ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಕರೆತರಲು ಶತಮಾನೋತ್ಸವದ ನೆನಪಿಗೆ ವಿಶೇಷವಾಗಿ ಆರಂಭಿಸಿರುವ ” ಶತರಥ” ಶಾಲಾ ಮಕ್ಕಳ ವಾಹನ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಲಾಯಿತು.
ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಮನೆಮನೆಯಿಂದ ಕರೆತರಲು ಶತಮಾನೋತ್ಸವದ ನೆನಪಿಗೆ ವಿಶೇಷವಾಗಿ ೨೦೨೬ರಿಂದ ಆರಂಭಿಸಿರುವ “ಶತರಥ” ಶಾಲಾ ಮಕ್ಕಳ ವಾಹನ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಲಾಯಿತು. ಪಡುಕುಡೂರು ಶ್ರೀ ಭದ್ರಕಾಳಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಕನ್ನಡ ಉಳಿಸಿ ಮಾತುಗಳು ಕೇವಲ ಮಾತಿಗೆ ಸೀಮಿತವಾಗಬಾರದು, ನಮ್ಮದೂ ಅತ್ಯಂತ ಗ್ರಾಮೀಣ ಪ್ರದೇಶದ ಶಾಲೆ, ಮಕ್ಕಳ ಮನೆಮಂದಿಯೆಲ್ಲ ದಿನನಿತ್ಯ ಕೆಲಸಕ್ಕೆ ಹೋಗುತ್ತಾರೆ. ನಾವು ಏನಾದರೂ ವ್ಯವಸ್ಥೆ ಮಾಡಿ ವಾಹನದ ಮೂಲಕ ಮಕ್ಕಳನ್ನು ಕರೆತಂದರೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯುತ್ತವೆ. ಪಡುಕುಡೂರು ಶಾಲೆಯ ಶತಮಾನೋತ್ಸವ ಸಂಭ್ರಮದ ನೆನಪಿಗಾಗಿ ಸರ್ವರ ಸಹಕಾರದಲ್ಲಿ ವಿನೂತನ ಶತರಥ ಶಾಲಾ ವಾಹನ ವ್ಯವಸ್ಥೆಗೆ ಚಾಲನೆ ನೀಡಿದ್ದೇವೆ ಎಂದು ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್ ತಿಳಿಸಿದರು.
ಪಡುಕುಡೂರು ಶಾಲೆಯಲ್ಲಿ ಆಂಗ್ಲಮಾಧ್ಯಮ ಸೇರಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಖಾಸಗಿ ಶಾಲೆಯಂತೆಯೇ ಸಕಲ ವ್ಯವಸ್ಥೆಯನ್ನು ನೀಡುತ್ತೇವೆ ಸ್ಥಳೀಯರು ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ ಎಂದು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮನವಿ ಮಾಡಿದರು. ಪಡುಕುಡೂರಿನ ವಿವಿಧ ಭಾಗಗಳಿಂದ, ಸೂರಿಮಣ್ಣು, ಕೆಳಖಜಾನೆ, ಮಾವಿನಕಟ್ಟೆ, ಚಟ್ಕಲ್ ಪಾದೆ ಸೇರಿ ವಿವಿದೆಡೆಯಿಂದ ಮಕ್ಕಳನ್ನು ಪಡುಕುಡೂರು ಶಾಲೆಗೆ ಕರೆತರಲಾಗುತ್ತಿದೆ. ಇದೇ ಸಂದರ್ಭದಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಮಕ್ಕಳನ್ನು ಮತ್ತು ಅತಿಥಿ ಹಾಗೂ ಗೌರವ ಶಿಕ್ಷಕಿಯರನ್ನು ಶಾಲೆಗೆ ಸ್ವಾಗತಿಸಲಾಯಿತು.
ಶತರಥ ವಾಹನ ಚಾಲಕ ರಾಘವೇಂದ್ರ ಆಚಾರ್ಯ ಗರ್ಧರಬೆಟ್ಟು ಅವರನ್ನು ಗೌರವಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಸಂಚಾಲಕ ಪ್ರಸನ್ನ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹರೀಶ ಪೂಜಾರಿ, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಶತಮಾನೋತ್ಸವ ಮತ್ತು ಹಳೇ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

















