Saturday, July 11, 2026
Google search engine
Homeರಾಜ್ಯದಸರಾದ ಪರಂಪರೆಯೇ ಬೇರೆ; ಅದರ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ದಸರಾ ನಡೆಯಬೇಕು:ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್...

ದಸರಾದ ಪರಂಪರೆಯೇ ಬೇರೆ; ಅದರ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ದಸರಾ ನಡೆಯಬೇಕು:ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಅಧಿಕೃತವಾಗಿ ಚಾಲನೆ ಪಡೆದುಕೊಂಡ ಬೆನ್ನಲ್ಲೇ, ಈ ಬಾರಿ ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸುವ ಕುರಿತು ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ.

ಅಕ್ಟೋಬರ್‌ 11 ರಿಂದ ಅಕ್ಟೋಬರ್ 21ರ ವರೆಗೂ ದಸರಾ ಮಹೋತ್ಸವ ಆಚರಿಸೋದಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಆದ್ರೆ, ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲೂ ಕಂಬಳ ಆಯೋಜನೆ ವಿಚಾರವಾಗಿ ಪರ-ವಿರೋಧದ ಚರ್ಚೆ ಜೋರಾಗಿದ್ದು, ಕಂಬಳ ಆಚರಣೆಗೆ ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ .

ಒಂದು ಕಡೆ ಕಂಬಳ ಆಯೋಜನೆಗೆ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಮೈಸೂರು ರಾಜಮನೆತನದ ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಬಳ ಆಯೋಜನೆಗೆ ನೇರ ವಿರೋಧ ವ್ಯಕ್ತಪಡಿಸಿದ್ದಾರೆ. ದಸರಾದಲ್ಲಿ ಕಂಬಳ ಬೇಡ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ. ಕಂಬಳವನ್ನು ಕರಾವಳಿ ಭಾಗವಾದ ಮಂಗಳೂರಿನಲ್ಲೇ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ ಎಂದು ಅವರು ಸಲಹೆ ನೀಡಿದ್ದಾರೆ.

ನಮ್ಮ ದಸರಾ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ?. ರಾಜ್ಯದಲ್ಲಿ ಸವದತ್ತಿ ಎಲ್ಲಮ್ಮನ ಜಾತ್ರೆ, ಕರಾವಳಿಯ ಕಂಬಳ ಹಾಗೂ ಮೈಸೂರು ದಸರಾಗೆ ತನ್ನದೇ ಆದ ವಿಶಿಷ್ಟ ಪರಂಪರೆ ಮತ್ತು ಮಹತ್ವವಿದೆ. ನಮಗೆ ಕಂಬಳದ ಮೇಲೆ ಯಾವುದೇ ವಿರೋಧವಿಲ್ಲ. ಆದರೆ, ದಸರಾದ ಪರಂಪರೆಯೇ ಬೇರೆ. ಅದರ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ದಸರಾ ನಡೆಯಬೇಕು. ದಸರಾ ಒಳಗೆ ಬೇರೆ ಬೇರೆ ಆಚರಣೆಗಳನ್ನು ಬಲವಂತವಾಗಿ ತುರುಕುವ ಅಗತ್ಯವಿಲ್ಲಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಬಳಕ್ಕೆ ದಸರಾದಲ್ಲಿ ಅವಕಾಶ ನೀಡುವ ವಿಚಾರವಾಗಿ ಶಾಸಕ ಅಶೋಕ್ ರೈ ಅವರು ಮಾತನಾಡಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಬೆಂಗಳೂರಲ್ಲಿ ಕಂಬಳ ಮಾಡಿದ್ದೆವು.ಈ ವರ್ಷ ದಸರಾದಲ್ಲಿ ಕಂಬಳ ತೋರಿಸಬೇಕೆಂಬುದು, ಈಗಾಗಲೇ ಜಾಗವನ್ನು ನೋಡಿ ಬಂದಿದ್ದೇವೆ, ರಾಜಮನೆತನಕ್ಕೂ ಕೋಣಗಳಿಗೂ ಸಂಬಂಧ ಇದೆ.

ಮೈಸೂರಿನಲ್ಲಿ ಕೋಣಗಳನ್ನು ಬಿಟ್ಟು ಹೋಗುತ್ತಾರೆ, ದೊಡ್ಡ ಗುಂಡಿಗಳನ್ನು ತೋಡುತ್ತಾರೆ ಎಂಬಿತ್ಯಾದಿ ಅಪನಂಬಿಕೆಗಳಿದ್ದವು, ಅವುಗಳನ್ನೆಲ್ಲ ಸರಿಪಡಿಸುತ್ತೇವೆ. ಈಗಾಗಲೇ ಜಾಗ ವೀಕ್ಷಣೆ ಮಾಡಲಾಗಿದ್ದು, ಒಂದು ತಿಂಗಳು ಮುಂಚಿತವಾಗಿಯೇ ಕೋಣಗಳನ್ನು ತಂದು ಟ್ರಯಲ್ ರನ್ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments