ಕಾರ್ಯದರ್ಶಿಯಾಗಿ ಲಯನ್ ಮಂಜುನಾಥ್, ಕೋಶಾಧಿಕಾರಿಯಾಗಿ ಲಯನ್ ದಯಾನಂದ್ ರಾವ್ ಆಯ್ಕೆ
ಲಯನ್ಸ್ ಕ್ಲಬ್ ಸೆಂಟ್ರಲ್ ಕಾರ್ಕಳದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಯನ್ ದತ್ತಾತ್ರೆಯ ಹಿರಿಯಂಗಡಿ ಆಯ್ಕೆಯಾಗಿದ್ದಾರೆ.
ಗಿರೀಶ್ ರಾವ್ ಅವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಸೆಂಟ್ರಲ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದತ್ತಾತ್ರೆಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕ್ಲಬ್ ನ ನೂತನ ಕಾರ್ಯದರ್ಶಿಯಾಗಿ ಲಯನ್ ಮಂಜುನಾಥ್, ಕೋಶಾಧಿಕಾರಿಯಾಗಿ ಲಯನ್ ದಯಾನಂದ್ ರಾವ್ ಆಯ್ಕೆಯಾಗಿದ್ದಾರೆ.
ಇವರು ಈ ಹಿಂದೆ ಲಯನ್ಸ್ ಕ್ಲಬ್ ಸೆಂಟ್ರಲ್ ಇದರ ಕಾರ್ಯದರ್ಶಿಯಾಗಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ಇದರ ಪ್ರಸ್ತುತ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಉಪಾದ್ಯಕ್ಷರಾಗಿ 11 ವರ್ಷಗಳಿಂದ ಸೌತ್ ಕೆನರಾ ಫೋಟೋಗ್ರಾಫರ್ಸ್ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದಾರೆ.
ಕ್ಲಬ್ ನ ನೂತನ ಕಾರ್ಯದರ್ಶಿಯಾಗಿ ಲಯನ್ ಮಂಜುನಾಥ್, ಕೋಶಾಧಿಕಾರಿಯಾಗಿ ಲಯನ್ ದಯಾನಂದ್ ರಾವ್ ಆಯ್ಕೆಯಾಗಿದ್ದಾರೆ.

















