Saturday, July 11, 2026
Google search engine
Homeಕಾರ್ಕಳರಾಮ ಮಂದಿರದ ಕಠಿಣ ನಿಯಮಕ್ಕೆ ಬೇಸತ್ತು ದೇಣಿಗೆ ಎಣಿಕೆ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ

ರಾಮ ಮಂದಿರದ ಕಠಿಣ ನಿಯಮಕ್ಕೆ ಬೇಸತ್ತು ದೇಣಿಗೆ ಎಣಿಕೆ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ

ಅಯೋಧ್ಯೆಯ ರಾಮಮಂದಿರದಲ್ಲಿ ನಗದು ಕಾಣಿಕೆಯನ್ನು ಎಣಿಕೆ ಕೆಲಸ ಮಾಡುತ್ತಿದ್ದ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 23 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.

ಕೆಲಸದ ವೇಳಾಪಟ್ಟಿಯಲ್ಲಿನ ಬದಲಾವಣೆಗಳು ಹಾಗೂ ಸಂಬಳದಲ್ಲಿನ ಕಡಿತದ ಕಾರಣ ನೀಡಿ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಈ ಉದ್ಯೋಗಿಗಳು ಮೊದಲು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಹೊಸ ವೇಳಾಪಟ್ಟಿ ಪ್ರಕಾರ ಎಲ್ಲರೂ ಒಂದೇ ಪಾಳಿಯಲ್ಲಿ ಕೆಲಸ ಮಾಡಬೇಕಾಯಿತು. ಕೆಲಸದ ಅವಧಿಯನ್ನೂ 6ರಿಂದ 9 ಗಂಟೆಗೆ ವಿಸ್ತರಿಸಲಾಯಿತು ಹಾಗೂ ರಜೆಗಳನ್ನೂ ಕಡಿಮೆ ಮಾಡಿ, ವೇತನವನ್ನೂ ಕಡಿತಗೊಳಿಸ
ಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಬದಲಾವಣೆಗಳನ್ನು ವಿರೋಧಿಸಿ, ಹಿಂದಿನ ವೇಳಾಪಟ್ಟಿಯನ್ನೇ ಅನುಸರಿಸುವಂತೆ ಟ್ರಸ್ಟ್ ಆಡಳಿತ ಮಂಡಳಿಯನ್ನು ಅವರು ಕೋರಿದ್ದರು. ಆದರೆ ಈ ಬೇಡಿಕೆಯನ್ನು ತಿರಸ್ಕರಿಸಲಾಯಿತು ಎನ್ನಲಾಗಿದೆ.

36 ಮಂದಿ ನಗದು ಕಾಣಿಕೆಯನ್ನು ಎಣಿಸುವ ಕೆಲಸ ಮಾಡುತ್ತಾರೆ. ಈ ಮೊದಲು ಎಲ್ಲರಿಗೂ ತಿಂಗಳಿಗೆ ₹14,755 ವೇತನ ನೀಡಲಾಗುತ್ತಿತ್ತು. ಕೆಲವರಿಗಷ್ಟೇ ವೇತನ ಹೆಚ್ಚಿಸಲಾಗಿದೆ. ಈ ಪೈಕಿ 13 ಮಂದಿ ಮಾತ್ರವೇ ಗುರುವಾರ ಕೆಲಸಕ್ಕೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಇಲ್ಲಿ ನಗದು ಕಾಣಿಕೆ ಎಣಿಕೆಗೆ ನೇಮಿಸಿಕೊಳ್ಳಲಾಗಿತ್ತು. ಇದೀಗ ರಾಮಮಂದಿರದ ಕಾಣಿಕೆ ಕಳವು ಪ್ರಕರಣದ ಸಂದರ್ಭದಲ್ಲಿ ಈ ಎಲ್ಲ ಉದ್ಯೋಗಿಗಳನ್ನೂ ಮತ್ತೆ ಗೃಹ ರಕ್ಷಕ ದಳಕ್ಕೆ ಮರಳಿಸಲು ಯೋಜಿಸಲಾಗಿತ್ತು. ಇದು ಇಷ್ಟವಿಲ್ಲದೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments