Sunday, October 4, 2026
Google search engine
Homeಕಾರ್ಕಳಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ, ಕುಪ್ಮಾ (ರಿ.) ಉತ್ತಮ...

ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ, ಕುಪ್ಮಾ (ರಿ.) ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಉಡುಪಿ ಜಿಲ್ಲಾ ಸಮಿತಿ, ಕುಪ್ಮಾ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಸಮಾರಂಭ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾನಗರದಲ್ಲಿ ನಡೆಯಿತು.

ಆಯ್ಕೆಗೊಂಡ ಐವರು ಉಪನ್ಯಾಸಕರುಗಳಾದ ರೇಶ್ಮಾ ಫೆರ್ನಾಂಡೀಸ್ – ಸೆಂಟ್ ಮೇರೀಸ್ ಕಾಂಪೋಸಿಟ್ ಪದವಿಪೂರ್ವ ಕಾಲೇಜು, ಕುಂದಾಪುರ, ಸ್ಮಿತಾಲ್ ಪದ್ಮಜಾ – ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಸುಣ್ಣಾರಿ, ಸೌಜನ್ಯಾ ಹೆಗ್ಡೆ – ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕಾರ್ಕಳ, ಶಕುಂತಲಾ ಪಾಲನ್-ವಿದ್ಯೋದಯ ಶಿಕ್ಷಣ ಸಂಸ್ಥೆ ಉಡುಪಿ, ಲತಾ ಪೈ-ವೆಂಕಟರಮಣ ಶಿಕ್ಷಣ ಸಂಸ್ಥೆ ಕುಂದಾಪುರ ಇವರಿಗೆ ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ರಾಜ್ಯ ಕುಪ್ಮಾ ಕಾರ್ಯದರ್ಶಿಗಳಾದ ಪ್ರೊ. ನರೇಂದ್ರ ಎಲ್. ನಾಯಕ್ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕುಪ್ಮಾ ಕರ್ನಾಟಕ ರಾಜ್ಯ ಗೌರವಾಧ್ಯಕ್ಷ ಡಾ. ಕೆ. ಸಿ. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಕೆ. ರಾಧಾಕೃಷ್ಣ ಶೆಣೈ, ಗೌರವಾಧ್ಯಕ್ಷರು ಕುಪ್ಮಾ ಕರ್ನಾಟಕ ರಾಜ್ಯ, ಕರ್ನಾಟಕ ರಾಜ್ಯ ಕುಪ್ಮಾ ಉಪಾಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ , ಡಾ. ಮಂಜುನಾಥ್ ಎಸ್. ರೇವಣ್ಕರ್ ಕಾರ್ಯದರ್ಶಿಗಳು, ಕುಪ್ಮಾ ಮಂಗಳೂರು ಜಿಲ್ಲೆ ಉಪಸ್ಥಿತರಿದ್ದರು.

ಕುಷ್ಮಾ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಷ್ಮಾ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಅಶ್ವತ್ ಎಸ್. ಎಲ್ ವಂದಿಸಿದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಸಂಗೀತ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments