Tuesday, May 26, 2026
Google search engine
Homeಹೆಬ್ರಿಹೆಬ್ರಿಯಲ್ಲಿ ಮನೆಗೆ ನುಗ್ಗಿ ಕಳ್ಳತನ : 59.97 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ದೋಚಿದ ಕಳ್ಳರು.

ಹೆಬ್ರಿಯಲ್ಲಿ ಮನೆಗೆ ನುಗ್ಗಿ ಕಳ್ಳತನ : 59.97 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ದೋಚಿದ ಕಳ್ಳರು.

ಹೆಬ್ರಿಯಲ್ಲಿ ಮನೆಗೆ ನುಗ್ಗಿ ಕಳ್ಳತನ : 59.97 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ದೋಚಿದ ಕಳ್ಳರು.

ಹೆಬ್ರಿ : ಹೆಬ್ರಿ ಪಟ್ಟಣದ ಉದ್ಯಮಿ ಕೀರ್ತನ್ ಪ್ರಭು ಎಂಬವರ ಮನೆಯಲ್ಲಿ ಭಾನುವಾರ ರಾತ್ರಿ ಭಾರಿ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ದೊಚಿರುವ ಘಟನೆ ನಡೆದಿದೆ. ಸುಮಾರು ‍59.97 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.

ಕೀರ್ತನ ಪ್ರಭು ಸೋಮವಾರ ಬೆಳಿಗ್ಗೆ ಎದ್ದು ನೋಡಿದಾಗ ಮನೆಯ ಹಿಂಭಾಗ ಹಾಗೂ ಎದುರಿನ ಬಾಗಿಲುಗಳು ತೆರೆದಿರುವುದು ಗಮನಿಸಿದ್ದಾರೆ. ಮನೆಯ ಹಾಲ್ ಬಳಿ ಇದ್ದ ಗೋದ್ರೇಜ್ ಬಾಗಿಲು ತೆರೆದಿತ್ತು.

ಅನುಮಾನಗೊಂಡು ಮನೆಯ ಮೊದಲ ಮಹಡಿಯ ಮಲಗುವ ಕೋಣೆಗೆ ತೆರಳಿ ಪರಿಶೀಲಿಸಿದಾಗ ಕಬ್ಬಿಣದ ಗೋದ್ರೇಜ್ ಲಾಕರ್ ತೆರೆದು ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಒಳನುಗ್ಗಿ, ಮೊದಲ ಮಹಡಿಯಲ್ಲಿ ಇರಿಸಿದ್ದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಸೋಮವಾರ ಪೊಲೀಸ್ ವರಿಷ್ಠಾಧಿಕಾರಿ ಸಹಿತ ಉನ್ನತಾಧಿಕಾರಿಗಳು ಮತ್ತು ಪೊಲೀಸ್ ವಿವಿಧ ತಂಡಗಳು ಸ್ಥಳಕ್ಕೆ ಬೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments