ಕಾರ್ಕಳದ ಮಾಜಿ ಶಾಸಕ ದಿವಂಗತ ಹೆಬ್ರಿ ಗೋಪಾಲ ಭಂಡಾರಿ ಅವರ ಪ್ರಥಮ ಪುತ್ರ 48 ರ ಸುದೀಪ್ ಭಂಡಾರಿ ಅವರು ಬ್ರಹ್ಮಾವರದ ಬಾರ್ಕೂರಿನಲ್ಲಿ ಅಕ್ಟೋಬರ್ 14ರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದಲ್ಲಿ ಹಲವು ಸಂಶಯ ಮೂಡಿದ್ದು ಸಮಗ್ರ ತನಿಖೆಯನ್ನು ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದೆ.
ಶೀಘ್ರ ತನಿಖೆ ನಡೆಸುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ಹೆಬ್ರಿಯ ಮುಖಂಡ ನೀರೆ ಕೃಷ್ಣ ಶೆಟ್ಟಿಯವರು ಮನವಿ ಸಲ್ಲಿಸಿದ್ದಾರೆ.
ಹೆಬ್ರಿ ಗೋಪಾಲ ಭಂಡಾರಿ ಅವರ ಪ್ರಥಮ ಪುತ್ರನ ಸಾವು ಗೋಪಾಲ ಭಂಡಾರಿಯವರ ಅಭಿಮಾನಿಗೆ ಅತ್ಯಂತ ನೋವು ತಂದಿದೆ. ಅವರ ಕುಟುಂಬ, ಆತ್ಮೀಯರು ಹಾಗೂ ಸಂಬಂಧಿಗಳಿಗೆ ಚಿಂತೆ ಹಾಗೂ ಅಘಾತವಾಗಿದೆ. ಸುದೀಪ್ ಭಂಡಾರಿಯವರ ಮೊಬೈಲ್ ಎಲ್ಲಾ ಸಂಪರ್ಕಗಳ ವಿವಿಧ ಮೂಲಗಳನ್ನು ಸಮಗ್ರ ತನಿಖೆ ನಡೆಸಬೇಕು, ಆತ್ಮಹತ್ಯೆಗೆ ಕಾರಣ ಮತ್ತು ಕಾರಣರಾದವರನ್ನು ಪತ್ತೆ ಮಾಡಿ ಹೆಬ್ರಿ ಗೋಪಾಲ ಭಂಡಾರಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ ನೀರೆ ಕೃಷ್ಣ ಶೆಟ್ಟಿಯವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಿಟ್ಟೆ: ಯುನೈಟೆಡ್ ಸ್ಟೇಟ್ಸ್ನ ಪ್ರಮುಖ ಅಕೌಂಟಿಂಗ್ ಮತ್ತು ಸಲಹಾ ಸಂಸ್ಥೆಗಳಲ್ಲೊಂದಾದ ವಿಪ್ಫ್ಲಿ ಎಲ್ಎಲ್ಪಿ ಸಂಸ್ಥೆಯು ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಅಂಗಸಂಸ್ಥೆಗಳಾದ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು, ಮತ್ತು ಜಸ್ಟಿಸ್ ಕೆ.ಎಸ್.ಹೆಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳ ಅಭಿವೃದ್ಧಿ, ಅಧ್ಯಾಪಕರ ಸಬಲೀಕರಣ ಮತ್ತು ಉದ್ಯಮ-ಶೈಕ್ಷಣಿಕ ಸಿನರ್ಜಿಯ ಮೇಲೆ ಕೇಂದ್ರೀಕರಿಸಿದ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.
