Home Blog Page 7

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ 26-27ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ ಆಯ್ಕೆ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ 26ನೇ ಮತ್ತು 27ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ ಅವರು ಅವಿರೋಧವಾಗಿ ಸಂಘದ 25ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸಂಚಾಲಕರಾಗಿ ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ಸ್ಥಾಪಕಾಧ್ಯಕ್ಷರಾಗಿ ವಿಠಲ ಮೂಲ್ಯ, ಗೌರವಾಧ್ಯಕ್ಷರಾಗಿ ರಾಜು ಶೆಟ್ಟಿ ಕುಂಟಲಗುಂಡಿ, ನಿಕಟ ಪೂರ್ವಾಧ್ಯಕ್ಷರಾಗಿ ದಿನೇಶ್ ಪೂಜಾರಿ ಬೀರೊಟ್ಟು, ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರ್ಯ ಬೋಳ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ ಕೆಮ್ಮಣ್ಣು, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷರಾಗಿ ಕೀರ್ತನ್ ಪೂಜಾರಿ, ಗೌರವಾಧ್ಯಕ್ಷರಾಗಿ ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷರಾಗಿ ಅಶ್ವಿನಿ ಬೋಳ, ಕಾರ್ಯದರ್ಶಿಯಾಗಿ ಶ್ರದ್ಧಾ ಪೂಜಾರಿ, ಅಬ್ಬನಡ್ಕ ಚೆಂಡೆ ಬಳಗದ ಅಧ್ಯಕ್ಷರಾಗಿ ಯೋಗೀಶ್ ಆಚಾರ್ಯ ಬೋಳ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷರಾಗಿ ಪುಷ್ಪ ಕುಲಾಲ್, ಕಾರ್ಯದರ್ಶಿಯಾಗಿ ಅಶ್ವಿನಿ ಪ್ರಭಾಕರ್ ಆಯ್ಕೆಯಾಗಿದ್ದಾರೆ.

ಕ್ರೈಸ್ಟ್ ಕಿಂಗ್: ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ರಾಧಾನಾಯಕ್ ಸರಕಾರಿ ಪ್ರೌಢಶಾಲೆ, ಎಣ್ಣೆಹೊಳೆ, ಕಾರ್ಕಳ ಇಲ್ಲಿ ನಡೆದ 14ರ ವಯೋಮಿತಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅಭಿಷ್ 400 ಮೀ ಓಟ ಮತ್ತು 80ಮೀ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ, ಸ್ಮಿತಿ ಶೆಟ್ಟಿ ಎತ್ತರ ಜಿಗಿತ ದ್ವಿತೀಯ, ಸುದೀಕ್ಷಾ ಚಕ್ರ ಎಸೆತ ದ್ವಿತೀಯ, 6ನೇ ತರಗತಿಯ ತ್ರಿಷ್ಮಾ 200 ಮೀ ದ್ವಿತೀಯ ಸ್ಥಾನ ಪಡೆದುಕೊಂಡು ತಾಲುಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಬಾಲಕರ 400×100 ರಿಲೇಯಲ್ಲಿ ಎಂಟನೇ ತರಗತಿಯ ಅಭಿಷ್, ಆ್ಯಶ್ಲಿನ್, ಏಳನೇ ತರಗತಿಯ ಪ್ರಸ್ತುತ್ ಮತ್ತು ಆಯುಷ್ ದ್ವಿತೀಯ ಸ್ಥಾನ, ಬಾಲಕಿಯರ 400×100 ರಿಲೇಯಲ್ಲಿ ಎಂಟನೇ ತರಗತಿಯ ಹಿಝ್ಮಾ, ದ್ವಿತಿ, 7ನೇ ತರಗತಿಯ ಹ್ಯಾಷಲ್, ತ್ರಿಷ್ಮಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡ ಜಿಹಾದಿಗಳ ಬಗ್ಗೆ ಮಾತನಾಡುವ ಧಮ್ ಕಾಂಗ್ರೆಸಿಗಿಲ್ಲ

0

 

ಆರ್.ಎಸ್.ಎಸ್. ಕುರಿತು ಶುಭದ ರಾವ್ ಟೀಕೆ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಆಕ್ರೋಶ

ಜಿಹಾದಿ ಮನಸ್ತಿತಿ ಸಂಘಟನೆಗಳಿಗೆ ಬೆಂಬಲ ಕೊಟ್ಟು ರಾಷ್ಟ್ರೀಯ ಚಿಂತನೆಯ ಸಂಘಟನೆಗೆ ವಿರೋಧ ಮಾಡುವುದು ಕಾಂಗ್ರೆಸ್ ಸಿದ್ಧಾಂತ. ಇದೇ ಮಾನಸಿಕತೆಯಲ್ಲಿ ಇರುವ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರ ನಾಲಗೆಯಿಂದ ದೇಶಪ್ರೇಮಿ ಸಂಘಟನೆ ಆರ್.ಎಸ್.ಎಸ್ ಕುರಿತು ಲಘು ಮಾತುಗಳು ಹೊರಬಿದ್ದಿದೆ.

ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡವರ ಬಗ್ಗೆ ಮಾತನಾಡಲು ಧಮ್ ಇಲ್ಲದ ಇವರ ಕಣ್ಣಿಗೆ ಆರೆಸ್ಸೆಸ್ ನ ಲಾಠಿ, ಹಿಂಸೆಗೆ ಪ್ರಚೋದಕವಾಗಿ ಕಂಡಿರುವುದು ದುರಾದೃಷ್ಟಕರ ಎಂದಿದೆ. ಭಕ್ತಿ ಆಧರಿಸುವ ಮತ್ತು ಶಕ್ತಿ ಆರಾಧಿಸುವ ದೇಶ ಭಾರತ. ಅದೇ ಆಧಾರದಲ್ಲಿ ಪ್ರತಿ ವ್ಯಕ್ತಿಯಲ್ಲಿ ದೇಶ ಭಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ದೈಹಿಕ, ಮಾನಸಿಕ ಶಕ್ತಿ-ಸಾಮಥ್ರ್ಯವನ್ನು ಬೆಳೆಸುವ ಕಾರ್ಯದಲ್ಲಿ ಆರೆಸ್ಸೆಸ್ ಶತ ವರ್ಷಗಳಿಂದ ತೊಡಗಿಸಿಕೊಂಡಿದೆ. ನಮ್ಮ ದೇವರು-ದೇವತೆಗಳ ಕೈಯಲ್ಲಿರುವ ಆಯುಧಗಳು ಶಕ್ತಿಯ ಸಂಕೇತ. ಶಿಷ್ಟರ ರಕ್ಷಣೆ, ದುಷ್ಟರ ದಮನದ ಸೂಚಕವೂ ಹೌದು. ಆ ಶಕ್ತಿ ಸಂಕೇತಗಳು ನಮ್ಮ ಆತ್ಮಶಕ್ತಿ ಬೆಳೆಸುವುದಕ್ಕೂ ಕಾರಣ ಆಗುತ್ತವೆ. ಇದೆಲ್ಲದರ ಸಂಜ್ಞೆ ಅಥವಾ ಸಂಕೇತ ನಮ್ಮ ರಕ್ಷಣೆಯೇ ಹೊರತು ಬೇರೆಯವರ ಮೇಲೆ ದಾಳಿ ಮಾಡುವ ಉದ್ದೇಶವಲ್ಲ. ಆರೆಸ್ಸೆಸ್ ಸ್ವಯಂಸೇವಕರು ಬಳಸುವ ಲಾಠಿ ಕೂಡ ಆತ್ಮಸ್ಥೈರ್ಯ ಹೆಚ್ಚಿಸುವ, ಆತ್ಮರಕ್ಷಣೆ ಮಾಡುವ ಕಲೆಯನ್ನು ಕಲಿಸುವ ಉದ್ದೇಶವೇ ಹೊರತು ದೊಂಬಿ ಮಾಡುವ ಉದ್ದೇಶದ್ದಲ್ಲ, ನೂರು ವರ್ಷದಲ್ಲಿ ಅಂತಹ ಒಂದೇ ಒಂದು ಉದಾಹರಣೆಯೂ ದೇಶದಲ್ಲಿ ಸಿಗುವುದಿಲ್ಲ. ಇದನ್ನು ಕುಹಕವಾಡುವ ಹೀನ ಮನೊಭಾವ ಕಾಂಗ್ರೆಸಿನದ್ದು.

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಸೇವಾದಳ ಸಂಘಟನೆ ಆರಂಭಿಸಿದ್ದಕ್ಕೂ ಆರೆಸ್ಸೆಸ್ ಮಾದರಿ ಆಗಿತ್ತು. ಆದರೆ ಇಂದು ಅದೇ ಸೇವಾ ದಳದ ಕತೆ ಏನಾಗಿದೆ? ಎಂಬುದನ್ನು ಶುಭದ ರಾವ್ ಸಹಿತ ಕಾಂಗ್ರೆಸ್ ನಾಯಕರು ಮೊದಲು ಅರಿತು ಬಳಿಕ ಆರ್ ಎಸ್ ಎಸ್ ಬಗ್ಗೆ ಮಾತಾಡಲಿ. ಆರೆಸ್ಸೆಸ್ ದೂಷಿಸುವವರು, ನಿರ್ಭಂಧಿಸಲು ಹವಣಿಸುವವರು ಆ ಬಗ್ಗೆ ಯೋಚನೆ ಮಾಡುವುದು ಒಳಿತು ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರ್ಸಿಂಗ್ ಕಾಲೇಜು ಸಮಸ್ಯೆಗೆ ಶಾಸಕ ಸುನಿಲ್ ಕುಮಾರ್ ನೇರ ಹೊಣೆ

0

ಶಾಸಕರ ನಿರ್ಲಕ್ಷದ ಫಲವಾಗಿ ವಿದ್ಯಾರ್ಥಿಗಳು ಬೀದಿಗೆ ಬಂದಿದ್ದಾರೆ: ಶುಭದ್ ರಾವ್

ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ನರ್ಸಿಂಗ್ ಕಾಲೇಜಿನ ಅವ್ಯವಸ್ಥೆಗೆ ಕಾಲೇಜಿನ ವಿದ್ಯಾರ್ಥಿಗಳು ಇಂದು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಶಾಸಕ ಸುನಿಲ್ ಕುಮಾರ್ ಅವರೇ ನೇರ ಹೊಣೆಯಾಗಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.

ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಚಾರದ ಹುಚ್ಚಿನಿಂದ ಯಾವುದೇ ಅನುದಾನವನ್ನು ಮೀಸಲಿಡದೆಯೆ ಕೇವಲ ಕಾಟಾಚಾರಕ್ಕೆ ನರ್ಸಿಂಗ್ ಕಾಲೇಜನ್ನು ಉದ್ಘಾಟನೆ ಮಾಡಿದ ಫಲವಾಗಿ ಇವತ್ತು ಕಾಲೇಜಿನಲ್ಲಿ ಅವ್ಯವಸ್ಥೆ ತಲೆದೋರಿದ್ದು, ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಪ್ರತಿಭಟನೆ ನಡೆಸುವಂತಾಗಿದೆ.

ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಸಮಸ್ಯೆ, ಕಟ್ಟಡದ ಸಮಸ್ಯೆ, ಪೀಠೋಪಕರಣಗಳ ಸಮಸ್ಯೆ, ವೈಜ್ಞಾನಿಕ ಉಪಕರಣಗಳ ಸಮಸ್ಯೆ ಇದ್ದರೂ ಕೂಡ ಕೇವಲ ಚುನಾವಣೆಯ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿ ಸುನಿಲ್ ಕುಮಾರ್ ಅವರು ನರ್ಸಿಂಗ್ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ. ವಿದ್ಯಾರ್ಥಿ ಜೀವನದ ಅದ್ಯಯನದ ಅಮೂಲ್ಯ ಸಮಯದಲ್ಲಿ ತಮ್ಮ ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಚೆಲ್ಲಾಟವಾಡಿರುವುದಕ್ಕೆ ಶಾಸಕ ಸುನಿಲ್ ಕುಮಾರ್ ಅವರು ವಿದ್ಯಾರ್ಥಿಗಳ ಕ್ಷಮೆಯನ್ನು ಯಾಚಿಸಬೇಕು.

ಚುನಾವಣೆಯ ನಂತರವಾದರೂ ಶಾಸಕರು ಈ ಕುರಿತು ಜವಾಬ್ದಾರಿ ವಹಿಸಿ ನರ್ಸಿಂಗ್ ಕಾಲೇಜಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು, ತನ್ನ ಜವಾಬ್ದಾರಿಯನ್ನು ಮರೆತ ಸುನೀಲ್ ಕುಮಾರ್ ಕೇವಲ ರಾಜಕೀಯ ಹೇಳಿಕೆಗಳನ್ನು ನೀಡುತ್ತಾ ವ್ಯರ್ಥ ಕಾಲಹರಣ ಮಾಡಿದ್ದಾರೆ, ಈಗ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿಯ ವಿದ್ಯಾರ್ಥಿ ಘಟಕದ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆ.

ತನ್ನ ರಾಜಕೀಯಕ್ಕಾಗಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡುವುದನ್ನು ಬಿಟ್ಟು ಮಾನ್ಯ ಮುಖ್ಯಮಂತ್ರಿಯವರನ್ನು, ಮಾನ್ಯ ಆರೋಗ್ಯ ಸಚಿವರ ಬೆನ್ನು ಬಿದ್ದು ಕಾರ್ಕಳ ನರ್ಸಿಂಗ್ ಕಾಲೇಜಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವುಲ್ಲಿ ಶಾಸಕ ಸುನೀಲ್ ಕುಮಾರ್ ಮುಂದಾಗಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಹೇಳಿಕೆಯಲ್ಲಿ ‌ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಪುಸ್ತಕಗಳಿಗೆ ವಿಶೇಷ ರಿಯಾಯಿತಿ ಮಾರಾಟ

0

 

ಕನ್ನಡ ರಾಜ್ಯೋತ್ಸವದ ಶುಭಾವಸರದಲ್ಲಿ ಕನ್ನಡ ಸಂಸ್ಕೃತಿಯ ಪ್ರಚಾರ ಹಾಗೂ ಓದುಗರಲ್ಲಿ ಪುಸ್ತಕಾಭಿರುಚಿ ಬೆಳೆಸುವ ಉದ್ದೇಶದಿಂದ ಕಾರ್ಕಳ ಹಾಗೂ ಮೂಡುಬಿದಿರೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ವಿಶೇಷ ರಿಯಾಯಿತಿಯಲ್ಲಿ ಪುಸ್ತಕ ಮಾರಾಟ ಮೇಳ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಸಾಹಿತ್ಯ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ನೂರಾರು ಪುಸ್ತಕಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಕನ್ನಡ ಸಾಹಿತ್ಯ ಕ್ಷೇತ್ರದ ಮಹನೀಯರ ಕೃತಿಗಳ ಜೊತೆಗೆ ಯುವ ಲೇಖಕರ ಹೊಸ ಕೃತಿಗಳು, ಹೊಸ ಪ್ರಕಾಶನಗಳು ಹಾಗೂ ಜನಪ್ರಿಯ ಪುಸ್ತಕಗಳು ಈ ಮೇಳದ ಆಕರ್ಷಣೆಯಾಗಿದೆ. 10% ನಿಂದ 50%ನ ವರೆಗೆ ರಿಯಾಯಿತಿ ಸಿಗಲಿದೆ.

ಈ ವಿಶೇಷ ಮೇಳವು ನ.1 ರಿಂದ 9 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 9.00 ರಿಂದ ಸಂಜೆ 9.00ರ ವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಎಲ್ಲಾ ಪುಸ್ತಕ ಪ್ರೇಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಾಶಕರು ಕೋರಿದ್ದಾರೆ.
ಕನ್ನಡದ ನಾಡು ನುಡಿ ಮತ್ತು ನಂಬಿಕೆಗೆ ಬೆಂಬಲವಾಗಿ ಪುಸ್ತಕ ಓದುವುದನ್ನು ಅಭ್ಯಾಸವನ್ನಾಗಿಸೋಣ ಎಂಬುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +919606474289

ಕಾರ್ಕಳ ಜ್ಞಾನಸುಧಾ : ಎನ್.ಎಸ್.ಎಸ್ ಎಸ್ ಶಿಬಿರ ಉದ್ಘಾಟನೆ

0

ಕಾರ್ಕಳ ಜ್ಞಾನಸುಧಾ : ಎನ್.ಎಸ್.ಎಸ್ ಎಸ್ ಶಿಬಿರ ಉದ್ಘಾಟನೆ

ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್ ಸಹಕಾರಿ – ಸಂತೋಷ್ ನೆಲ್ಲಿಕಾರು

ವಿದ್ಯಾರ್ಥಿ ಜೀವನದಲ್ಲಿ ಸಮುದಾಯ ಪ್ರಜ್ಞೆಯನ್ನು ಬೆಳೆಸಿಕೊಂಡು ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗಿ, ತನ್ನ ವ್ಯಕ್ತಿತ್ವದ ವಿಕಸನದೊಂದಿಗೆ ಜೀವನವನ್ನು ಪ್ರಕಾಶಗೊಳಿಸುವ ಮೌಲ್ಯಯುತ ಯೋಜನೆ ರಾ.ಸೇ.ಯೋ ಆಗಿದೆ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಹೇಳಿದರು.

ಮಡಿಬೆಟ್ಟು ಅನುದಾನಿತ ಹಿ.ಪ್ರಾ.ಶಾಲೆ ಕಣಜಾರಿನಲ್ಲಿ ನಡೆಯುತ್ತಿರುವ ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ರಾ.ಸೇ.ಯೋ.ಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು ಮಾತನಾಡಿ, ಈ ಶಿಬಿರದಲ್ಲಿ ಕಳೆದ ಅನುಭವಗಳು ಜೀವಮಾನವಿಡಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.

ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟಿನ ಟ್ರಸ್ಟಿಯವರಾದ ವಿಕ್ರಂ ಹೆಗ್ಡೆಯವರು ಮಾತನಾಡಿ, ಶಿಬಿರವು ಮೌಲ್ಯಯುತ ಜೀವನಕ್ಕೆ ದಾರಿ ಮಾಡಿ ಕೊಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ತೆರೆದಿದೆ. ಇದರ ಸದುಪಯೋಗವನ್ನು ಶಿಬಿರಾರ್ಥಿ ಪಡೆದುಕೊಂಡಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನೀರೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭುಗಳು ಧ್ವಜಾರೋಹಣವನ್ನು ನೆರೆವೇರಿಸಿದರು.

ಮುಖ್ಯ ಅತಿಥಿಗಳಾಗಿ ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಿ.ಎ. ಚಂದನ್ ಹೆಗ್ಡೆ, ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಕೆಂಜೂರು ಶಶಿಧರ್ ಶೆಟ್ಟಿ, ಕುಕ್ಕೂಂದೂರಿನ ಉದ್ಯಮಿಗಳಾದ ತ್ರಿವಿಕ್ರಮ ಕಿಣಿ, ಉದ್ಯಮಿಗಳಾದ ದೇವೇಂದ್ರ ನಾಯಕ್, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ರವಿ ಜಿ., ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಸಾಹಿತ್ಯ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಶೈಲೇಶ್ ಶೆಟ್ಟಿಯವರು ಸ್ವಾಗತಿಸಿ, ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯರಾದ ಅಶ್ವತ್ಥ್ ಭಾರದ್ವಾಜ್ ಕೆ. ವಂದಿಸಿ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಯುತ್ ರೆಡ್‌ಕ್ರಾಸ್ ಘಟಕದ ವತಿಯಿಂದ ಪ್ರಥಮ ಚಿಕಿತ್ಸೆ ಕಾರ್ಯಕ್ರಮ

0

 

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಯುತ್ ರೆಡ್‌ಕ್ರಾಸ್ ಘಟಕದ ವತಿಯಿಂದ ಪ್ರಥಮ ಚಿಕಿತ್ಸೆ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ| ಕಾವ್ಯ.ಟಿ ಆಗಮಿಸಿ, ವಿದ್ಯಾರ್ಥಿನಿಯರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಗೀತಾ. ಜಿ ಯವರು ವಹಿಸಿದ್ದರು.

ರೆಡ್‌ಕ್ರಾಸ್ ಯೋಜನಾಧಿಕಾರಿ ಕು.ಸೋನಾ ಇವರು ಸ್ವಾಗತಿಸಿದರು. ವೇದಿಕೆಯಲ್ಲಿ ರೆಡ್‌ಕ್ರಾಸ್ ನಾಯಕಿಯರಾದ ಅನನ್ಯ, ಲಾವಣ್ಯ ಉಪಸ್ಥಿತರಿದ್ದರು. ಕು. ನಯನ ವಂದಿಸಿ, ಕು. ಅಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

0

 

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಅ.29 ರಂದು ಒಳಕಾಡು ಪ್ರೌಢಶಾಲೆಯಲ್ಲಿ ನಡೆದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಗ್ರಾಮೀಣ ರಸಪ್ರಶ್ನೆ ಸ್ಪರ್ದೆಯಲ್ಲಿ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅವನಿ ಆರ್. ಶೆಟ್ಟಿ ವಿಜೇತರಾಗಿ ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸ್ಪರ್ಧೆಯಲ್ಲಿ ಪಾಲ್ಗೊಂಡು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಗೆ ಶಾಲಾ ಸಂಚಾಲಕರಾದ ವಂದನೀಯ ಗುರು, ಹೆನ್ರಿ ಮಸ್ಕರೇನಸ್, ಮುಖ್ಯ ಶಿಕ್ಷಕಿ, ರೇಷ್ಮಾ ಶೀಲಾ ರೋಡ್ರಿಗಸ್, ಶಿಕ್ಷಕ -ಶಿಕ್ಷಕೇತರ ವರ್ಗದವರು, ಪೋಷಕ ಪ್ರತಿನಿಧಿ ಹಾಗೂ ಪೋಷಕವರ್ಗದವರೆಲ್ಲರೂ ಶುಭ ಹಾರೈಸಿದ್ದಾರೆ.

ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ-ಪಾಲಕರ ಸಭೆ

0

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಕರ – ಪಾಲಕರ ಸಭೆಯನ್ನು ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಜೀವನ ಮೌಲ್ಯಗಳನ್ನು ಕುರಿತು ನಡೆದ ಕಾರ್ಯಕ್ರಮವು ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಯಿತು.

ಸಹಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ ‘ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶಿಕ್ಷಣ ಸಂಸ್ಥೆ, ಪೋಷಕರು ಮತ್ತು ಶಿಕ್ಷಕರ ತ್ರಿಕೋನ ಸಹಕಾರ ಅತ್ಯವಶ್ಯಕ’ ಎಂದು ಹೇಳಿದರು.

ಅಶ್ವತ್ ಎಸ್.ಎಲ್ ರವರು ‘ಶಿಕ್ಷಕರು ಮತ್ತು ಪಾಲಕರು ಇಬ್ಬರು ಒಂದೇ ಹಾದಿಯಲ್ಲಿ ನಡೆದು ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದಾಗ, ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾ ಕ್ರಿಯೇಟಿವ್ ನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಗಳನ್ನು ನೀಡಿದರು.

ಡಾ. ಬಿ. ಗಣನಾಥ ಶೆಟ್ಟಿ ರವರು ಮಾತನಾಡುತ್ತಾ ‘ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು, ಶ್ರದ್ಧೆ ಮತ್ತು ಶ್ರಮದಿಂದ ಓದುತ್ತ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕು’ ಎಂದು ಕರೆ ನೀಡಿದರು.

ಗಣಪತಿ ಭಟ್ ಕೆ.ಎಸ್ ರವರು ಸಮಗ್ರ ಶೈಕ್ಷಣಿಕ ವಿವರಗಳನ್ನು ನೀಡಿ, ಶಿಕ್ಷಣ ಜೀವನಕ್ಕೆ ಬೆಳಕಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು, ಉಪನ್ಯಾಸಕ- ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಶ್ರೀಮತಿ ಸ್ಮಿತಾ ಹಾಗೂ ಪ್ರಿಯಾಂಕ ತೀರ್ಥರಾಮ್ ರವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು.

A1 ಸೂಪರ್ ಮಾರ್ಟ್ ಕಾರ್ಕಳ: ನೂತನ ಶಾಖೆ ಉದ್ಘಾಟನೆಯ ಅಂಗವಾಗಿ ನಡೆಸಿದ ಬಿಗ್ ವಿನ್ ಲಕ್ಕಿ ಡ್ರಾದಲ್ಲಿ ವಿಜೇತರಾದ ಗ್ರಾಹಕಿಗೆ ಬಹುಮಾನ ವಿತರಣೆ

0

ಕಾರ್ಕಳದ ಪ್ರತಿಷ್ಠಿತ ಮಳಿಗೆ A1 ಸೂಪರ್ ಮಾರ್ಟ್ ನಲ್ಲಿ ನೂತನ ಮಳಿಗೆ ಉದ್ಘಾಟನೆಯ ಅಂಗವಾಗಿ ಜುಲೈ 25 ರಿಂದ 31 ರವರೆಗೆ ನಡೆಸಿದ ಲಕ್ಕಿ ಡ್ರಾ ಕಾರ್ಯಕ್ರಮದ ಫಲಿತಾಂಶ ಬಿಡುಗಡೆಗೊಂಡಿದೆ.

ಲಕ್ಕಿ ಡ್ರಾ ಕೂಪನ್ ಸಂಖ್ಯೆ 105ಕ್ಕೆ ಅದೃಷ್ಟ ಲಕ್ಷ್ಮಿ ಒಳಿದಿದ್ದು, ವಿಜೇತರ ಮನೆಗೆ ವಾಷಿಂಗ್ ಮಿಷನ್ ಉಡುಗೊರೆಯಾಗಿ ತಲುಪಿದೆ.

ಕಾರ್ಕಳದಲ್ಲಿರುವ A1 ಮಳಿಗೆಯಲ್ಲಿ ಅ. 26 ರಂದು ನಡೆದ ಡ್ರಾ ಫಲಿತಾಂಶದಲ್ಲಿ ವಿಜೇತ ಗ್ರಾಹಕರಾಗಿ ಸುರೇಖಾ ಅವರು ವಾಷಿಂಗ್ ಮಿಷನ್ ಅನ್ನು ಬಹುಮಾನವಾಗಿ ಪಡೆದಿದ್ದಾರೆ