Thursday, May 28, 2026
Google search engine
Homeಕಾರ್ಕಳಕಾರ್ಕಳ: ಹಸಿ, ಒಣ ಕಸ ಬೇರ್ಪಡಿಸದಿದ್ದರೆ ವಿದ್ಯುತ್‌, ನೀರು ಸಂಪರ್ಕ ಕಡಿತ

ಕಾರ್ಕಳ: ಹಸಿ, ಒಣ ಕಸ ಬೇರ್ಪಡಿಸದಿದ್ದರೆ ವಿದ್ಯುತ್‌, ನೀರು ಸಂಪರ್ಕ ಕಡಿತ

ಕಾರ್ಕಳ ವ್ಯಾಪ್ತಿಯ ಸಾರ್ವಜನಿಕರು, ವ್ಯಾಪಾರಸ್ಥರು, ಹೊಟೇಲ್ ಹಾಗೂ ರೆಸ್ಟೋರೆಂಟ್ ವಾಣಿಜ್ಯ ಉದ್ದಿಮೆದಾರರು ತಮ್ಮಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ಎಚ್ಚರಿಕೆ ವಿಂಗಡಿಸಿ ಕಡ್ಡಾಯ ಮೂಲದಲ್ಲೇ ವಿಂಗಡಿಸಿ ನೀಡಬೇಕು ಎಂದು ಕಾರ್ಕಳ ಪುರಸಭೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜಾರಿಗೆ ತಂದಿರುವ ‘ಘನತ್ಯಾಜ್ಯ ವಸ್ತು ನಿರ್ವಹಣೆನಿಯಮಗಳು-2026’ರಅನ್ವಯ, ಸಾರ್ವಜನಿಕರು ತಮ್ಮ ವ್ಯಾಪ್ತಿಯ ಕಸವನ್ನು ನಾಲ್ಕು ವಿಧಗಳಾಗಿ ಕಡ್ಡಾಯ ವಿಂಗಡಿಸಿ ಪೌರಕಾರ್ಮಿಕರ ವಾಹನಗಳಿಗೆ ನೀಡಬೇಕು. ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ನಿಯಮದಂತೆ ಕಸ ವಿಂಗಡಿಸಿ ನೀಡದ ಸಾರ್ವಜನಿಕರು ಮತ್ತು ಉದ್ದಿಮೆದಾರರ ವಿರುದ್ಧ ಕೇವಲ ದಂಡ ವಿಧಿಸುವು ದಷ್ಟೇ ಅಲ್ಲದೆ, ಅವರ ಮನೆ ಅಥವಾ ವಾಣಿಜ್ಯ ಮಳಿಗೆಗಳ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು *ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಎಚ್ಚರಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments