ಕೇಂದ್ರ ಸರ್ಕಾರದ ಇಂಧನ ಸಚಿವಾಲಯ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಎಸ್.ಆರ್. ಪಬ್ಲಿಕ್ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ ವಿನೀಶ್ ಆಚಾರ್ಯ ಮತ್ತು 6ನೇ ತರಗತಿಯ ವಿದ್ಯಾರ್ಥಿನಿ ಪ್ರಣಮ್ಯ ಆಚಾರ್ಯ ಹಾಗೂ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಾನಿಧ್ಯ ಆಚಾರ್ಯ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಅಭಿನಂದಿಸಿದ್ದಾರೆ.
ಮಹಾವೀರ ಫ್ರೆಂಡ್ಸ್ ಕ್ಲಬ್ ಕುಕ್ಕುಂದೂರು ಕಾರ್ಕಳ,ಲಯನ್ಸ್ ಮತ್ತು ಲಿಯೋ ಕ್ಲಬ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ, ರಜತ ಸಂಭ್ರಮದ ಸಲುವಾಗಿ ನಡೆದ ತಾಲೂಕು ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಕೆ.ಎಮ್.ಇ.ಎಸ್ ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ತಂಡ ತೃತೀಯ ಸ್ಥಾನವನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದೆ.
ಪ್ರೌಢಶಾಲೆಯ ವಿಜೇತ ಹುಡುಗಿಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ಚಂದ್ರ ಹೆಗ್ಡೆಯವರು ಟೀಮ್ ಮೆನೇಜರ್ ಆಗಿ ಸಹಕರಿಸಿದ್ದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿಯರಾದ ಶ್ರಿಮತಿಯವರು ಮತ್ತು ಪ್ರಾಥಮಿಕ ಮುಖ್ಯ ಶಿಕ್ಷಕಿಯರಾದ ಲೊಲಿಟ ಡಿ’ಸಿಲ್ವರವರೂ ವಿಜೇತ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳ ಇದರ ವತಿಯಿಂದ ಇದೇ ನವಂಬರ್ 19 ರಂದು ಹೆಬ್ರಿಯ ಚೈತನ್ಯ ಸಭಾಭವನದಲ್ಲಿ 3 ಗಂಟೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಅವರು ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ನಿವೃತ್ತ ತಹಶೀಲ್ಧಾರ್ ಶಾಂತಾರಾಮ ಚಿಪ್ಣೂಣಕರ್, ವಕೀಲ ಹೆಬ್ರಿ ಶೇಖರ ಮಡಿವಾಳ್ ಕಾರ್ಕಳ, ಮುಖಂಡರಾದ ಮುನಿಯಾಲು ಗೋಪಿನಾಥ ಭಟ್, ಶುಭದ್ ರಾವ್ ಕಾರ್ಕಳ, ಉದ್ಯಮಿ ಪ್ರವೀಣ್ ಬಲ್ಲಾಳ್ ಹೆಬ್ರಿ, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಜನಾರ್ಧನ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ ಭಂಡಾರಿ, ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ ಅಡ್ಯಂತಾಯ, ಸುಕುಮಾರ್ ಮುನಿಯಾಲ್, ಗೋಪಿನಾಥ ಭಟ್ ಮುನಿಯಾಲು, ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್ ಶಿವಪುರ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು ಮತ್ತು ವೇದಿಕೆಯ ಅಜೀವ ಸದಸ್ಯರು ಭಾಗವಹಿಸುವರು.
