Tuesday, November 24, 2026
Google search engine
Homeಕಾರ್ಕಳಕೆ.ಎಂ.ಇ.ಎಸ್. ಸಂಸ್ಥೆಯ 43ನೇ ವರ್ಷದ ಸಂಭ್ರಮ; ನ. 27ರಂದು "ರಾಘು ಮಾಸ್ಟ್ರು" ಹಾಸ್ಯಮಯ ತುಳು ನಾಟಕ...

ಕೆ.ಎಂ.ಇ.ಎಸ್. ಸಂಸ್ಥೆಯ 43ನೇ ವರ್ಷದ ಸಂಭ್ರಮ; ನ. 27ರಂದು “ರಾಘು ಮಾಸ್ಟ್ರು” ಹಾಸ್ಯಮಯ ತುಳು ನಾಟಕ ಪ್ರದರ್ಶನ

ಕಾರ್ಕಳದ ಕೆ.ಎಂ.ಇ.ಎಸ್. ಇನ್‌ಸ್ಟಿಟ್ಯೂಷನ್ಸ್ ಆಫ್ ಎಜುಕೇಶನ್ ಸಂಸ್ಥೆಯ 43 ವರ್ಷಗಳ ಶೈಕ್ಷಣಿಕ ಸಾಧನೆಯ ಸಂಭ್ರಮ ಹಾಗೂ ಕೆ.ಎಂ.ಇ.ಎಸ್. ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜುಬಿಲಿ ಆಚರಣೆಯ ಅಂಗವಾಗಿ ನವೆಂಬರ್ 27ರಂದು ಹಾಸ್ಯಮಯ ತುಳು ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಚೈತನ್ಯ ಕಲಾವಿದರು ಬೈಲೂರು ಇವರಿಂದ ನ. 27ರಂದು ಸಂಜೆ 4.30ಕ್ಕೆ ಕೆ.ಎಂ.ಇ.ಎಸ್. ಕ್ಯಾಂಪಸ್‌ನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.

ನಾಟಕದ ಸಾರಥ್ಯ, ಕಥೆ ಹಾಗೂ ನಿರ್ದೇಶನವನ್ನು ಪ್ರಸನ್ನ ಶೆಟ್ಟಿ ಬೈಲೂರು ವಹಿಸಿಕೊಂಡಿದ್ದು, ಸಂಗೀತವನ್ನು ಕಿರಣ್ ಗರಡಿಮಜಲು ನೀಡಿದ್ದಾರೆ. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ನಿಧೀಶ್ ಸೌಂಡ್ ರಂಗನಪಲ್ಕೆ ನಿರ್ವಹಿಸಲಿದ್ದು, ರಂಗ ವಿನ್ಯಾಸವನ್ನು ಉಮೇಶ್ ಪರಪು ಮಾಡಲಿದ್ದಾರೆ.

ಸಂಸ್ಥೆಯ 43 ವರ್ಷಗಳ ಶೈಕ್ಷಣಿಕ ಸಾಧನೆ ಮತ್ತು ಸಿಲ್ವರ್ ಜುಬಿಲಿ ಸಂಭ್ರಮದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments