ಸಾಣೂರು ಯೂನಿಯನ್ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಂಬಿಸಿ ಮಹಿಳೆಗೆ ೫ ಲಕ್ಷದ ೧೯ ಸಾವಿರ ನಗದು ದೋಚಿರುವ ಘಟನೆ ನಡೆದಿದೆ.
ಮಹಿಳೆಗೆ ಯಾರೋ ಅಪರಿಚಿತರು ಕರೆ ಮಾಡಿ ಸಾಣೂರು ಯೂನಿಯನ್ ಬ್ಯಾಂಕ್ ನಿಂದ ಮಾತನಾಡುತ್ತಿರುವುದಾಗಿ ಹೇಳಿ ಕೆವೈಸಿ ನವೀಕೃತಗೊಳಿಸಲಿದೆ ಎಂದು ಖಾತೆ ಸಂಖ್ಯೆ ಕೇಳಿದ್ದಾರೆ. ಈ ವೇಳೆ ಖಾತೆ ಸಂಖ್ಯೆ ನನಗೆ ನೆನಪಿಲ್ಲ ಎಂದಾಗ ಡೆಬಿಟ್ ಕಾರ್ಡ್ ಸಂಖ್ಯೆ ಹೇಳುವಂತೆ ತಿಳಿಸಿದ್ದಾರೆ. ಮಹಿಳೆ ನಿಜವಾಗಿಯೂ ಬ್ಯಾಂಕ್ ಸಿಬ್ಬಂದಿಯಿಂದಲೇ ಕರೆ ಬಂದಿದೆ ಎಂದು ಭಾವಿಸಿ ಡೆಬಿಟ್ ಕಾರ್ಡ್ ನಂಬರ್ ಕೊಟ್ಟಿದ್ದಾರೆ. ಬಳಿಕ ವ್ಯಕ್ತಿ ಪುನಃ ಕರೆ ಮಾಡಿ ಕೆವೈಸಿ ನವೀಕೃತಗೊಂಡಿದೆ ಎಂದು ಸುಳ್ಳು ಹೇಳಿದ್ದಾನೆ. ಇದಾದ ಬಳಿಕ ಮಹಿಳೆಯ ಖಾತೆಯಿಂದ ೫,೧೯,೦೦೦ ರೂ. ಹಣ ಕಡಿತಗೊಂಡಿದೆ. ಅಪರಿಚಿತ ವ್ಯಕ್ತಿ ಈ ಮೂಲಕ ಮಹಿಳೆಯ ಹಣ ದೋಚುವುದರಲ್ಲಿ ಯಶಸ್ವಿಯಾಗಿದ್ದಾನೆ.
ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.