Wednesday, July 22, 2026
Google search engine
Homeಕಾರ್ಕಳ'ಇತಿಹಾಸದ ಕಣ್ಣಲ್ಲಿ ಕಾರ್ಕಳ' ವಿಶೇಷ ಉಪನ್ಯಾಸ

‘ಇತಿಹಾಸದ ಕಣ್ಣಲ್ಲಿ ಕಾರ್ಕಳ’ ವಿಶೇಷ ಉಪನ್ಯಾಸ

ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ದಿವಂಗತ ಶ್ರೀ ಶಾಂತಿನಾಥ ಜೋಗಿ ಅವರ ಸ್ಮರಣಾರ್ಥ ಅವರ ಕುಟುಂಬದವರು ಪ್ರಾಯೋಜಿಸಿ, ಸಂಸ್ಥೆಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಶ್ರೀ ರತ್ನಾಕರ ಪೂಜಾರಿ ಯವರ ನೇತೃತ್ವದಲ್ಲಿ ನಡೆಸಿಕೊಟ್ಟ, ಇತಿಹಾಸದ ಕಣ್ಣಲ್ಲಿ ಕಾರ್ಕಳ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾಕ್ಟರ್ ಎಸ್. ಆರ್. ಅರುಣ್ ಕುಮಾರ್, ಜಾನಪದ ಪ್ರದರ್ಶನ ಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಉಡುಪಿ, ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರು ಶ್ರೀ ಭವನೇಂದ್ರ ಕಾಲೇಜ್ ಕಾರ್ಕಳ ಇವರು ಭಾಗವಹಿಸಿದ್ದರು. ಸುಮಾರು ಐದನೇ ಶತಮಾನದಿಂದ ಸ್ವಾತಂತ್ರ್ಯೋತರ ಭಾರತದ ವರೆಗೆ ಕಾರ್ಕಳವನ್ನು ಆಳಿದ, ಮುನ್ನಡೆಸಿಕೊಂಡು ಹೋದ ರಾಜವಂಶಸ್ಥರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ, ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಹಾಗೂ ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಂಡು ಕಾರ್ಕಳವನ್ನು ಬೆಳೆಸಿದ ರೀತಿಯನ್ನು ಎಲ್ಲರಿಗೂ ಮನದಟ್ಟಾಗುವಂತೆ ವಿವರಿಸಿದರು.

ಪ್ರಾಂಶುಪಾಲರಾದ ಸೀತಾರಾಮ ಭಟ್ ಇವರು ಇತಿಹಾಸದ ಅಧ್ಯಯನದ ಅವಶ್ಯಕತೆಯ ಬಗ್ಗೆ ಹಾಗೂ ನವ ಸಮಾಜ ನಿರ್ಮಾಣದಲ್ಲಿ ಇತಿಹಾಸದ ಪಾತ್ರ ದ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು. ಕನ್ನಡ ಉಪನ್ಯಾಸಕರಾದ ಶ್ರೀ ನರಸಿಂಹವರ್ಧನ್ ಇವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಲೀಸಾ ಬರ್ಬೋಜಾ ಇವರು ನಿರೂಪಿಸಿದ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭಗೊಂಡು ಕುಮಾರಿ ಸಾಕ್ಷ ಇವರ ವಂದನಾರ್ಪಣೆಯೊಂದಿಗೆ ಸಂಪನ್ನಗೊಂಡಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments