Friday, May 22, 2026
Google search engine
Homeಕಾರ್ಕಳಬೆಳ್ಳಾರೆ ಮೂಲದ ಸಾಪ್ಟ್ ವೇರ್ ಉದ್ಯೋಗಿ ಸೂರಜ್ ರೈ ಬೆಂಗಳೂರಿನಲ್ಲಿ ಅಪಘಾತದಲ್ಲಿ ಸಾವು

ಬೆಳ್ಳಾರೆ ಮೂಲದ ಸಾಪ್ಟ್ ವೇರ್ ಉದ್ಯೋಗಿ ಸೂರಜ್ ರೈ ಬೆಂಗಳೂರಿನಲ್ಲಿ ಅಪಘಾತದಲ್ಲಿ ಸಾವು

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಬೆಳ್ಳಾರೆಯ ಯುವಕ ಸೂರಜ್ ರೈ (27) ಅವರು ರಸ್ತೆ ಅಪಘಾತದಲ್ಲಿ ಸಂಭವಿಸಿದ ತೀವ್ರ ಗಾಯಗಳಿಂದಾಗಿ ಇಂದು (ಮೇ 22) ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾದರು.

ಬೆಳ್ಳಾರೆಯ ನಿವಾಸಿ, ಖ್ಯಾತ ಯಕ್ಷಗುರು ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರರಾಗಿರುವ ಸೂರಜ್ ರೈ ಅವರು ಮೇ 15ರಂದು ರಾತ್ರಿ ತಮ್ಮ ಬೈಕ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕುಣಿಗಲ್ ಬಳಿ ಇವರ ಬೈಕ್ ಮತ್ತು ಕೋಳಿ ಸಾಗಾಟದ ವಾಹನದ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸೂರಜ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಕುಣಿಗಲ್‌ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೃತರು ತಂದೆ ವಾಸುದೇವ ರೈ, ತಾಯಿ ಶರ್ಮಿಳಾ ರೈ, ಪತ್ನಿ ಸ್ನೇಹ, ಸಹೋದರ ಸುದೀಪ್ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments