Saturday, July 11, 2026
Google search engine
Homeಕಾರ್ಕಳಕಾರ್ಕಳವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಅಧ್ಯಕ್ಷರಾಗಿ ಶ್ರೀ ಬಿ. ಪ್ರಕಾಶ್ ಆಚಾರ್ಯ ಪುನರಾಯ್ಕೆ, ಕಾರ್ಯದರ್ಶಿಯಾಗಿ...

ಕಾರ್ಕಳವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಅಧ್ಯಕ್ಷರಾಗಿ ಶ್ರೀ ಬಿ. ಪ್ರಕಾಶ್ ಆಚಾರ್ಯ ಪುನರಾಯ್ಕೆ, ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ

ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಕಾರ್ಕಳ,ವಾರ್ಷಿಕ ಮಹಾಸಭೆ:
ಸಭಾದ ಅಧ್ಯಕ್ಷರಾಗಿ ಶ್ರೀ ಬಿ. ಪ್ರಕಾಶ್ ಆಚಾರ್ಯ ಪುನರಾಯ್ಕೆ, ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ.

ಕಾರ್ಕಳ: ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಇದರ 83ನೇ ವಾರ್ಷಿಕ ಮಹಾಸಭೆಯು ಜೂನ್ 21, 2026ರಂದು ಪೆರುವಾಜೆಯ ವಿಶ್ವಕರ್ಮ ಸಮಾಜ ಭವನದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಸತೀಶ್ ಎನ್. ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಸಮಾಜದ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿದರು.

ಸಭೆಯ ಅಧ್ಯಕ್ಷರಾದ ಶ್ರೀ ಬಿ. ಪ್ರಕಾಶ್ ಆಚಾರ್ಯ ಮಾತನಾಡಿ, “ಸಂಘಟನೆಗಳ ಬೆಳವಣಿಗೆಗೆ ಎಲ್ಲರ ಸಹಕಾರ ಹಾಗೂ ಒಗ್ಗಟ್ಟು ಅತ್ಯಗತ್ಯ” ಎಂದು ತಿಳಿಸಿದರು.ವೇದಿಕೆಯಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.

ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಬಿ. ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪಿ. ವಸಂತ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಕೆ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು ಹಾಗೂ ಅಶೋಕ್ ಆಚಾರ್ಯ ವಂದಿಸಿದರು.

2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಮಹಾಸಭೆಯಲ್ಲಿ 2026–27ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು:
ಅಧ್ಯಕ್ಷರು – ಬಿ. ಪ್ರಕಾಶ್ ಆಚಾರ್ಯ (ಪುನರಾಯ್ಕೆ)
ಕಾರ್ಯದರ್ಶಿ – ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ
ಉಪಾಧ್ಯಕ್ಷರು – ಅಶೋಕ್ ಆಚಾರ್ಯ, ಅಂಡಾರು
ಕೋಶಾಧ್ಯಕ್ಷರು – ಪಿ. ವಸಂತ್ ಆಚಾರ್ಯ
ಜೊತೆ ಕಾರ್ಯದರ್ಶಿ – ರಮೇಶ್ ಆಚಾರ್ಯ, ಕಾರ್ಕಳ
ಕ್ರೀಡಾ ಕಾರ್ಯದರ್ಶಿ – ಅರುಣ್ ಆಚಾರ್ಯ, ಸಾಲ್ಮರ
ಉಪ ಕೋಶಾಧ್ಯಕ್ಷರು – ಜೈರಾಂ ಆಚಾರ್ಯ, ಕಾರ್ಕಳ
ಸದಸ್ಯರು:
ಶಿಲ್ಪಿ ರಾಮಚಂದ್ರ ಆಚಾರ್ಯ
ಸುರೇಶ್ ಆಚಾರ್ಯ, ನಿಟ್ಟೆ
ಸುದಾಕರ ಆಚಾರ್ಯ, ಬಂಗ್ಲೆಗುಡ್ಡೆ
ಸುರೇಶ್ ಆಚಾರ್ಯ, ಸಾಲ್ಮರ
ಎಂ. ರಮೇಶ್ ಆಚಾರ್ಯ
ಎಂ. ಎಸ್. ಮೌನೇಶ್ ಆಚಾರ್ಯ
ಕೆ. ವಿಶ್ವನಾಥ ಆಚಾರ್ಯ
ಕೆ. ದಿನೇಶ್ ಆಚಾರ್ಯ

ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ
ಇದೇ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಮತ್ತು ದತ್ತಿನಿಧಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಜೀವನದಲ್ಲಿ ಯಶಸ್ಸಿಗೆ ಅತ್ಯಂತ ಮುಖ್ಯ” ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ನೀತಾ ಶೆಟ್ಟಿ, ಶರತ್ ಹಾಗೂ ರಿಷಿ ಜೈನ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದತ್ತಿನಿಧಿ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಕಾರ್ಯಕ್ರಮದ ವರದಿಯನ್ನು ಕೆ. ದಿನೇಶ್ ಆಚಾರ್ಯ ಮಂಡಿಸಿದರು. ಜಯರಾಮ ಆಚಾರ್ಯ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments