Tuesday, April 28, 2026
Google search engine
Homeಕಾರ್ಕಳಶಿವಪುರ ಶ್ರೀ ಶಂಕರದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ : ಬಲಿ ಶಿಲಾಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ

ಶಿವಪುರ ಶ್ರೀ ಶಂಕರದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ : ಬಲಿ ಶಿಲಾಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ

ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಮೇ 6ರ ತನಕ ನಡೆಯುವ ಬ್ರಹ್ಮ ಕಲಶಾಭಿಷೇಕದ ವಿವಿಧ ಧಾರ್ಮಿಕ ಕಾರ್ಯಗಳು ಕ್ಷೇತ್ರದ ತಂತ್ರಿವರೇಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ನೇತ್ರತ್ವದಲ್ಲಿ ಮಂಗಳವಾರ ನಡೆಯಿತು.

ನವಗ್ರಹ ಹೋಮ, 108 ಕಾಯಿ ಗಣಪತಿ ಹೋಮ, ಗಣಪತಿ ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವರ ಬಿಂಬಶುದ್ಧಿ, ಬಲಿ ಶಿಲಾಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ, ಶ್ರೀ ಗಣಪತಿ ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವರ ಬಿಂಬಾಧಿವಾಸ ದ್ವಜಾಧಿವಾಸ ಕಾರ್ಯಗಳು ನಡೆಯಿತು.

ಸೋಮವಾರದಂದು ಏಕಾದಶಿ, ಚತುರ್ವೇದ ಪಾರಾಯಣ ಪ್ರಾರಂಭ, ಕ್ಷಾಳನಾದಿ ಬಿಂಬ ಶುದ್ದಿ ಮೂಲ ಮಂತ್ರ ಜಪ, ಶತರುದ್ರ ಜಪ ಜರುಗಿತು.

ಇಂದು ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರ ಪ್ರತಿಷ್ಠೆ

ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಬುಧವಾರ ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರ ಪ್ರತಿಷ್ಠೆ, ಧ್ವಜಸ್ತಂಭ ಪ್ರತಿಷ್ಠೆ, ಚಂಡಿಕಾ ಹೋಮ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ವಾಸ್ತು ವಿಧಾನ, ನಾಗ ದೇವರ ಬಿಂಬಧಿವಾಸ, ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ ನಡೆಯಲಿದೆ. ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments