ಶೀಘ್ರ ಹೊಂಡ ಮುಚ್ಚಿ ಅಪಾಯ ತಪ್ಪಿಸಿ : ಹೋರಾಟಗಾರ ಶ್ರೀಕಾಂತ್ ಪೂಜಾರಿ ಕುಚ್ಚೂರು ಒತ್ತಾಯ
ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹೆಬ್ರಿ ಕೆಳಪೇಟೆ ಮತ್ತು ಅನಂತ ಪದ್ಮನಾಭ ದೇವಸ್ಥಾನದ ಬಳಿಯಲ್ಲಿ ಮತ್ತು ಹಳೇ ಪೊಲೀಸ್ ಠಾಣೆಯ ಎದುರು ಮತ್ತು ಹೆಬ್ರಿಯ ಸೊಸೈಟಿ ಎದುರು ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳು ಬಿದ್ದಿವೆ. ಇದರಿಂದಾಗಿ ವಾಹನ ಸವಾರರಿಗೆ ಅಪಾಯವಾಗುತ್ತದೆ. ಹೆದ್ದಾರಿಯಲ್ಲಿರುವ ಹೊಂಡದಲ್ಲಿ ಮಳೆಯ ನೀರು ನಿಂತು ಹೊಂಡ ಇರುವುದು ಗೊತ್ತಾಗದಂತೆ ವಾಹನಗಳು ಹೊಂಡ ಬೀಳುತ್ತವೆ. ದ್ವಿಚಕ್ರ ವಾಹನಗಳ ಸವಾರರಿಗೆ ಹೊಂಡಗಳು ತಿಳಿಯದೆ ಬೀಳುವ ಅಪಾಯವಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಇದೇ ಸ್ಥಳದಲ್ಲಿ ಹೊಂಡಗಳು ಬೀಳುತ್ತಿವೆ. ಹೆಬ್ರಿಯ ಮುಖ್ಯರಸ್ತೆಯು ರಾಷ್ಟ್ರೀಯ ಹೆದ್ದಾರಿಯಾದ ಬಳಿಕ ಹೊಂಡ ಮುಚ್ಚುವ ಕಾರ್ಯಗಳು ವಿಳಂಬವಾಗುತ್ತಿದೆ. ಇದರಿಂದಾಗಿ ವಾಹನಗಳ ಸವಾರರಿಗೆ ಅಪಾಯವಾಗುತ್ತಿದೆ. ನಿರಂತರವಾಗಿ ದೂರದೂರಿನಿಂದ ಸಾವಿರಾರು ವಾಹನಗಳು ನಿತ್ಯವೂ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ದಿನ ನಿತ್ಯ ನೂರಾರು ಅಂಬುಲೆನ್ಸ್ ಗಳು ಕೂಡ ಸಂಚರಿಸುತ್ತದೆ. ಎಲ್ಲರಿಗೂ ದೊಡ್ಡ ಸಮಸ್ಯೆಯಾಗುತ್ತಿದೆ.
ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹೆಬ್ರಿಯ ವಿವಿದೆಡೆಯಲ್ಲಿ ಹೆದ್ದಾರಿಯಲ್ಲಿ ಬಿದ್ದಿರುವ ಬೃಹತ್ ಹೊಂಡಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಿಸಿ ಶೀಘ್ರವಾಗಿ ಹೊಂಡ ಮುಚ್ಚುವ ಕಾರ್ಯವನ್ನು ನಡೆಸಿ ಅಪಾಯವನ್ನು ತಪ್ಪಿಸುವಂತೆ ಸಾಮಾಜಿಕ ಹೋರಾಟಗಾರ ಜೆಡಿಎಸ್ ಕಾರ್ಕಳ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದ್ದಾರೆ.



















