ನಿಟ್ಟೆಯಿಂದ ಬೆಂಗಳೂರಿಗೆ ಟೆಂಪೋ ಚಲಾಯಿಸುತ್ತಿದ್ದ ಮೊಹಮ್ಮದ್ ಶಬೀಬ್ ಎಂಬಾತನಿಗೆ ಮಹಮ್ಮದ್ ಹುಸೈನ್ ಮತ್ತು ಶಿಯನ್ ಎಂಬವರು ಟೆಂಪೋವನ್ನು ಹಿಂಬಾಲಿಸಿಕೊಂಡು ಹಾನಿಗೊಳಿಸಿ, ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಕಾರ್ಕಳದ ದೂಪದಕಟ್ಟೆ ಬಳಿ ನಡೆದಿದೆ.
ಮೊಹಮ್ಮದ್ ಶಬೀಬ್ ತನ್ನ ಸಹೋದರನೊಂದಿಗೆ ನಿಟ್ಟೆಯಿಂದ ಬೆಂಗಳೂರಿಗೆ ಟೆಂಪೋ ಚಲಾಯಿಸುತ್ತಿದ್ದ ವೇಳೆ ಮಹಮ್ಮದ್ ಹುನೈಸ್ ಎಂಬಾತನು ಅನೀಸ್ ಮತ್ತು ಶಿಯಾನ್ ಎಂಬವರೊಂದಿಗೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಹೊಡೆಯುತ್ತೇನೆಂದು ಬ್ಯಾಟ್ ತೋರಿಸಿದ್ದಾರೆ. ಈ ವೇಳೆ ಭಯದಿಂದ ಶಬೀಬ್ ಟೆಂಪೋವನ್ನು ತಿರುಗಿಸಿ ಮರಳುವಾಗ ಆರೋಪಿಗಳು ಕಾರನ್ನು ಟೆಂಪೋಗೆ ಡಿಕ್ಕಿಗೊಳಿಸಿ, ವಾಹನದ ಗಾಜನ್ನು ಹಾನಿಗೊಳಿಸುವುದಲ್ಲದೆ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















