Home Blog Page 88

ಕಾರ್ಕಳ: ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕ್ರೈಸ್ಟ್ ಕಿಂಗ್ ನ ಕಿಯೋರಾ ಪಾಯಸ್ ಸತತ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ

0

ಕಾರ್ಕಳ: ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕ್ರೈಸ್ಟ್ ಕಿಂಗ್ ನ ಕಿಯೋರಾ ಪಾಯಸ್ ಸತತ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ, ಕರ್ನಾಟಕ ಸರಕಾರ ಹಾಗೂ ಎಮ್.ಜಿ.ಎಮ್ ಪದವಿಪೂರ್ವ ಕಾಲೇಜು ಉಡುಪಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ನ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣ ಜ್ಯ ವಿಭಾಗದ ವಿದ್ಯಾರ್ಥಿನಿ ಕಿಯೋರಾ ಪಾಯಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆಯ ಪಂದ್ಯಾಟದಲ್ಲಿ ಕಿಯೋರಾ ಪಾಯಸ್ ಸತತ ಮೂರನೇ ಬಾರಿಗೆ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾದ ಹೆಗ್ಗಳಿಕೆ ಪಡೆದುಕೊಂಡoತಾಗಿದೆ.

ಕಾರ್ಕಳ-ಪಳ್ಳಿ-ಉಡುಪಿ ಮಾರ್ಗದಲ್ಲಿ ಸರಕಾರಿ ಬಸ್ಸಿಗೆ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಮನವಿ

0

ಕಾರ್ಕಳ-ಪಳ್ಳಿ-ಉಡುಪಿ ಮಾರ್ಗದಲ್ಲಿ ಸರಕಾರಿ ಬಸ್ಸಿಗೆ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಮನವಿ

ಉಡುಪಿ- ಮೂಡುಬೆಳ್ಳೆ- ಪಳ್ಳಿ – ಕುಂಟಾಡಿ – ಕಾರ್ಕಳ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆ, ಕಾಲೇಜು ಹಾಗು ಆಫೀಸು ಪ್ರಾರಂಭ ಹಾಗು ಬಿಡುವ ಸಮಯಕ್ಕೆ ಸರಿಯಾಗಿ ಸರಕಾರಿ ಬಸ್ಸುಗಳನ್ನು ಓಡಿಸಲು NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಮನವಿ ಮಾಡಿದ್ದಾರೆ.ಇದರಿಂದ ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಇದರ ಬಗ್ಗೆ ಸಾರಿಗೆ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರಿಗೆ ಮನವಿ ಮಾಡಿದ್ದು ಅವರು ಹೆಚ್ಚಿನ ಮುತುವರ್ಜಿ ವಹಿಸಿ ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಲ್ಲಿ ಶ್ರಮಿಸುತ್ತಾರೆ ಎಂದು ನಂಬಿಕೆ ಇದೆ ಹಾಗು ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆಯವರ ಗಮನಕ್ಕೆ ಕೂಡ ತಂದಿದ್ದೇನೆ. ಸರಕಾರಿ ಬಸ್ಸು ಬರುವುದರಿಂದ ಆ ಭಾಗದ ಹೆಣ್ಣು ಮಕ್ಕಳಿಗೆ, ವಿದ್ಯಾರ್ಥಿನಿಯರಿಗೆ ಹಾಗು ಮಹಿಳೆಯರಿಗೆ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಕೂಡ ಪಡೆಯಬಹುದು.ಆ ಭಾಗದ ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಆರ್ಥಿಕ ಬೆಂಬಲ ಸಿಕ್ಕಿದಂತಾಗುತ್ತದೆ.

ಪಡುಬಿದ್ರಿ – ನಿಟ್ಟೆ – ಕಾರ್ಕಳ ಮಾರ್ಗದಲ್ಲಿ ಸರಕಾರಿ ಬಸ್ಸು ಓಡಿಸುವ ಸಾರಿಗೆ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ವಿದ್ಯಾರ್ಥಿ ಸಂಘಟನೆಗಳ ಮನವಿಗೆ ಸ್ಪಂದಿಸಿ, ಕಾರ್ಕಳದ ತಹಸೀಲ್ದಾರ್ ಮುತುವರ್ಜಿ ವಹಿಸಿ, ಆದಷ್ಟು ಬೇಗ ಕಾರ್ಯಗತ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯವೈಖರಿ ಮೆಚ್ಚುವಂಥದ್ದು. ಇದಕ್ಕೆ ರಾಜ್ಯ ಸರಕಾರ, ಸಂಬಂಧ ಪಟ್ಟ ಇಲಾಖೆ ಹಾಗು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಮುನಿಯಾಲು:ಮಣ್ಣಿನ ಜಿಡ್ಡೆಗೆ ಡಿಕ್ಕಿ ಹೊಡೆದ ಕಾರು,ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು

0

ಮುನಿಯಾಲು:ಮಣ್ಣಿನ ಜಿಡ್ಡೆಗೆ ಡಿಕ್ಕಿ ಹೊಡೆದ ಕಾರು,ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು

ಮುನಿಯಾಲಿನಲ್ಲಿ ಇಂದು ಮುಂಜಾನೆ ಗದಗದಿಂದ ಪುತ್ತೂರಿಗೆ ಪ್ರಯಾಣ ಮಾಡುತ್ತಿದ್ದ ಮಾರುತಿ ವ್ಯಾಗನರ್ ಕಾರ್ ಒಂದು ರಸ್ತೆಯ ಬದಿಯ ಮಣ್ಣಿನ ಜಿಡ್ಡೆಗೆ ಹೊಡೆದು ಅದರಲ್ಲಿ ಪ್ರಯಾಣ ಮಾಡುತಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿ ಕಾರು ಜಖಂಗೊಂಡಿದೆ.

ಅಜೆಕಾರು:ಎಟಿಎಂ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅಪರಿಚಿತರಿಂದ ವಂಚನೆ!

0

ಅಜೆಕಾರು:ಎಟಿಎಂ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅಪರಿಚಿತರಿಬ್ಬರು ವಂಚನೆ ಮಾಡಿರುವ ಘಟನೆ ಅಜೆಕಾರಿನಲ್ಲಿ ವರದಿಯಾಗಿದೆ.

ಘಟನೆ ವಿವರ:ಮೇರಿ ಹೆನ್ರಿ ಡಿಸೋಜಾರವರು Equitas small Finance Bank Limited ನಲ್ಲಿ ಬ್ಯಾಂಕ್‌ ಖಾತೆಯನ್ನು ಹೊಂದಿದ್ದು ಸೆ.16ರಂದು ಸಂಜೆ ಅವರ ಪತಿ ಹೆನ್ರಿ ಡಿಸೋಜರವರು ಎಟಿಎಂ ನಿಂದ ಹಣ ಡ್ರಾ ಮಾಡಿಕೊಳ್ಳಲು ಅಜೆಕಾರು ಕರ್ನಾಟಕ ಬ್ಯಾಂಕ್‌ ಎಟಿಎಂಗೆ ಬಂದಿದ್ದು ಅಲ್ಲಿ ಇದ್ದ ಇಬ್ಬರು ಅಪರಿಚಿತರು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್‌ ನ್ನು ಪಡೆದು ಪಿನ್‌ ನಂಬರ್‌ ತಿಳಿದುಕೊಂಡು ಹೆನ್ರಿ ಡಿಸೋಜರವರವರಿಗೆ ತಿಳಿಯದಂತೆ ಎಟಿಎಂಕಾರ್ಡ್‌ ನ್ನು ಬದಲಾವಣೆ ಮಾಡಿ ಹಣ ಬರುತ್ತಿಲ್ಲ ಎಂದು ಹೇಳಿ ಬೇರೆ ಎಟಿಎಂಕಾರ್ಡ್‌ ನ್ನು ವಾಪಾಸ್‌ ನೀಡಿದ್ದಾರೆ.

ನಂತರ ಅರೋಪಿಗಳು ಕಾರ್ಕಳ ಬ್ಯಾಂಕ್‌ ಆಫ್‌ ಬರೋಡಾ ಎಟಿಎಂನಿಂದ ಮೇರಿ ಹೆನ್ರಿ ಡಿಸೋಜಾರವರ ಬ್ಯಾಂಕ್‌ ಖಾತೆಯಿಂದ ಎಟಿಎಂ ಕಾರ್ಡ್‌ ಬಳಸಿ ತಲಾ 10 ಸಾವಿರದಂತೆ 10 ಬಾರಿ ಒಟ್ಟು 1 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡಿದ್ದಾರೆ.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

#ATM #ATMFraudinkarkala #ATMfraudinajekar

ಕಾರ್ಕಳದ ಸ್ವರ್ಣ ಸಹಕಾರ ಸಂಘದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಪಿಗ್ಮಿ, ಉಳಿತಾಯ, ಆರ್ ಡಿ, ಸಾಲ ಮಾಹಿತಿ ಇನ್ಮುಂದೆ ಮೊಬೈಲ್ ನಲ್ಲೇ ಲಭ್ಯ

0

ಕಾರ್ಕಳದ ಸ್ವರ್ಣ ಸಹಕಾರ ಸಂಘದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಪಿಗ್ಮಿ, ಉಳಿತಾಯ, ಆರ್ ಡಿ, ಸಾಲ ಮಾಹಿತಿ ಇನ್ಮುಂದೆ ಮೊಬೈಲ್ ನಲ್ಲೇ ಲಭ್ಯ

ಭಾರತದ ಎಲ್ಲ ಬ್ಯಾಂಕುಗಳು ಸಂಪೂರ್ಣ ಡಿಜಿಟಲೀಕರಣಗೊಂಡು ಗ್ರಾಹಕರಿಗೆ ಉತ್ತಮ ವಿಶ್ವಾಸರ್ಹ ಸೇವೆಗಳನ್ನು ನೀಡುತ್ತಿವೆ. ಗ್ರಾಹಕರು ತಮ್ಮ ಖಾತೆಗಳ ಎಲ್ಲಾ ವಿವರಗಳನ್ನು ತಮ್ಮ ಮೊಬೈಲ್‌ ಮೂಲಕ ಪಡೆದುಕೊಳ್ಳುತ್ತಾರೆ. ಈ ಆನ್‌ಲೈನ್‌ ಸೇವೆಗಳನ್ನು ನೀಡುವ ಸಾಪ್ಟ್‌ವೇರ್‌ ಅಭಿವೃದ್ದಿ ಪಡಿಸಲು ಬ್ಯಾಂಕುಗಳು ಐಟಿ ಕಂಪನಿಗಳಿಗೆ ಕೋಟ್ಯಾಂತರ ಹಣವನ್ನು ಸುರಿಯುತ್ತವೆ. ಜೊತೆಗೆ ಸರ್ವರ್‌ಗಳಿಗಾಗಿ ತಿಂಗಳು ತಿಂಗಳು ಕರ್ಚಾಗುತ್ತದೆ. ಹಣಕಾಸು ವ್ಯವಹಾರದಲ್ಲಿ ಭಾರತದಲ್ಲಿ ಸಹಕಾರಿ ಸಂಘಗಳ ಪಾಲು ಕೂಡಾ ಬಹಳಷ್ಟಿದೆ. ಕೆಲವು ಊರುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಸಹಕಾರಿ ಸಂಸ್ಥೆಯ ವ್ಯವಹಾರ ಹೆಚ್ಚಿರುತ್ತದೆ.

ಆದರೆ ಸಹಕಾರಿ ಸಂಸ್ಥೆಗಳು ತಮ್ಮ ಸದಸ್ಯರಿಗೆ/ಗ್ರಾಹಕರಿಗೆ ಆನ್‌ ಲೈನ್‌ ಸೇವೆಗಳನ್ನು ಮತ್ತು ಮೊಬೈಲ್‌ ಸೇವೆಗಳನ್ನು ನೀಡಲು ಇನ್ನೂ ಶಕ್ತವಾಗಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಸಂಪನ್ಮೂಲದ ಕೊರತೆ. ಗ್ರಾಹಕರು ತಮ್ಮ ಖಾತೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಪಡೆಯಬೇಕಾದರೆ ಸಹಕಾರ ಸಂಘವನ್ನು ಸಂಪರ್ಕಿಸಲೇಬೇಕು. ಈ ಕಾರಣದಿಂದ ಕೆಲವು ಸಲ ಗ್ರಾಹಕರಿಗೆ ವಂಚನೆ ಕೂಡಾ ನಡೆಯುತ್ತದೆ. ಈ ಎಲ್ಲ ವಿಷಯಗಳನ್ನು ಮನಗಂಡ ಕಾರ್ಕಳದ ಸಾಪ್ಟ್‌ವೇರ್‌ ತಂತ್ರಜ್ಞ ಸತೀಶ್‌ ಪೂಜಾರಿ ಮತ್ತವರ ತಂಡ ಒಂದು ಹೊಸ ತಂತ್ರಜ್ಞಾನವನ್ನು ತಯಾರಿಸಿದೆ. ಅದುವೆ “ಯೂನಿಗ್ಸ್”‌ (UNIGS) ಅಂದರೆ ಯೂನಿಫೈಡ್‌ ಇನ್ಫಾರ್ಮೇಶನ್‌ ಗೇಟ್‌ವೇ ಸಿಸ್ಟಂ. ತಮ್ಮ ನೂತನ ಸಂಸ್ಥೆ “INBI NextGen Innovations Private Limited”ನ ಮೂಲಕ ಈ ತಂತ್ರಜ್ಞಾನವನ್ನು ಅವಿಷ್ಕರಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಮೊಬೈಲ್‌ ಆಪ್‌ ಮೂಲಕ ಬಹಳಷ್ಟು ಸೇವೆಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳ ರೀತಿಯಲ್ಲಿ ಒದಗಿಸಲು ಸಾಧ್ಯವಾಗಲಿದೆ.

ಸದಸ್ಯರು ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲಿ “ಯೂನಿಗ್ಸ್”‌ ಆಪ್‌ ಅಳವಡಿಸಿಕೊಂಡು ಸಹಕಾರ ಸಂಸ್ಥೆಯಲ್ಲಿರುವ ತಮ್ಮ ಉಳಿತಾಯ/ಪಿಗ್ಮಿ/ಆರ್.ಡಿ/ಸಾಲ ಮುಂತಾದ ಖಾತೆಗಳ ಎಲ್ಲಾ ವಿವರವನ್ನು ಪಡೆಯಬಹುದು. ತಮ್ಮ ಸಾಲ ಅಥವಾ ಪಿಗ್ಮಿ ಖಾತೆಗೆ ತಮ್ಮ ಮೊಬೈಲ್‌ನಿಂದಲೇ ಹಣ ಜಮಾ ಮಾಡಬಹುದು. ತಮ್ಮ ಸಾಲದ ಕಂತನ್ನು ಕಟ್ಟುವ ದಿನವನ್ನು ಈ ಆಪ್‌ ನೆನಪಿಸುತ್ತದೆ.‌ ಈ ಆಪ್‌ ಆಂಗ್ಲ ಮತ್ತು ಸ್ಥಳೀಯ ಭಾಷೆಯಲ್ಲಿ ಲಭ್ಯವಿದೆ. ಆದುದರಿಂದ ಇಂಗ್ಲೀಷ್‌ ಬರದವರು ಕೂಡಾ ಇದನ್ನು ಯಾವುದೇ ಕಷ್ಟವಿಲ್ಲದೆ ಬಳಸಬಹುದು. ವಿಶೇಷವೆಂದರೆ ಯೂನಿಗ್ಸ್ ತಂತ್ರಜ್ಞಾನದೊಂದಿಗೆ ಸಹಯೋಗ ಹೊಂದಲು ಸಹಕಾರಿ ಸಂಸ್ಥೆಗಳಿಗೆ ಯಾವುದೇ ಖರ್ಚು ಇಲ್ಲ. ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಈ ತಂತ್ರಜ್ಞಾನದ ಮೊದಲ ಅಳವಡಿಕೆ ಮತ್ತು ಲೋಕಾರ್ಪಣೆ ಮುಂದಿನ ಭಾನುವಾರ ಕಾರ್ಕಳದ ಜೋಡುಕಟ್ಟೆಯ “ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ (ನಿ.)” ಇಲ್ಲಿ ನಡೆಯಲಿದೆ.

ಸತೀಶ್‌ ಪೂಜಾರಿಯವರು ಕಳೆದ ಇಪ್ಪತ್ತಾರು ವರ್ಷಗಳಿಂದ ಸಾಪ್ಟ್‌ ವೇರ್‌ ಕ್ಷೇತ್ರದಲ್ಲಿದ್ದಾರೆ. ಬಹುರಾಷ್ಟ್ರ ಕಂಪನಿಯಲ್ಲದೆ ಸ್ಥಳೀಯ ಸಣ್ಣ ಸಣ್ಣ ಕಂಪನಿ ಕೂಡಾ ಹೊಸ ಹೊಸ ಅವಿಷ್ಕಾಗಳನ್ನು ಮಾಡಿ ಸ್ಥಳೀಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕೆನ್ನುವುದು ಅವರ ಬಯಕೆ. “ದೊಡ್ಡ ದೊಡ್ಡ ನಗರಗಳಿಗೆ ಹೋಗುವ ದಾರಿಯೇ ನಗರದಿಂದ ಹಳ್ಳಿಗೆ ಹೋಗಲು ಕೂಡಾ ಇರುವುದು” ಅನ್ನುವುದು ಅವರ ವಾದ. ಬಹುರಾಷ್ಟ್ರ ಕಾರ್ಪೊರೇಟ್‌ ಕಂಪನಿಗಳು ತಂತ್ರಜ್ಞಾನದ ಮೂಲಕ ದೊಡ್ಡ ದೊಡ್ಡ ಉಧ್ಯಮಗಳ ಮೇಲೆ ತಮ್ಮ ಪ್ರಭುತ್ವವನ್ನು ಹೊಂದಿದ್ದಾರೆ. ಅವರಿಗೆ ಸ್ಪರ್ಧೆ ಒಡ್ಡಲು ಸ್ಥಳೀಯ ಉಧ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಸಾಧ್ಯವಿಲ್ಲ. ಹಾಗಾಗಬಾರದು, ಸ್ಥಳೀಯ ಮತ್ತು ಸಣ್ಣ ಉಧ್ಯಮಿಗಳು ಆಧುನಿಕ ತಂತ್ರಜ್ಞಾನವನ್ನು ಯಾವುದೇ ಹೊರೆಯಾಗದಂತೆ ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಸೇವೆ ನೀಡುವಂತಾಗಿ ಆಧುನಿಕ ಜಗತ್ತಿನ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗಬೇಕೆನ್ನುವುದು ಸತೀಶ್‌ ಅವರ ಆಶಯ. ತಮ್ಮ ಹೊಸ ಸಂಸ್ಥೆಯ ಮೂಲಕ ಈ ರೀತಿಯ ಇನ್ನೂ ಹಲವು ಹೊಸ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸುರೇಂದ್ರ ಶೆಟ್ಟಿಯವರನ್ನು ನೇಮಕ

0

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಕೋಟೇಶ್ವರದ ಸುರೇಂದ್ರ ಶೆಟ್ಟಿಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಒಟ್ಟು 9 ಮಂದಿಯನ್ನು ವ್ಯವಸ್ಥಾಪನಾ ಸಮಿತಿಗೆ ಸರಕಾರಆಯ್ಕೆ ಮಾಡಿದೆ.

ಸುರೇಂದ್ರ ಶೆಟ್ಟಿಯವರು ಕಾರ್ಕಳ ಹಿರಿಯoಗಡಿ ನಿವಾಸಿ ಆಗಿದ್ದು ಕೋಟೇಶ್ವರದಲ್ಲಿ ತನ್ನ ಉದ್ಯಮವನ್ನು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಅವರು ಕುಂದಾಪುರದಲ್ಲಿ ಉದ್ಯಮ ನಡೆಸುತ್ತಿದ್ದಾರೆ.

ಕಾರ್ಕಳ ಶಿವತಿಕೆರೆ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದರು.

ಶಿಲ್ಪಿ ಕೃಷ್ಣ ನಾಯ್ಕ್‌ ಮೂರ್ತಿ ಮಾಡಬಾರದು ಎಂದಾದರೆ ಕಳಪೆ ಕಾಮಗಾರಿ ಮಾಡಿ ಒಪ್ಪಿಕೊಂಡಿರುವ ಮಾನ್ಯ ಉದಯ್‌ ಕುಮಾರ್‌ ಶೆಟ್ಟಿಯವರೇ ಸರ್ಕಾರದ ಯಾವುದೇ ಕಾಮಗಾರಿ ಮಾಡಲು ನೀವು ಅರ್ಹರಲ್ಲ-ಮಹಾವೀರ ಹೆಗ್ಡೆ.

