ಪಡುಕೂಡುರು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಊರ್ಮಿಳಾ ಕುಮಾರಿ ಅವರನ್ನು ಗೌರವಿಸಲಾಯಿತು.
ಪಡುಕುಡೂರು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿ 31 ವರ್ಷಗಳ ಕಾಲ ಶಿರ್ಲಾಲು ಸೂಡಿ, ಅಜೆಕಾರು ಕಿರೆಂಚಿಬೈಲು ಶಾಲೆಯಲ್ಲಿ ಸೇವೆ ಸಲ್ಲಿಸಿ ಇದೇ ಮೇ ತಿಂಗಳಿನಲ್ಲಿ ಭಡ್ತಿ ಹೊಂದಿ ಮುಖ್ಯ ಶಿಕ್ಷಕಿಯಾಗಿ ಪಡುಕುಡೂರು ಶಾಲೆ ವರ್ಗಾವಣೆಯಾಗಿ ಬಂದು ಶನಿವಾರ ನಿವೃತ್ತರಾಗಿರುವ ಊರ್ಮಿಳಾ ಕುಮಾರಿ ಅವರನ್ನು ಸೋಮವಾರ ಶಾಲೆಯ ವತಿಯಿಂದ ಗೌರವಿಸಿ ಬೀಳ್ಕೋಡಲಾಯಿತು.
ಸೇವೆ ಸಲ್ಲಿಸಿದ ಎಲ್ಲಾ ಶಾಲೆಯಲ್ಲೂ ನನಗೆ ಅತ್ಯುತ್ತಮ ವಾತಾವರಣಗಳು ಸಿಕ್ಕಿವೆ. ಮಕ್ಕಳ ಪ್ರೀತಿ ಸಿಕ್ಕಿದೆ. ಶಾಲಾ ಜೀವನವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸಹೋದ್ಯೋಗಿಗಳು, ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ ಸೇರಿ ಸಹಕರಿಸಿದ ಸರ್ವರಿಗೂ ಊರ್ಮಿಳಾ ಕುಮಾರಿ ಕೃತಜ್ಞತೆ ಸಲ್ಲಿಸಿ ಸೇವೆಗೆ ಸೇರಿದ ಪಡುಕುಡೂರು ಶಾಲೆಯಲ್ಲೇ ನಿವೃತ್ತಿಯಾಗುವ ಅಪರೂಪದ ಕ್ಷಣವನ್ನು ಸ್ಮರಿಸಿದರು. ನೆನಪಿಗಾಗಿ ಶಾಲೆಗೆ ನೆರವು ನೀಡಿದರು.
ಇದೇ ಸಂದರ್ಭದಲ್ಲಿ ಎಲ್ ಕೆಜಿ ಯುಕೆಜಿ ತರಗತಿಗಳು ಶುಭಾರಂಭ, ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರ ಮಹಾಸಭೆ, ಸಂವಾದ ಹಾಗೂ ಶಾಲಾಭಿವೃದ್ಧಿಗಾಗಿ ಚರ್ಚೆ ನಡೆಯಿತು. ಸರ್ಕಾರ ಹಾಗೂ ದಾನಿಗಳು ನೀಡಿದ ಸಮವಸ್ತ್ರ, ಪಠ್ಯಪುಸ್ತಕ, ಬಣ್ಣದ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣೆ ನಡೆಯಿತು. ” ಉತ್ತಮ ಕಲಿಕೆ – ಉಜ್ವಲ ಭವಿಷ್ಯ ” ಕಾರ್ಯಕ್ರಮದ ಅನುಷ್ಠಾನ ಹಾಗೂ ದ್ವಿಭಾಷಾ ಮಾಧ್ಯಮ ಶಿಕ್ಷಣದ ಬಗ್ಗೆ ವಿಚಾರ ವಿನಿಮಯ, ಶತರಥ ಯೋಜನೆಯ ಅಧೀಕೃತ ಚಾಲನೆ ಹಾಗೂ ಶತಮಾನೋತ್ಸವದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಬಗ್ಗೆ ಸಮಾಲೋಚನೆ ನಡೆಯಿತು.
ದಾನಿ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹರೀಶ ಪೂಜಾರಿ, ಚಿಕ್ಕಮಾರಬೆಟ್ಟು ಚಂದ್ರಶೇಖರ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಹೃದಯ ಕುಮಾರ್ ಶೆಟ್ಟಿ, ಸೇವಾ ಪ್ರತಿನಿಧಿ ಚಿತ್ರಾ, ಅಂಗನವಾಡಿ ಶಿಕ್ಷಕಿ ಸವಿತಾ ಶೆಟ್ಟಿ, ಬಾಲ ವಿಕಾಸ ಸಮಿತಿಯ ಸರಿತಾ, ಪತ್ರಕರ್ತ ಸುಕುಮಾರ್ ಆಚಾರ್ ಖಜಾನೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕಿಯರು, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಹರೀಶ ಪೂಜಾರಿ ಅಭಿನಂದನಾ ಬಾಷಣ ಮಾಡಿದರು. ಶಿಕ್ಷಕಿಯರಾದ ಶೋಭಾ ನಾಯ್ಕ್ ನಿರೂಪಿಸಿ ಶ್ರುತಿ ಸ್ವಾಗತಿಸಿ ಶ್ರುತಿ ಮೇಲ್ಮನೆ ಸನ್ಮಾನ ಪತ್ರ ವಾಚಿಸಿ ಶಾಲಿನಿ ಸುಕುಮಾರ್ ವಂದಿಸಿದರು.

















