Monday, July 6, 2026
Google search engine
Homeಕಾರ್ಕಳಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ನೂತನ ನಿವೇಶನ ಅನಾವರಣ

ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ನೂತನ ನಿವೇಶನ ಅನಾವರಣ

ಬೆಳ್ಮಣ್:ಬೋಳ ಹಾಗೂ ಬೆಳ್ಮಣ್ ಭಾಗದ ದೇವಸ್ಥಾನ, ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಬಂಟ ಸಮುದಾಯದ ಪ್ರಮುಖ ಪಾತ್ರವಿದ್ದು ಇದೀಗ ಇಲ್ಲಿನ ಬಂಟರ ಒಗ್ಗಟ್ಟಿನ ಪ್ರತೀಕವಾಗಿ ನಿರ್ಮಾಣಗೊಳ್ಳಲಿರುವ ಬಂಟರ ಸಂಘದ ನಿವೇಶನದ ಅನಾವರಣ ನಡೆಯುತ್ತಿರುವುದು ಪ್ರಶಂಸನೀಯ ಎಂದು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಶ್ರೀ ಉದಯ ಕುಮಾರ ಶೆಟ್ಟಿ ಹೇಳಿದರು. ಅವರು ರವಿವಾರ ಬೋಳ ಮಣ್ ಬೆಟ್ಟು ಬಲ್ಯಾರ್ ದಡ್ಡು ಬಳಿ ನಿರ್ಮಾಣಗೊಳ್ಳಲಿರುವ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ಸಭಾಭವನದ ನಿವೇಶನ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಘದ ಅಧ್ಯಕ್ಷ ಶ್ರೀ ಶೋಧನ್ ಕುಮಾರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈನ ಹೊಟೇಲ್ ರಾಮ್ ದೇವ್ ನ ಮಾಲಕ ಬೋಳ ಬಲ್ಯಾರ್ ದಡ್ಡು ಶ್ರೀ ಕೆ. ರಘುರಾಮ ಶೆಟ್ಟಿ, ಸಂಘದ ಗೌರವಾಧ್ಯಕ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬೇಲಾಡಿ ಶ್ರೀ ವಿಟ್ಠಲ ಶೆಟ್ಟಿ, ಮುಂಬೈ ನ ಹೊಟೇಲ್ ಕೃಷ್ಣ ಪ್ಯಾಲೇಸ್ ನ ಮಾಲಕ ಶ್ರೀ ಕೃಷ್ಣ ಶೆಟ್ಟಿ, ಕೃಷ್ಣಧಾಮ ನಂದಳಿಕೆ, ಮುಂಬಯಿನ ಹೋಟಲ್ ಪೆನಿನ್ಸುಲಾ ದ ಮಾಲಕ ಶ್ರೀ ಕರುಣಾಕರ ಶೆಟ್ಟಿ, ಬೆಳ್ಮಣ್ ಬಂಟರ ಸಂಘದ ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಶ್ರೀಮತಿ ಉಮಾ ಕೃಷ್ಣ ಶೆಟ್ಟಿ, ಕೃಷ್ಣಧಾಮ ನಂದಳಿಕೆ, ಶ್ರೀಮತಿ ರೂಪ ರಾಣಿ ಶೋಧನ್ ಕುಮಾರ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಶ್ರೀ ಎನ್.ತುಕಾರಾಮ ಶೆಟ್ಟಿ ನಿವೇಶನ‍ ಅನಾವರಣಗೊಳಿಸಿದರು.

