Wednesday, May 13, 2026
Google search engine
Homeಕಾರ್ಕಳಕಾಂಗ್ರೆಸ್ ಪಕ್ಷವನ್ನು ವೈಚಾರಿಕವಾಗಿ ಮಣಿಸಲಾಗದೆ ಪದೇ ಪದೇ ಸುಳ್ಳು ಸುದ್ಧಿ ಹಂಚಿಕೊಳ್ಳುವ ಶಾಸಕ ಸುನಿಲ್ -...

ಕಾಂಗ್ರೆಸ್ ಪಕ್ಷವನ್ನು ವೈಚಾರಿಕವಾಗಿ ಮಣಿಸಲಾಗದೆ ಪದೇ ಪದೇ ಸುಳ್ಳು ಸುದ್ಧಿ ಹಂಚಿಕೊಳ್ಳುವ ಶಾಸಕ ಸುನಿಲ್ – ಉದಯ್ ಶೆಟ್ಟಿ ಮುನಿಯಾಲ್

ಶಾಸಕ ಸ್ಥಾನದ ಘನತೆ ಮರೆತಿರುವ ಸುನಿಲ್ ಕುಮಾರ್ ಸುಳ್ಳು ಸುದ್ದಿ ಹಬ್ಬಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆ ಮೂಲಕ ಶಾಸಕಾಂಗ ವ್ಯವಸ್ಥೆಯ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಹೇಳಿಕೆ ಎಂದು ನಕಲಿ ಸುದ್ಧಿ ಹಂಚಿಕೊಂಡ ವಿಚಾರದಲ್ಲಿ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರು ಶಾಸಕರು ಎನ್ನುವುದನ್ನು ಮರೆತು ಪದೇ ಪದೇ ಸುಳ್ಳು ಸುದ್ದಿ ಹಂಚಿಕೊಂಡು ಸಮಾಜದ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಕಲಿ ಲೆಟರ್ ಹೆಡ್ ಹಂಚಿಕೊಂಡಿದ್ದ ಅವರು ಮತ್ತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ಅದೇ ಕೆಲಸ ಮಾಡಿದ್ದಾರೆ ಎಂದರು.

ಶಾಸಕಾಂಗ ವ್ಯವಸ್ಥೆಯ ಭಾಗವಾಗಿದ್ದು ಇಂತಹ ರಾಜಕೀಯ ದುರುದ್ದೇಶದ ಕಾರ್ಯದಲ್ಲಿ ನಿರತರಾಗಿರುವ ಸುನಿಲ್ ಕುಮಾರ್ ಅವರಿಗೆ ಇಂತಹ ಕಾರ್ಯ ಶೋಭೆ ತರುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ವೈಚಾರಿಕವಾಗಿ ಮಣಿಸಲಾಗದೆ ಪದೇ ಪದೇ ಸುಳ್ಳು ಸುದ್ಧಿ ಹಂಚಿಕೊಳ್ಳುವ ಶಾಸಕ ಸುನಿಲ್ ಕುಮಾರ್ ಜನತೆಯ ಕ್ಷಮೆಯಾಚಿಸಬೇಕು ಎಂದು ಉದಯ್ ಶೆಟ್ಟಿ ಮುನಿಯಾಲು ಹೇಳಿದ್ದಾರೆ

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments