Tuesday, June 2, 2026
Google search engine
Homeಕಾರ್ಕಳಕಾರ್ಕಳ:ಅನ್ವಿ ಹೆಚ್. ಅಂಚನ್ ಗೆ ಸಕಲ ಕಲಾ ವಲ್ಲಭೆ ಬಿರುದು

ಕಾರ್ಕಳ:ಅನ್ವಿ ಹೆಚ್. ಅಂಚನ್ ಗೆ ಸಕಲ ಕಲಾ ವಲ್ಲಭೆ ಬಿರುದು

ಕಾರ್ಕಳ:ಅನ್ವಿ ಹೆಚ್ ಅಂಚನ್ ಗೆ ಸಕಲ ಕಲಾ ವಲ್ಲಭೆ ಬಿರುದು

ಕಾರ್ಕಳ ತೆಲಿಕೆದ ತೆನಾಲಿ ತಂಡ ಅರ್ಪಿಸುವ ತೆಲಿಕೆದ ಸಂಭ್ರಮ-2026 ಸಮಾರೋಪ ಕಾರ್ಯಕ್ರಮದಲ್ಲಿ ಅನ್ವಿ ಹೆಚ್ ಅಂಚನ್ ಗೆ ಸಕಲ ಕಲಾ ವಲ್ಲಭೆ ಬಿರುದು ಗೌರವಿಸಲಾಯಿತು.

ಚಿಕ್ಕ ವಯಸ್ಸಿನಲ್ಲಿ ಯೋಗ, ಸಂಗೀತ, ನೃತ್ಯ, ಅಬ್ಯಾಕಸ್, ಕರಾಟೆ, ಒಲಂಪಿಯಾಕ್ ಪರೀಕ್ಷೆ, ಭರತನಾಟ್ಯ, ಕ್ರೀಡೆ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿರುವ ಅನ್ವಿ ಹೆಚ್. ಅಂಚನ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು ಈ ಬಾರಿ ಹತ್ತನೇ ತರಗತಿಯಲ್ಲಿ ಅಂತಿಮ ಪರೀಕ್ಷೆಯಲ್ಲಿ 625ರಲ್ಲಿ 620 ಅಂಕ ಪಡೆಯುವುದರೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಇವರ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ತೆಲಿಕೆದ ತೆನಾಲಿ ತಂಡದ ತೆಲಿಕೆದ ಸಂಭ್ರಮ 2026 ರ ಸಮಾರಂಭದಲ್ಲಿ ಈ ಬಿರುದನ್ನು ನೀಡಿ ಗೌರವಿಸಲಾಯಿತು. ಇವರು ಕಾರ್ಕಳ ಶಾಸಕರ ಆಪ್ತ ಸಹಾಯಕರಾದ ಹರೀಶ್ ಅಂಚನ್ ಮತ್ತು ತೆಳ್ಳಾರು ಪ್ರೌಢಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಶೋಭಾ ದಂಪತಿಗಳ ಪುತ್ರಿ .

ವೇದಿಕೆಯಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ , ಬಾಲಾಜಿ ಮೊಬೈಲ್ಸ್ ನ ಪ್ರಶಾಂತ್ ಶೆಣೈ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ವೃಷಭರಾಜ್ ಕದಂಬ, ದಿನೇಶ್ ಪ್ರಭು ಕಲ್ಲೊಟ್ಟೆ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments