Thursday, May 28, 2026
Google search engine
Homeಕಾರ್ಕಳಪಳ್ಳಿ: ಬೈಕ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ; ಬೈಕ್ ಸವಾರನಿಗೆ ಗಾಯ

ಪಳ್ಳಿ: ಬೈಕ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ; ಬೈಕ್ ಸವಾರನಿಗೆ ಗಾಯ

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಗಾಯಗೊಂಡಿದ್ದು, ಕಾರು ಚಾಲಕ ಪರಾರಿಯಾದ ಘಟನೆ ಕಾರ್ಕಳದ ಪಳ್ಳಿ ವೈಶಾಲಿ ಬಾರ್ ಬಳಿ ಮಂಗಳವಾರ ಸಂಜೆ ವೇಳೆ ನಡೆದಿದೆ.

ಗಾಯಾಳುವನ್ನು ಮೂಡುಬೆಳ್ಳೆಯ ನಾಗೇಶ್ ಆಚಾರ್ಯ ಎಂದು ಗುರ್ತಿಸಲಾಗಿದೆ. ಪಳ್ಳಿ ಕಡೆಯಿಂದ ಮೂಡುಬೆಳ್ಳೆ ಕಡೆ ಚಲಿಸುತ್ತಿದ್ದ ಬೈಕಿಗೆ ಮೂಡುಬೆಳ್ಳೆ ಕಡೆಯಿಂದ ಪಳ್ಳಿ ಕಡೆಗೆ ಚಲಿಸುತ್ತಿದ್ದ ಕಾರು ಯಾವುದೇ ಸೂಚನೆ ನೀಡದೆ ಬಲಗಡೆಗೆ ತಿರುಗಿಸಿದ ಪರಿಣಾಮ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ಬಳಿಕ ಚಾಲಕ ಕಾರು ನಿಲ್ಲಿಸಿದೆ ಪರಾರಿಯಾಗಿದ್ದಾನೆ.

ಘಟನೆಯ ಪರಿಣಾಮ ಬೈಕ್ ಸವಾರನ ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುವನ್ನು ಉಡುಪಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಗಾಯಾಳು ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments