೆ ಮಾಡುತ್ತಿದೆ.ಸುತ್ತಮುತ್ತಲಿನ ಊರಿನ ವಿದ್ಯಾರ್ಥಿಗಳು ಈ ಪ್ರಯೋಜನನ್ನು ಪಡೆದಕೊಳ್ಳಬೇಕಾಗಿ ವಿನಂತಿ.