0
ಶಿಲ್ಪಿ ಕೃಷ್ಣ ನಾಯ್ಕ್‌ ಮೂರ್ತಿ ಮಾಡಬಾರದು ಎಂದಾದರೆ ಕಳಪೆ ಕಾಮಗಾರಿ ಮಾಡಿ ಒಪ್ಪಿಕೊಂಡಿರುವ ಮಾನ್ಯ ಉದಯ್‌ ಕುಮಾರ್‌ ಶೆಟ್ಟಿಯವರೇ ಸರ್ಕಾರದ ಯಾವುದೇ ಕಾಮಗಾರಿ ಮಾಡಲು ನೀವು ಅರ್ಹರಲ್ಲ-ಮಹಾವೀರ ಹೆಗ್ಡೆ.
ಕಾರ್ಕಳ:ಸೆ.19-ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳಿ ತಗಾದೆ ಮಾಡುತ್ತಿರುವ ಉದಯ್‌ ಕುಮಾರ್‌ ಶೆಟ್ಟಿಯವರೇ, ಪರಶುರಾಮನ ಮೂರ್ತಿ ಮಾಡುವ ಶಿಲ್ಪಿ GST ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೂರ್ತಿಯ ನಿರ್ಮಾಣ ಕೆಲಸ ಮಾಡಬಾರದು ಎಂದಾದರೆ, ಸರ್ಕಾರದ ಗುತ್ತಿಗೆದಾರರಾದ ನೀವು ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿ ಕಳಪೆ ಕಾಮಗಾರಿಯ ಸರದಾರ ಎಂದೇ ಪ್ರಸಿದ್ಧಿ ಪಡೆದವರು. ಅದರಲ್ಲೂ ಒಮ್ಮೆ ನಿಮ್ಮ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು ಎಂಬ ಬಗ್ಗೆ ಸುದ್ಧಿಯು ಕೇಳಿ ಬಂದಿತ್ತು. ಅಂತಹ ಕುಖ್ಯಾತಿ ಹೊಂದಿರುವ ನೀವು, ಮತ್ತೆ ಸರ್ಕಾರದ ಕಾಮಗಾರಿಗಳನ್ನು ನಿರ್ವಹಿಸಬಹುದೇ…? ಈ ರಾಜ್ಯದಲ್ಲಿ ಕೃಷ್ಣ ನಾಯ್ಕ್‌ಗೆ ಒಂದು ಕಾನೂನು, ನಿಮಗೊಂದು ಕಾನೂನು ಇದೆಯೆ? ಎಂದು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಉಪಾಧ್ಯಕ್ಷ  ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್‌ ವಿಷಯದಲ್ಲಿ ಆರಂಭದಿಂದಲೂ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿದಿರಿ
ಪರಶುರಾಮನ ಮೂರ್ತಿಯ ಮೇಲ್ಭಾಗವನ್ನು ಕದ್ದು-ಮುಚ್ಚಿ ಕೊಂಡೊಯ್ಯಲಾಗಿದೆ ಎಂದು ಯಾಕೆ ಜನರಿಗೆ ಪದೇ ಪದೇ ಸುಳ್ಳು ಹೇಳುತ್ತೀರಿ…? ಮೂರ್ತಿಯ ಭಾಗವನ್ನು ಪೊಲೀಸು ಇಲಾಖೆಯ ಸುಪರ್ದಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೆಗೆಯಲಾಗಿದ್ದು ನಿಮಗೂ ಗೊತ್ತಿದೆ. ಈ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲೆ ಸಮೇತ ಚರ್ಚೆ ಆಗಿದೆ. ಆದರೂ ಕೂಡ ನೀವು ಮೂರ್ತಿ ಕಳವಾಗಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತೀರಿ. ಮೂರ್ತಿ ಪ್ಲಾಸ್ಟಿಕ್‌-ಫೈಬರ್‌ ಎಂದು ಊರೆಲ್ಲಾ ಹೇಳಿದ ನೀವು ಕೋರ್ಟ್‌ನಲ್ಲಿ ಮಾತ್ರ ಪ್ಲಾಸ್ಟಿಕ್‌-ಫೈಬರ್‌ ಅಲ್ಲ ಎಂದು ಒಪ್ಪಿಕೊಂಡಿರುತ್ತೀರಿ. ನಿಮಗೆ ಈ ತರಹ ಸುಳ್ಳು ಹೇಳಲು ನಾಚಿಕೆ ಆಗುವುದಿಲ್ಲವೇ..? ನೀವೊಬ್ಬ ಸರಣಿ ಸುಳ್ಳುಗಾರ ಎಂದು ಖ್ಯಾತಿ ಪಡೆದವರು. ಹೀಗೆಯೆ ಸುಳ್ಳು ಹೇಳುತ್ತಾ ಹೋದರೆ, ನಿಮ್ಮ ಬಗ್ಗೆ ಮಹಾ ಸುಳ್ಳುಗಾರ ಎಂಬ ಪ್ರಬಂಧವನ್ನೇ ಮಂಡಿಸಬಹುದು.
ಕಣ್ಣಿಗೆ ಅಂಟಿದ ರಾಜಕೀಯ ಪೊರೆಯನ್ನು ಕಳಚಿ ಕಾರ್ಕಳದ ಅಭಿವೃದ್ಧಿಯನ್ನು ನೋಡಿ
ಕಾರ್ಕಳದ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ತನ್ನ ಶಾಸಕತ್ವ ಅವಧಿಯಲ್ಲಿ ರಾಜ್ಯದಲ್ಲಿ ತನ್ನ ಸರ್ಕಾರ ಇರಲಿ, ಇಲ್ಲದಿರಲಿ, ಇಡೀ ಕ್ಷೇತ್ರದಲ್ಲಿ ಬರಪೂರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದು ಕೇವಲ ರಸ್ತೆ ಕಾಮಗಾರಿಗಳಿಗೆ ಸೀಮಿತವಾಗದೇ, ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಕಳ ಅಭಿವೃದ್ಧಿ ಆಗುವಂತೆ ನೋಡಿಕೊಂಡವರು. ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಉದ್ಯಮ, ಪ್ರವಾಸೋದ್ಯಮ, ರಸ್ತೆ, ಸೇತುವೆ, ನೀರಾವರಿ ಅಷ್ಟೇ ಅಲ್ಲದೇ, ಸರ್ಕಾರದ ಅನುದಾನವನ್ನು ಅವಲಂಬಿಸದೇ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕೆರೆಗಳ ಅಭಿವೃದ್ಧಿ, ಉದ್ಯೋಗ ಮೇಳ, ಕೋವಿಡ್‌ ಸಂದರ್ಭದಲ್ಲಿ ಕ್ವಾರಂಟೈನ್‌ ಕೇಂದ್ರ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಹಾಗೂ ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದವರು. ಇದೆಲ್ಲವನ್ನೂ ಕಣ್ಣಾರೆ ನೋಡಿಯೂ ನೀವು ಕಾರ್ಕಳದಲ್ಲಿ ಅಭಿವೃದ್ಧಿ ಆಗಿಯೇ ಇಲ್ಲ, ಸುನಿಲ್‌ ಕುಮಾರ್‌ ಕೊಡುಗೆ ಕಾರ್ಕಳಕ್ಕೆ ಏನೂ ಇಲ್ಲ ಹೇಳುತ್ತೀರಲ್ಲಾ, ನೀವು ಕಾರ್ಕಳದಲ್ಲಿ ಚುನಾವಣೆ ಬಂದಾಗ ಮಾತ್ರ ಓಡಾಡುತ್ತೀರಿ. ಹಾಗಾಗಿ ನಿಮ್ಮ ಕಣ್ಣಿಗಂಟಿರುವ ರಾಜಕೀಯ ಪೊರೆಯನ್ನು ಕಳಚಿ ಕಾರ್ಕಳದ ಅಭಿವೃದ್ಧಿಯನ್ನು ಒಮ್ಮೆ ನೋಡಿ.
ಸುನಿಲ್‌ ಕುಮಾರ್‌ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ನೈತಿಕತೆ ನಿಮಗಿಲ್ಲ
ನಮ್ಮ ಶಾಸಕರಾದ ಸುನಿಲ್‌ ಕುಮಾರ್ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ನೀವು ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಅಪಹಾಸ್ಯ ಮಾಡಿದಿರಿ. ಚುನಾವಣೆ ಸಂಧರ್ಭ ಮಸೀದಿಗೆ ತೆರಳಿ  ಅಲಲಿಯ ಮುಖಂಡರೊಂದಿಗೆ ಚರ್ಚಿಸುತ್ತಾ ಮಸೀದಿ ಕಟ್ಟಿಸಿ ಕೊಡುವ ಭರವಸೆ ಕೊಟ್ಟಿದ್ದು ಅಲ್ಲದೆ ಈ ವಿಡಿಯೋ ವೈರಲ್‌ ಮಾಡಬೇಡಿ ಎಂದು ಹೇಳಿದ ನಿಮಗೆ ಹಿಂದುತ್ವವಾದಿ ಸುನಿಲ್‌ ಕುಮಾರ್‌ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆಯೂ ಇಲ್ಲ.
ಗೆದ್ದ ಎತ್ತಿನ ಬಾಲ ಹಿಡಿಯುವ ಪ್ರವೃತ್ತಿ
ಮಾನ್ಯ ಉದಯ್‌ ಕುಮಾರ್‌ ಶೆಟ್ಟಿ ನೀವು ಈಗಲಾದರೂ ಸುಳ್ಳು ಹೇಳುವುದನ್ನು ಬಿಡಿ, ಜನ ನಿಮ್ಮ ಈ ಎಲ್ಲಾ ವರ್ತನೆಗಳನ್ನು ಗಮನಿಸುತ್ತಾ ಇದ್ದಾರೆ. ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಓಡಾಡುವ ನಿಮ್ಮ ಪ್ರವೃತ್ತಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನತೆ ಕಣ್ಣಾರೆ ಕಂಡಿದ್ದಾರೆ. ಮುಂದೊಂದು ದಿನ ನಿಮ್ಮ ಸುಳ್ಳಿಗೆ, ಇಂತಹ ಅಸಂಬದ್ಧ ಹೇಳಿಕೆಗಳಿಗೆ, ಕಾರ್ಕಳದ ಪ್ರವಾಸೋದ್ಯಮವನ್ನು ಹಾಳು ಮಾಡಿ ಕಾರ್ಕಳದ ಹೆಸರಿಗೆ ಮಸಿ ಬಳಿದು ಅದರ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿರುವ ನಿಮಗೆ ಕಾರ್ಕಳದ ಪ್ರಬುದ್ಧ ಜನತೆಯೇ ಉತ್ತರಿಸುತ್ತಾರೆ ಎಂದಿದ್ದಾರೆ.

ಕಾರ್ಕಳ:ಕ್ರಿಕೆಟ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ನ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

0

ಕ್ರೈಸ್ಟ್ ಕಿಂಗ್: ಕ್ರಿಕೆಟ್ ಪಂದ್ಯಾಟದಲ್ಲಿ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್ ಉಡುಪಿ ಇವರ ಆಶ್ರಯದಲ್ಲಿ ಎಸ್.ಎಂ.ಎಸ್ ಪ್ರೌಢಶಾಲೆ ಬ್ರಹ್ಮಾವರ ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ತಂಡವನ್ನು ಪ್ರತಿನಿಧಿಸಿದ್ದ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿಯ ಮನನ್ ವಿ ಜೈನ್, ತನ್ಮಯ್ ಯು ಶೆಟ್ಟಿ, ಏಳನೇ ತರಗತಿಯ ವಿನೀತ್ ಪೂಜಾರಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.

ನಾರಾವಿ:ಮಹಾ ಚಂಡಿಕಾ ಯಾಗ-ಪೋಸ್ಟರ್ ಬಿಡುಗಡೆ

0

ನಾರಾವಿ:ಮಹಾ ಚಂಡಿಕಾ ಯಾಗ – ಪೋಸ್ಟರ್ ಬಿಡುಗಡೆ

ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆಯಲಿರುವ ಮಹಾ ಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ ಸೆ.22ರಂದು ರವಿವಾರ ಬೆಳಗ್ಗೆ 9-30 ಕ್ಕೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿನಡೆಯಲಿದೆ.

 

ಕಡ್ತಲ ಗ್ರಾಮ ಪಂಚಾಯತ್ ಸದಸ್ಯ ಅರವಿಂದ ಹೆಗ್ಡೆ ನಿಧನ

0

ಕಡ್ತಲ ಗ್ರಾಮ ಪಂಚಾಯತ್ ಸದಸ್ಯ ಅರವಿಂದ ಹೆಗ್ಡೆ ನಿಧನ

ಕುಕ್ಕುಜೆ – ದೊಂಡೇರಂಗಡಿ ನಿವಾಸಿ, ಕಡ್ತಲ ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ ಹೆಗ್ಡೆ ( 58 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.18ರಂದು  ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ತಾಯಿ, ಇಬ್ಬರು ಸಹೋದರರು, ಒಬ್ಬರು ಸಹೋದರಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇವರು ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಯಶಸ್ವಿ ಗೆಳೆಯರ ಬಳಗದ ಕಾರ್ಯದರ್ಶಿಯಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.