ಸಂಘದ ಗೌರವಾಧ್ಯಕ್ಷ ಶ್ರೀ ಕೃಷ್ಣ ರೈ ಬೆಳ್ಮಣ್, ಉಪಾಧ್ಯಕ್ಷರಾದ ಬೋಳ ಪರಾರಿ ಶ್ರೀ ವಿಕಾಸ್ ಶೆಟ್ಟಿ, ಶ್ರೀ ನಿತ್ಯಾನಂದ ಶೆಟ್ಟಿ, ಬೆಳ್ಮಣ್, ಕಾರ್ಯದರ್ಶಿ ಬೋಳ ಸತೀಶ್ ಶೆಟ್ಟಿ ಪೆಜತ್ತಬೆಟ್ಟು, ಬೋಳ, ಕೋಶಾಧಿಕಾರಿ ಶ್ರೀ ಉದಯ ಕುಮಾರ್ ಶೆಟ್ಟಿ, ಗುಂಡುಕಲ್ಲು ಬೋಳ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸರಿತಾ ರವೀಂದ್ರ ಶೆಟ್ಟಿ ನಂದಳಿಕೆ, ಕಾರ್ಯದರ್ಶಿ ಕೀರ್ತಿ ಶೆಟ್ಟಿ, ಕಲ್ಯಾ, ಕೋಶಾಧಿಕಾರಿ ಶ್ರೀಮತಿ ಸಂಧ್ಯಾ ಸತೀಶ್ ಶೆಟ್ಟಿ, ಬೋಳ, ಯುವ ವಿಭಾಗದ ಗೌರವಾಧ್ಯಕ್ಷ ಶ್ರೀ ನಿರಂಜನ್ ಶೆಟ್ಟಿ, ಅಧ್ಯಕ್ಷ ಶ್ರೀ ಮನೀಶ್ ಶೆಟ್ಟಿ, ಕಾಂತಾವರ, ಕಾರ್ಯದರ್ಶಿ ಶ್ರೀ ಸ್ವರೂಪ್ ಶೆಟ್ಟಿ, ನಂದಳಿಕೆ ಕೋಶಾಧಿಕಾರಿ ಶ್ರೀ ಧೀರಜ್ ಶೆಟ್ಟಿ,ಕಲ್ಯಾ ವಿವಿಧ ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ಬೆಳ್ಮಣ್ ನ ಶ್ರೀ ಮೋಹನದಾಸ ಶೆಟ್ಟಿ, ಬೋಳದ ಶ್ರೀ ರಿತೇಶ್ ಕುಮಾರ್ ಶೆಟ್ಟಿ, ಸೂಡದ ಶ್ರೀ ರವಿರಾಜ್ ಶೆಟ್ಟಿ, ಕಲ್ಯಾದ ಶ್ರೀ ಸಂಜೀವ ಶೆಟ್ಟಿ, ಕೆದಿಂಜೆಯ ಶ್ರೀಮತಿ ಜಯಂತಿ ಶೆಟ್ಟಿ ಕಾಂತಾವರದ ಶ್ರೀ ದಿಲೀಪ್ ಶೆಟ್ಟಿ ಮತ್ತಿತರರಿದ್ದರು. ಇದೇ ಸಂದರ್ಭ ವಾರ್ಷಿಕ ಮಹಾ ಸಭೆ ನಡೆಯಿತು. ಬೋಳ ಮಾರಗುತ್ತು ಸುಭಾಸ್ ಶೆಟ್ಟಿ ಹಾಗೂ ಬೋಳ ಪ್ರಮೀಳ ಸತೀಶ್ ಶೆಟ್ಟಿ ಪ್ರಾರ್ಥಿಸಿದರು.

ಅಧ್ಯಕ್ಷರಾದ ಶ್ರೀ ಶೋಧನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಸತೀಶ್ ಶೆಟ್ಟಿ ವಾರ್ಷಿಕ ವರದಿ ನೀಡಿ ನಿರ್ಣಯ ಮಂಡಿಸಿ ವಂದಿಸಿದರು. ಕೋಶಾಧಿಕಾರಿ ಶ್ರೀ ಉದಯ ಶೆಟ್ಟಿ ಆಯವ್ಯಯ ಮಂಡಿಸಿದರು. ಶ್ರೀ ಸತೀಶ್ ಶೆಟ್ಟಿ, ಅಗ್ಗ್ಯೊಟ್ಟು ಬೋಳ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶೋಧನ್ ಕುಮಾರ್ ಶೆಟ್ಟಿಯವರು ದಾನರೂಪದಲ್ಲಿ‌ ನೀಡಿದ 1.57 ಎಕರೆ ಜಮೀನಿನಲ್ಲಿ ಈ ನಿವೇಶನ ಅನಾವರಣ ನಡೆಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments