ಕೆ.ಎಮ್. ಇ.ಎಸ್ ಸಂಸ್ಥೆಯಲ್ಲಿ ಕಾಲೇಜಿನ ಪೂರ್ವ ವಿದ್ಯಾರ್ಥಿ ಅಭಿಶೇಕ್ ಮಡಿವಾಳ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಇವರು ತಾನು ಕಾಲೇಜಿಗಾಗಿ ಕೊಡುಗೆ ನೀಡಿದ ವಾಲಿಬಾಲ್ ಸ್ಪೈಕ್ ಪ್ರಾಕ್ಟೀಸ್ ಮೆಶಿನ್ನನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಧಾಟಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣರಾವ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪಾಟ್ಕರ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲೊಲಿಟ ಡಿ’ ಸಿಲ್ವಾ, ದೈಹಿಕ ಶಿಕ್ಷಣ ಶಿಕ್ಷಕಾರಾದ ಸತಿಶ್ಚಂದ್ರ ಹೆಗ್ಡೆ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಗೆ ಉತ್ತಮ ಕೊಡುಗೆ ನೀಡಿರುವ ಅಭಿಶೇಕ್ ಮಡಿವಾಳರನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಇಮ್ತಿಯಾಜ್ ಸರ್ ರವರು ಪ್ರಶಂಸಿದ್ದಾರೆ.






















