ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ರಂಜಿತ್ ಅವರು ಅಂತರರಾಷ್ಟ್ರೀಯ ವಿದ್ವಾಂಸ ನಿಯತಕಾಲಿಕಗಳಿಗೆ ಅಮೂಲ್ಯವಾದ ಪೀರ್-ರಿವ್ಯೂ ನೀಡುತ್ತಾ ಬಂದಿದ್ದು, ಈ ಕೊಡುಗೆಗಳನ್ನು ಗುರುತಿಸಿ ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ ನಿಂದ 2025-26 ನೇ ಸಾಲಿನ “ಅತ್ಯುತ್ತಮ ವಿಮರ್ಶಕ” ಎಂಬ ಗೌರವ ದೊರೆತಿದೆ.
ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಸಂಸ್ಥೆಗಳಲ್ಲಿ ಒಂದಾದ ಎ.ಎಸ್.ಸಿ.ಇ.ಯ ಮಾನ್ಯತೆಯು ಡಾ. ರಂಜಿತ್ ಅವರ ಅಂತರರಾಷ್ಟ್ರೀಯ ಮಟ್ಟದ ವಿದ್ವತ್ಪೂರ್ಣ ಪರಿಶೀಲನಾ ಚಟುವಟಿಕೆಗಳಿಗೆ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.


























