Wednesday, June 3, 2026
Google search engine
Homeಕಾರ್ಕಳಕಾರ್ಕಳ: ಅಕ್ರಮ ಕಲ್ಲು ಗಣಿಗಾರಿಕೆ ದಾಳಿ; ಮೂವರ ವಿರುದ್ದ ಪ್ರಕರಣ ದಾಖಲು

ಕಾರ್ಕಳ: ಅಕ್ರಮ ಕಲ್ಲು ಗಣಿಗಾರಿಕೆ ದಾಳಿ; ಮೂವರ ವಿರುದ್ದ ಪ್ರಕರಣ ದಾಖಲು

ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಕಾರ್ಕಳ ಪೊಲೀಸರು ದಾಳಿ ನಡೆಸಿ, ಮೂವರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಜೂ. 2 ರಂದು ಕಾರ್ಕಳದ ಕುಕ್ಕುಂದೂರು ಗ್ರಾಮದ ಅರ್ಬಿಪಾದೆ ಎಂಬಲ್ಲಿ ನಡೆದಿದೆ.

ಅರುಣ್ ಕುಮಾರ್ ಶೆಟ್ಟಿ ಕುಕ್ಕುಂದೂರು, ಸದಾಶಿವ ಶೆಟ್ಟಿ ಕುಕ್ಕುಂದೂರು, ಸತೀಶ್ ಕಿಣಿ ಕುಕ್ಕುಂದೂರು ಹಾಗೂ ಇತರರು ಸೇರಿ ಸರ್ಕಾರಿ ಸ್ಥಳದಲ್ಲಿರುವ ಬಂಡೆಗಳನ್ನು ಒಡೆದು ಸೈಜ್ ಕಲ್ಲುಗಳನ್ನಾಗಿ ಪರಿವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ದಾಳಿ ನಡೆಯುವ ವೇಳೆ ಸ್ಥಳದಲ್ಲಿದ್ದ ಕಲ್ಲುಗಳನ್ನು ತುಂಬಿದ 2 ಟಿಪ್ಪರ್, ಕಂಪ್ರೆಷರ್, ಡ್ರಿಲ್ಲಿಂಗ್ ಮಿಷನ್ ಹಾಗೂ ಇನ್ನಿತರ ಉಪಕರಣಗಳನ್ನು ಪೊಲೀಸ್‌ ಉಪನಿರೀಕ್ಷಕ ಮುರುಳೀಧರ ನಾಯ್ಕ್ ಅವರ ತಂಡ ವಶಪಡಿಸಿಕೊಂಡಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments