ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲ್ಯಸುಧಾ ಕಾರ್ಯಕ್ರಮದ 54ನೇ ಮಾಲಿಕೆಯು ನವೆಂಬರ್ ತಿಂಗಳ ೨೪ರ ಮಂಗಳವಾರದಂದು ಸಂಜೆ 06:15ಕ್ಕೆ ನಡೆಯಲಿದೆ. ಈ ಬಾರಿ ನಾಡಿನ ಪ್ರಸಿದ್ಧ ಮನೋಭಾವ ತರಬೇತುದಾರ ಶ್ರೀ ಮಹೇಶ ಮಾಸಾಳ ಇವರಿಂದ “ಯಾಕ್! ಹಿಂಗ ಯಾಕ್?” ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಲಿದೆ. ಆಸಕ್ತರು ಭಾಗವಹಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.