ಮೂವತ್ತು ಎನ್ಎಂಎಎಂಐಟಿ ವಿದ್ಯಾರ್ಥಿಗಳು ಒಂಬತ್ತು ವಿಪ್ಫ್ಲಿ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಇಂಟರ್ನ್ಶಿಪ್ ಯೋಜನೆಗಳನ್ನು ಕೈಗೊಂಡರು, 12 ಮಂದಿ ವಿದ್ಯಾರ್ಥಿಗಳು ವೇತನಯುತ ಇಂಟರ್ನ್ಶಿಪ್ಗಳನ್ನು ಪಡೆದರು ಮತ್ತು 5 ಮಂದಿ ಎಐ, ಎಂಎಲ್ ಮತ್ತು ಡೇಟಾ ಸೈನ್ಸ್ನಲ್ಲಿ ಪೂರ್ಣ ಸಮಯದ ಉದ್ಯೋಗವನ್ನು ಪಡೆದರು.
ಜನರೇಟಿವ್ ಎಐ, ಕ್ಲೌಡ್ ಕಂಪ್ಯೂಟಿಂಗ್, ಎಜೈಲ್ ಮೆಥಡಾಲಜಿ ಮತ್ತು ಯುಎಸ್ ತೆರಿಗೆ ಕುರಿತ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮಗಳು ಶೈಕ್ಷಣಿಕ-ಉದ್ಯಮ ಜೋಡಣೆಯನ್ನು ನಡೆಸಲಾಗಿದೆ.
ತನ್ನ ಸಿಎಸ್ಆರ್ ಉಪಕ್ರಮದ ಭಾಗವಾಗಿ, ವಿಪ್ಫ್ಲಿ ಸಂಸ್ಥೆಯು ನಿಟ್ಟೆ ಶಿಕ್ಷಣ ಸಂಸ್ಥೆಗಳ 56 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿತು. ಇದನ್ನು ವಿಪ್ಫ್ಲಿಯ ಪ್ರತಿಭಾ ಮತ್ತು ಸಂಸ್ಕೃತಿಯ ಮುಖ್ಯಸ್ಥ ರವೀಶ ರಾವ್ ಅವರು ವಿದ್ಯಾರ್ಥಿಗಳಿಗೆ ನೀಡಿದರು.
ಜೆಎಂಜೆ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ದೀಪಾವಳಿಗೆ ಭರ್ಜರಿ ಆಫರ್ ನೀಡುತ್ತಿದ್ದು, ಗ್ರಾಹಕರಿಗೆ ಹಲವು ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಗಳ ಮೇಲೆ ಭರ್ಜರಿ ರಿಯಾಯಿತಿಗಳ ಜೊತೆಗೆ ಆಕರ್ಷಕ ಉಡುಗೊರೆಗಳು ದೊರೆಯಲಿದೆ.
5 ವರ್ಷ ವಾರೆಂಟಿಯೊಂದಿಗೆ LED ಟಿವಿಗಳು, 4 ವರ್ಷಗಳ ಸಂಪೂರ್ಣ ವಾರೆಂಟಿಯೊಂದಿಗೆ ಫ್ರಿಡ್ಜ್ ಮತ್ತು ವಾಷಿಂಗ್ ಮಿಷನ್ ಸಿಗಲಿದೆ. ಅಲ್ಲದೆ ಕಾರ್ಲೊನ್ ಬೆಡ್ ಸೋಲಾರ್ ಗಳು ಆಕರ್ಷಕ EMI ದರದಲ್ಲಿ ಲಭ್ಯವಿರಲಿದೆ.
ವಿಶೇಷವಾಗಿ ಇಎಂಐ ಮೂಲಕ ಖರೀದಿ ಮಾಡುವವರಿಗೆ ಬಜಾಜ್ ಫೀನಾನ್ಸ್ ೦% ಬಡ್ಡಿ ರಿಯಾಯಿತಿ ಸಿಗಲಿದೆ. ಅಲ್ಲದೆ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಖರೀದಿಗೆ 20 ಸಾವಿರ ವರೆಗೂ ಕ್ಯಾಶ್ ಬ್ಯಾಕ್ ಸಿಗಲಿದೆ.
ಈ ಆಕರ್ಷಕ ಉಡುಗೊರೆಗಳು ಅ.14 ರಿಂದ ಅ.31 ರವರೆಗೆ ಇರಲಿದ್ದು, ಇಂದೇ ಭೇಟಿಕೊಡಿ ಜೆಎಂಜೆ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ಸಕೀನ್ ಪ್ಲಾಜಾ, ಮಂಗಳೂರು ರೋಡ್, ಕಾರ್ಕಳ Ph: 9845110840, 98448 96668 ಹಾಗೂ ಮರೀನಾ ಗ್ರೇಸ್ ಬಿಲ್ಡಿಂಗ್ ಶಿರ್ವ Ph: 9741311424, 84316 56326
ಕಾರ್ಕಳದ ಮಿಯ್ಯಾರಿನ ದೇಂದಬೆಟ್ಟು ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸುಡುಮದ್ದು ಸಂಗ್ರಹಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ ಪೊಲೀಸರು ವಿವಿಧ ಕಂಪೆನಿಗೆ ಸೇರಿದ ವಿವಿಧ ಬಗೆಯ 1 ಕೋಟಿಯ 34 ಲಕ್ಷದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟಾಕಿ ದಾಸ್ತಾನಿನ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಪೊಲೀಸ್ ಉಪನಿರೀಕ್ಷಕರು ತನ್ನ ತಂಡಗಳೊಂದಿಗೆ ದಾಳಿ ನಡೆಸಿ ಆರೋಪಿಗಳಾದ ಸತ್ಯೇಂದ್ರ ನಾಯಕ್, ಶೀಕಾಂತ್ ನಾಯಕ್, ರಮಾನಂದ್ ನಾಯಕ್ ನನ್ನು ಬಂಧಿಸುವುದರ ಜೊತೆಗೆ 1,34,05,266/- ರೂ. ಮೌಲ್ಯದ ಪಟಾಕಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಯಲು ಕಾರಣವಾಗುತ್ತೇವೆ. ಮಾನವ ಜೀವನದಲ್ಲಿ ರಕ್ತದಾನವೆಂಬ ಪುಣ್ಯಕಾರ್ಯದಲ್ಲಿ ನಾವು ಪಾಲ್ಗೊಳ್ಳಬೇಕು’ ಎಂದು ಲಯನ್ಸ್ ಜಿಲ್ಲೆ 317ಸಿ ಯ ಜಿಲ್ಲಾ 2ನೇ ವೈಸ್ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ಹರಿಪ್ರಸಾದ್ ರೈ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್ಕ್ರಾಸ್ ಸೊಸೈಟಿ, ೬ (ಕೆ.ಎ.ಆರ್) ನೇವಿ ಎನ್.ಸಿ.ಸಿ. ಸಬ್ಯುನಿಟ್ ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ರೋಟರಿಕ್ಲಬ್ ನಿಟ್ಟೆ, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಬಪ್ಪನಾಡು, ಹೆಚ್.ಡಿ.ಎಫ್.ಸಿ ಬ್ಯಾಂಕ್, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಅ.15 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
‘ನಿಟ್ಟೆ ತಾಂತ್ರಿಕ ಕಾಲೇಜಿನ ಈ ಯೋಜನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ. ಇಂತಹ ಶಿಬಿರಗಳು ಸಮಾಜದ ಆರೋಗ್ಯದತ್ತ ಗಮನ ಹರಿಸುವುದರ ಜೊತೆಗೆ ಯುವಕರಲ್ಲಿ ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗಿವೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ರಕ್ತದಾನ ಶಿಬಿರವು ಒಂದು ಉತ್ತಮ ಯೋಜನೆಯಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ ಬೆಂಬಲ ಅಗತ್ಯ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು ಹಾಗೂ ನಿಟ್ಟೆ ಸಂಸ್ಥೆಯ 2 ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ರಕ್ತದಾನ ಶಿಬಿರವನ್ನು ವರ್ಷಕ್ಕೆ ಎರಡು ಬಾರಿ ನಡೆಸುವ ಬಗ್ಗೆ ಆಶಯವಿದೆ’ ಎಂದರು.
ನಿಟ್ಟೆ ಕ್ಯಾಂಪಸ್ ನ ನಿರ್ವಹಣೆ ಹಾಗೂ ಅಭಿವೃದ್ದಿ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ನಿಟ್ಟೆ ರೋಟರಿ ಕ್ಲಬ್ನ ಅಧ್ಯಕ್ಷ ಡಾ. ರಘುನಂದನ್ ಕೆ ಆರ್, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ರಘುವೀರ್ ಶೆಟ್ಟಿಗಾರ್, ಬಪ್ಪನಾಡು ಲಯನ್ಸ್ ಕ್ಲಬ್ ಅಧ್ಯಕ್ಷನಿಲ್ ಕುಮಾರ್, ಎಚ್.ಡಿ.ಎಫ್.ಸಿ ಬ್ಯಾಂಕ್ ಅಧಿಕಾರಿ ರಾಘವೇಂದ್ರ ನಾಯಕ್, ನಿಟ್ಟೆ ರೆಡ್ಕ್ರಾಸ್ನ ಮುಖ್ಯಸ್ಥ ಡಾ.ಜನಾರ್ದನ್ ನಾಯಕ್, ಎನ್.ಸಿ.ಸಿ ಆಫೀಸರ್ ಡಾ.ಶಿವಪ್ರಸಾದ್ ಶೆಟ್ಟಿ, ಏಐಎಂಎಸ್ ಸಂಯೋಜಕ ಡಾ.ಮೆಲ್ವಿನ್, ಎನ್.ಎಸ್.ಎಸ್ ಅಧಿಕಾರಿ ಡಾ. ಧನಂಜಯ್, ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರತೀಕ್ಷಾ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಧಿ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಎನ್ ಕಾರ್ಯಕ್ರಮ ನಿರೂಪಿಸಿದರು.
ಈ ಒಂದು ದಿನದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಹಾಗೂ ಭೋದಕೇತರ ವರ್ಗದವರ ರಕ್ತದಾನದೊಂದಿಗೆ 474 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಕಾಲೇಜಿನ ಪತ್ರಿಕಾಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.
ಈ ಬಾರಿಯ ದೀಪಾವಳಿ ಹಬ್ಬಕ್ಕೆ ಕಾರ್ಕಳದ A1 ಸೂಪರ್ ಮಾರ್ಟ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. A1 ಸೂಪರ್ ಮಾರ್ಟ್ ನಲ್ಲಿ 3೦೦೦ಕ್ಕೂ ಆಧಿಕ ಖರೀದಿಗೆ ಉಚಿತವಾಗಿ 1 ಗ್ರಾಂ ಬೆಳ್ಳಿಯ ನಾಣ್ಯ ತಮ್ಮದಾಗಲಿದೆ.
ದೀಪಾವಳಿ ಪ್ರಯುಕ್ತ ಅತ್ಯುತ್ತಮ ಆಫರ್ಸ್, ಡಿಸ್ಕೌಂಟ್ಸ್, ಬೈ ಒನ್ ಗೆಟ್ ಒನ್ ಆಫರ್ಸ್ ಗಳು ಲಭ್ಯವಿದೆ.
ಈ ಆಫರ್ ಅ. 18 ರಿಂದ 22 ರವರೆಗೆ ಇರಲಿದೆ. ಇಂದೇ ಕಾರ್ಕಳ ಪೇಟೆಯ ಅಥವಾ ಜೋಡುರಸ್ತೆ ಸೂಪರ್ ಮಾರ್ಟ್ ಗೆ ಭೇಟಿ ನೀಡಿ. ಬೆಳ್ಳಿಯ ನಾಣ್ಯ ತಮ್ಮದಾಗಿಸಿಕೊಳ್ಳಿ.
ಯುವಪ್ರೇಮಿಗಳಿಬ್ಬರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಅಂಬಲಪಾಡಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿ ಎಂಬಲ್ಲಿ ಯುವತಿ ವಾಸವಾಗಿರುವ ಬಾಡಿಗೆ ಜೋಪಡಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಮೃತ ಯುವತಿ ವಲಸೆ ಕಾರ್ಮಿಕ ಕುಟುಂಬದ ಕಾಲೇಜು ವಿದ್ಯಾರ್ಥಿನಿ ಪವಿತ್ರ (17), ಯುವಕ ವಲಸೆ ಕಾರ್ಮಿಕ ಮಲ್ಲೇಶ (23) ಎಂದು ತಿಳಿದುಬಂದಿದೆ.
ನಗರ ಪೋಲಿಸ್ ಠಾಣೆಯ ಎಸ್.ಐ ಭರತೇಶ್, ಎ.ಎಸ್.ಐ ಪರಮೇಶ್ವರ್ ಕೆ, ಎ.ಎಸ್ ಐ ರಮೇಶ್, ಮುಖ್ಯ ಆರಕ್ಷಕ ಜಯಕರ್ ಘಟನಾ ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತದೇಹಗಳನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಅಬ್ಬನಡ್ಕ ಅವರ ಅಧ್ಯಕ್ಷತೆಯಲ್ಲಿ ಕಂಬಳ ಕ್ಷೇತ್ರದ ಸಾಧಕರಾದ ಬೋಳದಗುತ್ತು ಸಂತೋಷ್ ಶೆಟ್ಟಿ ಅವರಿಗೆ ಸಂಘದ ವತಿಯಿಂದ ಸನ್ಮಾನ ನಡೆಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಮರಿಮಾರಗುತ್ತು ಅವಿನಾಶ್ ಮಲ್ಲಿ, ಉದ್ಯಮಿ ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಸ್ಥಾಪಕಾಧ್ಯಕ್ಷರಾದ ವಿಠಲ ಮೂಲ್ಯ, ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್ ಉಪಸ್ಥಿತಿತರಿದ್ದರು.
ಸಿಂಧೂರ ಪಟಾಕಿ ಸ್ಟಾಲ್ ನಲ್ಲಿ ಪ್ರತಿ ₹999/- ಖರೀದಿಯ ಮೇಲೆ ಕಾರ್ಕಳದ ವಿವಿಧ ಮಳಿಗೆಗಳಲ್ಲಿ ₹1,150/- ರೂಪಾಯಿವರೆಗಿನ ಆಫರ್ ಸಿಗಲಿದೆ.
ಸಿಂಧೂರ ಪಟಾಕಿ ಸ್ಟಾಲ್ ನಲ್ಲಿ ₹999/- ವರೆಗಿನ ಪಟಾಕಿ ಖರೀದಿಸಿದ ಗ್ರಾಹಕರಿಗೆ ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ 10%, ಹೋಟೆಲ್ ಮಯೂರದಲ್ಲಿ 20%, ಶ್ರೇಷ್ಠ ಸ್ವೀಟ್ಸ್ 10%, ಲಕ್ಷ್ಮಿ ಸಿಲ್ಕ್ಸ್ ನಲ್ಲಿ 20% ಹಾಗೂ ಬಾಲಾಜಿ ಮೊಬೈಲ್ಸ್ ನಲ್ಲಿ ಹೊಸ ಮೊಬೈಲ್ ಖರೀದಿ ಮೇಲೆ 500 ರೂ. ವರೆಗಿನ ರಿಯಾಯಿತಿ ಸಿಗಲಿದೆ.
ಈ ಆಫರ್ ಅ.18 ರಿಂದ 23 ರವರೆಗೆ ಇರಲಿದ್ದು, ಹೊಸ್ಮಾರು, ಬಜಗೋಳಿ, ಕಾರ್ಕಳ ಗಾಂಧಿ ಮೈದಾನ, ಬೆಳ್ಳಣ್, ಸಚ್ಚರಿಪೇಟೆ, ಬೈಲೂರಿನ ಸ್ಟಾಲ್ ಗಳಲ್ಲಿ ಈ ಆಫರ್ ಗಳು ಸಿಗಲಿವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7349226760, 8792375667, 8971654629