Tuesday, November 24, 2026
Google search engine
Homeಕಾರ್ಕಳಶ್ರೀ ಶಂಕರ ವಿಜಯೋತ್ಸವ ಸ್ಪರ್ಧೆ: ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶ್ರೀ ಶಂಕರ ವಿಜಯೋತ್ಸವ ಸ್ಪರ್ಧೆ: ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶ್ರೀ ಶಂಕರವಿಜಯೋತ್ಸವ – 2026 ಶೃಂಗೇರಿ, ಇವರು ನಡೆಸಿದ ಹೆಬ್ರಿ ತಾಲೂಕು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿರಿಯರ ವಿಭಾಗದ ಗಾಯನ ಸ್ಪರ್ಧೆಯಲ್ಲಿ 5ನೇ ತರಗತಿಯ ಮನ್ವಿತಾ ಪ್ರಥಮಸ್ಥಾನ ಹಾಗೂ 6ನೇ ತರಗತಿಯ ಶ್ರೀನಿಧಿ ಸಮಾಧಾನಕರ ಬಹುಮಾನ. ರಸಪ್ರಶ್ನೆ ಸ್ಪರ್ಧೆಯಲ್ಲಿ 6ನೇ ತರಗತಿಯ ಅಖಿಲೇಶ್ ಪ್ರಥಮಸ್ಥಾನ ಹಾಗೂ ಗಮನ್ ಎಂ ಆಚಾರ್ಯ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಹಿರಿಯರ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಶ್ರೀ ಅವಿಘ್ನ ಪ್ರಥಮಸ್ಥಾನ ಮತ್ತು 9ನೇ ತರಗತಿಯ ಸಂಕೇತ್ ಪೈ ತೃತೀಯ ಸ್ಥಾನ. ಭಾಷಣ ಸ್ಪರ್ಧೆಯಲ್ಲಿ 9ನೇ ತರಗತಿಯ ಇಂಪನಾ ದ್ವಿತೀಯ ಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ 9ನೇ ತರಗತಿಯ ಐಸಿರಿ ಎಂ ದ್ವಿತೀಯ ಸ್ಥಾನ ಹಾಗೂ 10ನೇ ತರಗತಿಯ ಪ್ರಥಮ್ ಎನ್ ರಾವ್ ತೃತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ಸಂಸ್ಥೆಯ ಶಿಕ್ಷಕರನ್ನು ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್ ಮತ್ತು ಶಕುಂತಲಾ ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments