Wednesday, June 3, 2026
Google search engine
Homeಕಾರ್ಕಳಕಾರ್ಕಳದಲ್ಲಿ ನಡೆದ ತೆಲಿಕೆದ ಸಂಭ್ರಮ2026 ಸ್ಟಾಂಡ್ ಅಪ್ ಕಾಮಿಡಿಯಲ್ಲಿ ಯುವ ಪ್ರತಿಭೆ ನಾಗರಾಜ್ ಕುಲಾಲ್ ಕಾಡುಹೊಳೆ...

ಕಾರ್ಕಳದಲ್ಲಿ ನಡೆದ ತೆಲಿಕೆದ ಸಂಭ್ರಮ2026 ಸ್ಟಾಂಡ್ ಅಪ್ ಕಾಮಿಡಿಯಲ್ಲಿ ಯುವ ಪ್ರತಿಭೆ ನಾಗರಾಜ್ ಕುಲಾಲ್ ಕಾಡುಹೊಳೆ ಅವರಿಗೆ ಪ್ರಶಸ್ತಿ.

ಪ್ರತಿಭಾವಂತ ಯುವ ಪ್ರತಿಭೆ ಕಲಾವಿದ ಮುನಿಯಾಲಿನ ನಾಗರಾಜ್‌ ಕುಲಾಲ್‌ ಕಾಡುಹೊಳೆ ಅವರಿಗೆ ಕಾರ್ಕಳದಲ್ಲಿ ಭಾನುವಾರ ನಡೆದ ತೆಲಿಕೆದ ಸಂಭ್ರಮ 2026ರ ಸ್ಟಾಂಡ್ ಅಪ್ ಕಾಮಿಡಿಯಲ್ಲಿ ತನ್ನ ವಿಶಿಷ್ಟ ಶೈಲಿಯ ಪ್ರಸ್ತುತಿ ಮೂಲಕ ನಗದುಜೊತೆಗೆ ತೃತೀಯ ಪ್ರಶಸ್ತಿ ಪಡೆದಿದ್ದಾರೆ.

ತುಳು ರಂಗಭೂಮಿ ಇತಿಹಾಸದಲ್ಲಿ ಇತ್ತೀಚೆಗೆ ಸಾಕಷ್ಟು ವರ್ಗದ ಪ್ರೇಕ್ಷಕರನ್ನು ಸೆಳೆದು ಕಾಮಿಡಿಯಲ್ಲಿ ಸದ್ದು ಮಾಡುತ್ತಿರುವ ಯುವ ಪ್ರತಿಭೆ ನಾಗರಾಜ್ ಕುಲಾಲ್ ಕಾಡುಹೊಳೆ ಅವರು ಶಿಕ್ಷಣ ಮುಗಿಸಿದ ಬಳಿಕ ನಾಗರಾಜ್‌ ಕುಲಾಲ್ ಮಂಗಳೂರಿನ ಖಾಸಗಿವಾಹಿನಿಯಲ್ಲಿ 2ವರ್ಷ ಸ್ಟಾಂಡ್ ಅಪ್ ಕಾಮಿಡಿಯನ್ ಆಗಿ ಮುಂದೆ ತುಳು ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.2025ರಲ್ಲಿ ಉಡುಪಿ ಯಕ್ಷಗಾನ ಕಲಾರಂಗದಲ್ಲಿ ನಡೆದ ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ (ರಿ) ಅರ್ಪಿಸಿದ ರಾಜ್ಯ ಮಟ್ಟದ ಕೋಸ್ಟಲ್‌ ಕಾಮಿಡಿ ಸ್ಟಾರ್‌ ತುಳು ಸ್ಟ್ಯಾಂಡ್‌ ಅಫ್‌ ಕಾಮಿಡಿ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ 2ನೇ ರನ್ನರ್‌ ಆಪ್‌ ಪ್ರಶಸ್ತಿಯನ್ನು ಪಡೆದಿದ್ದರು.

ಬದುಕಿನ ನಾಳೆಗಾಗಿ ಕಠಿಣ ಶ್ರಮವಹಿಸುವ ಕಾಯಕಜೀವಿ ನಾಗರಾಜ್‌ ಕುಲಾಲ್‌ ಕಾಡುಹೊಳೆ ಎಳವೆಯಿಂದಲೇ ಪ್ರತಿಭಾವಂತ. ಕಲಾ ಕ್ಷೇತ್ರದತ್ತ ಆಕರ್ಷಿತರಾದ ಕಾರ್ಕಳ ತಾಲ್ಲೂಕಿನ ಅಜೆಕಾರು ಸಮೀಪದ ನಾಗರಾಜ್‌ ಕುಲಾಲ್‌ ಕಾಡುಹೊಳೆ ಹಾಸ್ಯಮಯ ಸಾಮಾಜಿಕ ನಾಟಕ  “ಕಾಲ ಬದಲಾತುಂಡು” ನ್ನು ರಚನೆ ಮಾಡಿ ನಿರ್ದೇಶಿಸಿ ಅಭಿನಯಿಸಿ ನಾಟಕ ಕಲಾರಂಗಕ್ಕೆ ಪ್ರಥಮ ಕಾಣಿಕೆ ನೀಡಿದ್ದಾರೆ.

ಮುನಿಯಾಲಿನಲ್ಲಿ ಪ್ರಥಮ ಪ್ರದರ್ಶನ ಕೂಡ ಕಂಡಿದೆ. ಬಹುಮುಖ ಪ್ರತಿಭೆಯ ನಾಗರಾಜ್‌ ಕುಲಾಲ್‌ ದೈಜಿವಲ್ಡ್‌ ಮಾಧ್ಯಮ ಸಂಸ್ಥೆಯ ಕಾಮಿಡಿ ರಾಜರಾಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಮನ್ನಣೆಗಳಿಸಿದ್ದಾರೆ. ಕಟ್ಟೆ ಫ್ರೆಂಡ್ಸ್ ನಿಟ್ಟೂರು ಆಯೋಜನೆಯ ಬಲೇ ತೆಲಿಪುಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೊಳ್ಳಿ ಕಲಾವಿದೆರ್ ತಂಡದಲ್ಲಿಯೂ ನಾಗರಾಜ್‌ ಕುಲಾಲ್‌ ಕಾಡುಹೊಳೆ ವಿಶೇಷ ಪಾತ್ರವಹಿಸಿದ್ದಾರೆ. ಸಾರಥ್ಯ ಕಲಾವಿದೆರ್ ಮುನಿಯಾಲು ಮೂಲಕ ರಂಗಪಯಣ ಆರಂಭಿಸಿ ಪ್ರಸ್ತುತ ಅಭಿಷೇಕ್‌ ಬಜಗೋಳಿ ಸಾರಥ್ಯದ ಬೊಳ್ಳಿ ಕಲಾವಿದೆರ್‌ ಬಜಗೋಳಿ ತಂಡದಲ್ಲಿ ಅಭಿನಯಿಸುತ್ತಿದ್ದಾರೆ.

 

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments