ಶಿವಮೊಗ್ಗ: ಕ್ರಷರ್ ಉದ್ಯಮಿಯೊಬ್ಬರು ನಗರದ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ್ ಅಲಿಯಾಸ್ ಬಸವರಾಜ್(42) ಆತ್ಮಹತ್ಯೆಗೆ ಶರಣಾದ ಉದ್ಯಮಿ.ನಗರದ ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದುಕೊಂಡು ಅಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ಉದ್ಯಮದಲ್ಲಿ ಉಂಟಾಗಿದ್ದ ನಷ್ಟ ಹಾಗೂ ವಿಪರೀತ ಸಾಲದ ಹೊರೆಯಿಂದಾಗಿ ಅವರು ಮನನೊಂದಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


















