Sunday, October 4, 2026
Google search engine
Homeಕಾರ್ಕಳಮಾತಾಪಿತರನ್ನು ವೃದ್ಧಾಶ್ರಮಕ್ಕೆ ಸೇರಿಸದಿರಿ: ಜಗದೀಶ ಮಲ್ಯ

ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಸೇರಿಸದಿರಿ: ಜಗದೀಶ ಮಲ್ಯ

ಜಿಎಸ್ ಬಿ ಸಮಾಜದ ಅರ್ಹರಿಗೆ ಕಾರ್ಕಳ ಹೊಸಸಂಜೆ ಬಳಗದಿಂದ 6.50 ಲಕ್ಷ ರೂಪಾಯಿ ವಿತರಣೆ

ವಿದ್ಯಾರ್ಥಿ ದೆಸೆಯಲ್ಲಿಯೇ ಭಾರತೀಯ ಸಂಸ್ಕೃತಿ ಸಂಸ್ಕಾರ, ಆಚಾರ ವಿಚಾರ , ಉತ್ತಮ ನಡವಳಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು , ಸುಸಂಸ್ಕೃತ ಚಿಂತನೆ , ಸಾತ್ವಿಕ ದಿನಚರಿ ಆರ್ಜಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ. ಮಕ್ಕಳು ಸ್ವಾವಲಂಬಿಯಾದ ಬಳಿಕ ಮಾತಾಪಿತರನ್ನು ಪ್ರೀತಿ ವಾತ್ಸಲ್ಯ ಮಮತೆಯಿಂದ ನೋಡಿಕೊಳ್ಳುವುದು ಅವರ ಆದ್ಯ ಕರ್ತವ್ಯ.ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ,

ಸಾಕಿ ಸಲಹಿದ ತಂದೆ ತಾಯಿಯನ್ನು ಎಂದಿಗೂ ವೃದ್ಧಾಶ್ರಮಗಳಿಗೆ ಸೇರಿಸಬಾರದು ” ಎಂದು ಕಾರ್ಕಳ ವಾತ್ಸಲ್ಯ ಸೇವಾ ಟ್ರಸ್ಟ್ ಸಂಚಾಲಕ, ಉದ್ಯಮಿ ಜಗದೀಶ ಮಲ್ಯ ಹೇಳಿದ್ದಾರೆ. ಅವರು ಕಾರ್ಕಳ ಕಾಶೀ ಮಠ ಸಭಾಭವನದಲ್ಲಿ , ಹೊಸಸಂಜೆ ಬಳಗದ ವತಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಆರ್ಥಿಕ ದುರ್ಬಲರಿಗೆ, ಅನಾರೋಗ್ಯಪೀಡಿತರಿಗೆ 6.50 ಲಕ್ಷ ರೂಪಾಯಿ ನೆರವು ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉದ್ಯಮಿಗಳಾದ ಗಣೇಶ ಕಾಮತ್, ಕಮಲಾಕ್ಷ ನಾಯಕ್ ಜಾರ್ಕಳ , ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ ಕಾಮತ್ , ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕ ತಂತ್ರಿ ಗುರುದತ್ ಭಟ್ , ಖ್ಯಾತ ವೈದ್ಯ ಡಾ .ಕಾರ್ತಿಕ್ ರಾವ್ , ಜಿ ಎಸ್ ಬಿ ಸಭಾ ಅಧ್ಯಕ್ಷ ನಾರಾಯಣ ನಾಯಕ್, ಸುಬ್ರಾಯ ಕಾಮತ್ ಬಂಟ್ವಾಳ , ಸಮಾಜಸೇವಕ ವಿಶ್ವನಾಥ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿಶ್ರಾಂತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ದೇವಿಪ್ರಸಾದ್ ಶೆಣೈ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ವಿಘ್ನೇಶ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಸೌಭಾಗ್ಯ ಎಸ್. ಕಿಣಿ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments