ರಸ್ತೆಯಲ್ಲಿ ಹೋಗುತ್ತಿದ್ದ ನಡೆದುಕೊಂಡು ಅಪ್ರಾಪ್ತ ವಯಸ್ಕವಿದ್ಯಾರ್ಥಿನಿಯನ್ನು ಮನೆಗೆ ಡ್ರಾಪ್ ಕೊಡುವುದಾಗಿ ಪುಸಲಾಯಿಸಿ ವಿವಾಹಿತ ವ್ಯಕ್ತಿಯೋರ್ವ ತನ್ನ ಬೈಕಿನಲ್ಲಿ ಕುಳ್ಳಿರಿಸಿ ಕೊಂಡು ಕರೆದೊಯ್ಯುವ ಸಂದರ್ಭಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ ಬೆದರಿದ ಬಾಲಕಿ ಬೈಕಿನಿಂದ ಜಿಗಿದು ಗಾಯಗೊಂಡ ಘಟನೆ ಅಜೆಕಾರಿನಲ್ಲಿ ನಡೆದಿದೆ.
ಲೈಂಗಿಕ ಪರಾರಿಯಾಗಿದ್ದ ಕಿರುಕುಳ ನೀಡಿ ಪರಾರಿಯಾಗಿದ್ದ ಬಸ್ ಚಾಲಕ ಶಿರ್ಲಾಲು ಹಾಡಿಯಂಗಡಿ ಶಿವಬೆಟ್ಟು ನಿವಾಸಿ ಪ್ರಶಾಂತ ನಾಯಕ್
ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಪ್ರಥಮ ಪಿಯು ವಿದ್ಯಾರ್ಥಿನಿ ಓದುತ್ತಿದ್ದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಜೆಕಾರು ಕುರ್ಸುಕಟ್ಟೆ ಎಂಬಲ್ಲಿ ಅಜೆಕಾರು ಪೇಟೆ ಕಡೆಯಿಂದ ಬಂದ ಪ್ರಶಾಂತ ನಾಯಕ್, ನನಗೆ ನಿನ್ನ ಮನೆಯವರ ಪರಿಚಯವಿದೆ. ನಿನಗೆ ಬೈಕಿನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಆಕೆಯನ್ನು ಪುಸಲಾಯಿಸಿದ್ದ ಬಾಲಕಿ ಆತನ ಮಾತು ನಂಬಿ ಬೈಕ್ ನಲ್ಲಿ ಕುಳಿತುಕೊಂಡಾಗ ಆರೋಪಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದ್ದು ಇದರಿಂದ ಹೆದರಿದ ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಚಲಿಸುವ ಬೈಕಿನಿಂದ ಜಿಗಿದ ಪರಿಣಾಮ ಬಿದ್ದು ಗಾಯಗೊಂಡಿದ್ದಾಳೆ. ಆಕೆ ಬೈಕಿನಿಂದ ಬಿದ್ದ ತತ್ ಕ್ಷಣವೇ ಆರೋಪಿ ಬೈಕ್ ಜತೆ ಪರಾರಿಯಾಗಿದ್ದು ಪೊಲೀಸರು ಸಿಸಿ ಕೆಮರ, ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ಈ ಹಿಂದೆ ಖಾಸಗಿ ಬಸ್ಸು ಚಾಲಕನಾಗಿಕಾರ್ಯನಿರ್ವಹಿಸುತ್ತಿದ್ದು ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಬಾಲಕಿಯ ಹೆತ್ತವರು ದೂರು ನೀಡಿದ್ದಾರೆ.
