ಅಭಿನಂದನೆ : ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಉಡುಪಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಚಾರ ಹೆರ್ಗಲ್ಲು ಸುಜನ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿವಿಧ ಕ್ಷೇತ್ರಗಳ ಸಾಧಕರಾದ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ, ಚಾರ ಪ್ರದೀಪ್ ಹೆಬ್ಬಾರ್, ಡಾ. ಗೋಪಾಲ ಪೂಜಾರಿ ಶಿವಪುರ, ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ನ ಶೇಖರ್ ಶೇರಿಗಾರ್ ಹೆಬ್ರಿ, ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು, ವೀಣಾ ಆರ್ ಭಟ್, ಸಮಾಜ ಸೇವಕರಾದ ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ಸಮಾಜಸೇವಕ ಎಚ್.ಜನಾರ್ಧನ್ ಹೆಬ್ರಿ, ಮಹಾಬಲ ನಾಯ್ಕ್ ಬೇಳಂಜೆ, ಕ್ರೀಡಾ ಸಾಧಕ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ, ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಸಹಿತ ಹಲವರಿಗೆ ಅಭಿನಂದನೆ ನಡೆಯಲಿದೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳದ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ ಭಂಡಾರಿ, ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ ಅಡ್ಯಂತಾಯ, ಸುಕುಮಾರ್ ಮುನಿಯಾಲ್, ಮೋಹನದಾಸ ನಾಯಕ್ ಶಿವಪುರ, ಜಗನ್ನಾಥ ಕುಲಾಲ್ ಶಿವಪುರ, ಭೂನ್ಯಾಯ ಮಂಡಳಿ ಸದಸ್ಯ ರಾಘವೇಂದ್ರ ನಾಯ್ಕ್ ಇಂದಿರಾನಗರ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಸುನಿಲ್ ಕುಮಾರ್ ಅವರು ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಸಕ್ತ ವಿದ್ಯಮಾನ ಕುರಿತು ಪರಿಶೀಲನೆ ನಡೆಸಿ ಚರ್ಚಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ಮದರಸ ಎಸ್ ಮಕಾಂದರ ಅವರು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ, ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು ಇತರ ದೈಹಿಕ ಶಿಕ್ಷೆಗಳನ್ನು ನೀಡುವುದು ಸೇರಿದಂತೆ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ, ವಿದ್ಯಾರ್ಥಿಗಳ ಜನಿವಾರ ಮತ್ತು ಕೈ ಮತ್ತು ಕುತ್ತಿಗೆ ದಾರಗಳನ್ನು ತೆಗೆಸಿ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿರುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳಿಯರಲ್ಲಿ ಸಾಮಾಜಿಕ ಅಶಾಂತಿ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ವಸತಿ ಶಾಲೆಗೆ ಭೇಟಿ ನೀಡಿ, ಸಭೆ ನಡೆಸಿ ಘಟನೆಯ ವಿವರದ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಿದರು.
ಮೊರಾರ್ಜಿ ವಸತಿ ಶಾಲೆಯು ಉತ್ತಮ ಹಾಗೂ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದೀಗ ಇಂತಹ ಶಿಕ್ಷಕರ ದುರ್ವರ್ತನೆಯಿಂದಾಗಿ ಶಾಲೆಯ ಉತ್ತಮ ವಾತಾವರಣ ಕೆಡಿಸಿದಂತಾಗಿದೆ. ಈ ರೀತಿಯ ಘಟನೆಗಳು ನಮ್ಮ ಕಾರ್ಕಳದಲ್ಲಿ ನಡೆದಿರುವುದು ಅತ್ಯಂತ ಖಂಡನೀಯ. ಇಂತಹ ಘಟನೆ ಸಮಾಜದ ನಡುವೆ ಒಡಕು ಸೃಷ್ಠಿಸಲು ಕುಮ್ಮಕ್ಕು ನೀಡಿದಂತಾಗುತ್ತದೆ. ಆದ ಕಾರಣ ಇಂತಹ ಶಿಕ್ಷಕರ ವಿರುದ್ದ ಸೂಕ್ತ ಶಿಕ್ಷೆ ಆಗುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂಬ ಎಚ್ಚರಿಕೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಭೋಧನ ಕ್ರಮಗಳು, ವಸತಿ ನಿಲಯಗಳ ಮೂಲಭೂತ ಸೌಕರ್ಯಗಳು ಮತ್ತು ಊಟೋಪಚಾರದ ಕುರಿತು ಮುಕ್ತವಾಗಿ ಮಾತುಕತೆ ನಡೆಸಿ ಯಾವುದೇ ಸಮಸ್ಯೆಗಳು ಇದ್ದರೂ ನನ್ನ ಗಮನಕ್ಕೆ ತರುವಂತೆ ಹಾಗೂ ಭಯ ಮುಕ್ತವಾಗಿ ಉತ್ತಮ ಶಿಕ್ಷಣ ಪಡೆಯುವ ಕಡೆ ಗಮನ ಹರಿಸುವಂತೆ ಆತ್ಮವಿಶ್ವಾಸ ತುಂಬಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶಿಲ್ದಾರರು, ಕಾರ್ಯ ನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಶಾಲೆಯ ಶಿಕ್ಷಕ ವರ್ಗ, ಅಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಭೂತಾನ್‌ನ ಥಿಂಪು ನಗರದಲ್ಲಿ ನಡೆಯುತ್ತಿರುವ SBKF 12ನೇ ಅಂತರರಾಷ್ಟ್ರೀಯ ಕ್ರೀಡಾಕೂಟ 2025ರ ಈಜು ಸ್ಪರ್ಧೆಯಲ್ಲಿ ಭಾರತದ ವಿಜೇತಾ ವಿದ್ಯಾ ಪೈ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
SBKF ವಿವಿಧ ಒಳಾಂಗಣ–ಹೊರಾಂಗಣ ಸ್ಪರ್ಧೆಗಳು, ಯುದ್ಧಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಪ್ರತಿಷ್ಠಿತ ವೇದಿಕೆಯಾಗಿದೆ. ಈ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜೇತಾ ವಿದ್ಯಾ ಪೈ ಅವರು ಈಜು ಸ್ಪರ್ಧೆಯಲ್ಲಿ 2 ಚಿನ್ನ ಹಾಗೂ 1 ಕಂಚಿನ ಪದಕಗಳನ್ನು ಗೆದ್ದು ಅದ್ಭುತ ಸಾಧನೆ ಮಾಡಿರುವುದು ಎಲ್ಲರಿಗೂ ಹೆಮ್ಮೆ ತಂದಿದೆ. ಈಗಾಗಲೇ ಹಲವು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇವರು ಭಾಗವಹಿಸಿದ ಎಲ್ಲಾ ಕ್ರೀಡಾಕೂಟದಲ್ಲಿ ಪದಕ ವಿಜೇತರಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಕಿರೀಮಂಜೇಶ್ವರ ಬೈಂದೂರು, ಇವರ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ 14ರ ವಯೋಮಿತಿಯ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಂಟನೇ ತರಗತಿಯ ಅಭಿಷ್ 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಹಾಸನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಶಿಕ್ಷಣಕ್ಕೆ ಕ್ರೀಡೆ ಯಾವತ್ತೂ ಅಡ್ಡಿ ಬರಲಾರದು : ಕರಿಷ್ಮಾ ಸನಿಲ್
ಎಲ್ಲಾ ಕ್ರೀಡೆಗಳಿಗೂ ಸಮಾನ ಆದ್ಯತೆ ಸಿಗಬೇಕು : ರೋಹನ್ ಕೆ.
ಶಿಕ್ಷಣಕ್ಕೆ ಕ್ರೀಡೆ ಯಾವತ್ತೂ ಅಡ್ಡಿ ಬರಲಾರದು, ನಿಮ್ಮಲ್ಲೂ ಕ್ರೀಡಾ ಸಾಧನೆ ಮಾಡುವ ಸಾಮರ್ಥ್ಯ ಇದೆ ಅದನ್ನು ಉಪಯೋಗಿಸಿಕೊಂಡು ಉತ್ತಮ ಕ್ರೀಡಾ ಸಾಧಕರಾಗಿ ಮೂಡಿಬನ್ನಿ ಎಂದು ಸೌತ್ ಏಷ್ಯನ್ ಮೆಡಲಿಸ್ಟ್ ಮತ್ತು ಭಾರತೀಯ ರೈಲ್ವೆ ಇಲಾಖೆಯ ಸಿಬ್ಬಂದಿಯೂ ಆಗಿರುವ ಕರಿಷ್ಮಾ ಸನಿಲ್ ಹೇಳಿದರು. ಇವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ನಾಗಬನ ಕ್ಯಾಂಪಸ್ ಮತ್ತು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರ ಜಂಟಿಯಾಗಿ ವಿದ್ಯಾನಗರ ಗ್ರೀನ್ಸ್, ಮಣಿಪಾಲದಲ್ಲಿ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಐಕ್ಯಮ್ ಸ್ಪೋಟ್ಸ್ ಸೈನ್ಸ್ನ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ರೋಹನ್ ಕೆ ಇವರು ಮಾತನಾಡಿ ಎಲ್ಲಾ ಕ್ರೀಡೆಗಳಿಗೂ ಸಮಾನ ಆದ್ಯತೆ ಸಿಗಬೇಕು. ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಸದುಪಯೋಗಪಡಿಕೊಂಡರೆ ಅಂತರಾಷ್ಟ್ರಿಯ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿರಲು ಸಾಧ್ಯವಾಗುವುದು ಎಂದರು. ಇದೇ ಸಂದರ್ಭದಲ್ಲಿ ಆಗಮಿಸಿದ ಗಣ್ಯರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಅರ್ನ್ ಎಂಡ್ ಲರ್ನ್ ಬಿಸ್ನೆಸ್ ಫೇರ್ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರುಗಳಾದ ಪ್ರಕಾಶ್ ಜೋಗಿ, ಹೇಮಂತ್ ನಾಯಕ್, ಉಪನ್ಯಾಸಕರು, ಉಪನ್ಯಾಸಕೇತರರು ಉಪಸ್ಥಿತರಿದ್ದರು.
ಮಣಿಪಾಲ ಜ್ಞಾನಸುಧಾ ಉಪ ಪ್ರಾಂಶುಪಾಲರಾದ ರವಿ ಜಿ ಸ್ವಾಗತಿಸಿ ಗಣಿತಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಕಲ್ಕೂರ ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಣ ನಿರ್ದೇಶಕ ಅರುಣ್ ಕುಮಾರ್ ವಂದಿಸಿದರು.
ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದಿಂದ ಕಲಬುರ್ಗಿಯ ಚಂದ್ರಶೇಖರ ಪಾಟೀಲ ಸ್ಟೇಡಿಯಂನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಅಥ್ಲೆಟಿಕ್ಸ್ನಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾ ನಗರದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ ಪೂಜಾರಿ ಇವರು 200ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 100 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ಇವರು ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಗಳ ಸುಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.
ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಹಾಲಿ ಇರುವ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ಕಾರ್ಕಳ ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಅಗೆದು ಪೈಪ್ ಲೈನ್ ಕಾಮಗಾರಿಯನ್ನು ನಡೆಸಲಾಗಿತ್ತು. ಸದರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿಯಿಂದ ಕಾರ್ಕಳಪೇಟೆಯ ಅನಂತಶಯನ ತಳ್ಳಾರು ರಸ್ತೆ, ಮುಖ್ಯ ರಸ್ತೆ, ಕೋರ್ಟ್ ರಸ್ತೆ, ಬಂಡಿಮಠ, ಪೆರ್ವಾಜೆಯ ರಸ್ತೆಗಳು ಸೇರಿದಂತೆ ಪ್ರಮುಖ ಭಾಗಗಳಲ್ಲಿ ರಸ್ತೆ ಹಾಳಾಗಿದ್ದು ಸಾರ್ವಜನಿಕ ಸಂಚಾರಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗಿದ್ದು, ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮುಗಿದಿರುವುದರಿಂದ ಕೂಡಲೇ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಾಳಾಗಿರುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಇಂದು ನಡೆದ ಸಭೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅವರಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಇಲಾಖಾ ಅಧಿಕಾರಿಗಳು ಪ್ರಸ್ತುತ ರಾಮಸಮುದ್ರ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಆ ಕಾಮಗಾರಿ ಮುಗಿದ ತಕ್ಷಣ ಅನಂತಶಯನ ತೆಳ್ಳಾರು ರಸ್ತೆ ಕಾಮಗಾರಿಯನ್ನು ಇನ್ನು ಎರಡು ದಿನಗಳಲ್ಲಿ ಆರಂಭಿಸಲಾಗುವುದು ಹಾಗೂ ಉಳಿದ ರಸ್ತೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಆರಂಭಿಸಿ ಆದಷ್ಟು ಶೀಘ್ರವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ, ಕಾರ್ಕಳ ಪುರಸಭೆಯ ಅಧಿಕಾರಿಗಳು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಇಷ್ಟ ಪಟ್ಟು ಓದ ಬೇಕು, ಕಷ್ಟ ಪಟ್ಟು ಅಲ್ಲ: ಬಾಲಕೃಷ್ಣ ನಾಯಕ್.
ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸರಕಾರಿ ಪ್ರೌಢ ಶಾಲೆಯ ಅಧ್ಯಾಪಕ ಬಾಲಕೃಷ್ಣ ನಾಯಕ್ ರವರು ಮಾತನಾಡುತ್ತಾ ‘ಕೇವಲ ಅಂಕಗಳನ್ನು ಪಡೆಯುವುದೇ ಶಿಕ್ಷಣವಲ್ಲ, ಮಾನವನು ಪ್ರಕೃತಿಯೊಂದಿಗೆ ಬೆರೆತು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯಬೇಕು.ವಿದ್ಯಾರ್ಥಿಗಳು ತಮ್ಮಲ್ಲಿರುವ ಒಳ್ಳೆಯ ಗುಣಗಳ ಪಟ್ಟಿಯನ್ನು ಮಾಡಿ ಧನಾತ್ಮಕವಾಗಿ ಯೋಚಿಸಬೇಕು.ವಿದ್ಯಾರ್ಥಿಗಳು ಭವಿಷ್ಯದ ಒಳ್ಳೆಯ ಗುರಿಯ ಕನಸನ್ನು ಕಾಣಬೇಕು. ಯಶಸ್ಸು ಎಂಬುದು ಸತತ ಪರಿಶ್ರಮಗಳ ಪರಿಣಾಮವಾಗಿದೆ.ವಿದ್ಯಾರ್ಥಿಗಳು ಸಂತೋಷದಿಂದ, ಸಂತೋಷಕ್ಕಾಗಿ ಓದಬೇಕು. ತಾವು ಮಾಡುವ ಒಳ್ಳೆಯ ಕೆಲಸವನ್ನು ಪ್ರೀತಿಸಬೇಕು.’ ಎಂದರು.
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿಯವರು ಮಾತನಾಡುತ್ತಾ ‘ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಗುರಿಯ ಕಡೆಗೆ ಸಾಗಬೇಕು.’ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಮಾತನಾಡಿ ‘ವಿದ್ಯಾರ್ಥಿಗಳು ದಿನಚರಿಯನ್ನು ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳ ಬೇಕು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕು’ ಎಂದರು.
ಜೀವಶಾಸ್ತ್ರ ಉಪನ್ಯಾಸಕರಾದ ಗುರು ಕುಮಾರ್ ರವರು ಸಾಯನ್ಸ್ ಪೆಸ್ಟ್ ನಲ್ಲಿ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು.ಮುಖ್ಯ ಅತಿಥಿ ಬಾಲಕೃಷ್ಣ ನಾಯಕ್ ರವರು ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೊಲಿಟಾ ಡಿ’ಸಿಲ್ವ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಟoಜಿಲ್,ಉಪಾಧ್ಯಕ್ಷೆ ಐಶ್ ಮೆಹರಿನ್ ವೇದಿಕೆಯಲ್ಲಿದ್ದರು.ವಿದ್ಯಾರ್ಥಿ ಅಮಾನ್ ಸ್ಟಾಗತಿಸಿದರು.ವಿ ದ್ಯಾರ್ಥಿನಿ ಕೃತಿಕಾ ಧನ್ಯವಾದ ಸಮರ್ಪಣೆಗೈದರು.ವಿದ್ಯಾರ್ಥಿನಿ ಅನುಷ್ಕಾ ಕಾರ್ಯಕ್ರಮ ನಿರ್ವಹಿಸಿರು.