ರೋಟರಾಕ್ಟ್ ಕ್ಲಬ್ ಕಾರ್ಕಳ ಇಲ್ಲಿಗೆ ರೋಟರಾಕ್ಟ್ ಜಿಲ್ಲೆ, 3182 ರ ಜಿಲ್ಲಾ ಪ್ರತಿನಿಧಿ ರೋ. ನಿವಾಸ್ ಎಂ.ಆರ್ ರವರು ಅಧಿಕೃತ ಭೇಟಿ ನೀಡಿದರು.
“ರೋಟರಿ ಬಾಲಭವನ” ದಲ್ಲಿ ನಡೆದ ಈ ಸಮಾರಂಭದಲ್ಲಿ ರೋಟರಾಕ್ಟ್ ಕ್ಲಬ್ಬಿನ ಅಧ್ಯಕ್ಷ ರೋ. ಸಂದೇಶ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.
ಸಮಾರಂಭದ ಮುಖ್ಯ ಅತಿಥಿ ಜಿಲ್ಲಾ ಪ್ರತಿನಿಧಿ ರೋ.ನಿವಾಸ್ ಎಂ ಆರ್ ರವರು ಮಾತನಾಡುತ್ತಾ ಕಾರ್ಕಳ ರೋಟರಾಕ್ಟ್ ಕ್ಲಬ್ಬಿನ ಸಮುದಾಯ ಸೇವಾ ಕಾರ್ಯಕ್ರಮಗಳು, ಶಿಕ್ಷಣಕ್ಕೆ ನೀಡುತ್ತಿರುವ ಸೇವೆಗಳು, ಪರಿಸರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಯೋಗಸನಾ ದಲ್ಲಿ ಸಾಧನೆ ಮಾಡಿದ ರೋ.ಅನನ್ಯ ಇವರನ್ನು ಸನ್ಮಾನಿಸಲಾಯಿತು.
ರೋಟರಾಕ್ಟ್ ಗೃಹ ಪತ್ರಿಕೆ “ಐಕ್ಯ” ಅನ್ನು ಜಿಲ್ಲಾ ಪ್ರತಿನಿಧಿ ಬಿಡುಗಡೆಗೊಳಿಸಿದರು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ .ನವೀನ್ ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಉತ್ತಮ ನುಡಿಗಳನ್ನು ನುಡಿದರು ಹಾಗೂ ಸಹಾಯಕ ಗವರ್ನರ್ ರೋ. Phf ವಿಘ್ನೇಶ್ ಶೆಣೈ, ವಲಯ ಸೇನಾನಿ ಇವರು ಕರಪತ್ರ ವನ್ನು ಬಿಡುಗಡೆ ಗೊಳಿಸಿ ,ಶುಭ ಹಾರೈಸಿದರು. ವೇದಿಕೆಯಲ್ಲಿ ಕಾರ್ಕಳ ರೋಟರಾಕ್ಟ್ ಸಂಸ್ಥೆಯ ಸಭಾಪತಿಯಾದಂತ ರೋ.ಪ್ರಭಾ ನಿರಂಜನ್, ರೋಟರಿ ಕ್ಲಬ್ ಕಾರ್ಕಳ ಇದರ ಕಾರ್ಯದರ್ಶಿಯಾದಂತ ಚೇತನ್ ನಾಯಕ, ರೋಟರಾಕ್ಟ್ ಜಿಲ್ಲಾ ಕಾರ್ಯದರ್ಶಿ ಯಾದಂತ ರೋ. ಅಂನ್ಸ್ ಕೋಟಿಯನ್ ಇವರೆಲ್ಲರೂ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದರು…
ಕಾರ್ಯದರ್ಶಿ ರೋ. ಅನ್ವಯ್ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಪ್ರತಿನಿಧಿ ರೋ. ನಿವಾಸ್ ಎಂ . ಆರ್ ರವರು ರೋಟರಿ ಕ್ಲಬ್ ವತಿಯಿಂದ ಮಾಡಿದ ವಿವಿಧ ಯೋಜನೆಗಳನ್ನು ವೀಕ್ಷಿಸಿ ಅವುಗಳ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯವನ್ನು ನೆರವೇರಿಸಿದರು.
ಕಲಂಬಾಡಿ ಪದವು ಅಂಗನವಾಡಿ ಶಾಲೆಗೆ 8,000 ವೆಚ್ಚದ ಕಪಾಟುಗಳನ್ನು, 6,000 ವೆಚ್ಚದಲ್ಲಿ ಹುಷಾರಿಲ್ಲದ ವೃದ್ಧ ಮಹಿಳೆಗೆ ಒಂದು ತಿಂಗಳ ಅಡುಗೆ ಸಾಮಾಗ್ರಿ ಹಾಗೂ ಬಟ್ಟೆಯನ್ನು ವಿತರಿಸಲಾಯಿತು,12,000 ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ರೋಟರಿ ಬಾಲ ಭವನಕ್ಕೆ,ಹಾಗೂ 15,000 ವೆಚ್ಚದಲ್ಲಿ ರೋಟರಿ ಪಾರ್ಕ್ ಇದರ ಗೋಡೆಗೆ ಬಣ್ಣವನ್ನು ಹಚ್ಚಲಾಯಿತು.
ರೋ. ಮೈತ್ರಿ ನಾಯ್ಕ್ ಪ್ರಾರ್ಥಿಸಿದರು. ರೋ.ಅನ್ವಯ್ ನಾಯಕ್ ವಂದಿಸಿದರು.
ರೋ. ಶಂಕರ್ ಕುಡ್ವ ಕಾರ್ಯಕ್ರಮವನ್ನು ನಿರೂಪಿಸಿದರು.



































