ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಪ್ರಾರಂಭೊತ್ಸವವನ್ನು ಜೂನ್ 01 ರಂದು ಅತ್ಯಂತ ವಿಜೃಂಭಣೆಯಿಂದ ಮಾಡಲಾಯಿತು.
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಧನೆ ಹೆಜ್ಜೆ ಗುರುತುಗಳನ್ನು ದೃಶ್ಯಾಧಾರಿತವಾಗಿ ವಿಜ್ಞಾನ ಶಿಕ್ಷಕಿ ಕುಮಾರಿ ಅನಿಶಾ ಪ್ರಸ್ತುತಪಡಿಸಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ವೈದ್ಯಾಧಿಕಾರಿ ಶ್ರೀವಿದ್ಯಾ ಮಾತನಾಡಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವುದು ಆರೋಗ್ಯದ ಲಕ್ಷಣ. ಧ್ಯಾನ ವ್ಯಾಯಾಮಗಳ ಮೂಲಕ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು. ಜೀವನದಲ್ಲಿ ಒತ್ತಡಗಳು ಜಾಸ್ತಿಯಾದಾಗ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು.
ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ.ಕೆ, ಶಾಲಾ ಶಿಸ್ತು ಹಾಗೂ ನಿಯಮಗಳು, ಇಡೀ ವರ್ಷದ ಶಾಲೆಯ ಆಗುಹೋಗುಗಳ ಬಗ್ಗೆ ವಿವರಿಸಿ, ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್ ಎಂ.ಕೊಡವೂರು 2026-27ರ ಶೈಕ್ಷಣಿಕ ವರ್ಷದ ಬಗ್ಗೆ ಶಾಲಾ ಮಾಹಿತಿಯನ್ನು ನೀಡಿದರು. ಜೆಇಎ ಸಂಯೋಜಕ ಸಂದೀಪ್ ಜ್ಞಾನಸುಧಾ ಎಂಟ್ರೆನ್ಸ್ ಅಕಾಡಮಿಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸ್ಟೂಡೆಂಟ್ ಡೀನ್ ಅಕಾಡಮಿಕ್ಸ್ಡಾ.ಮಿಥುನ್.ಯು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನು ಚಂಡೆ ನಾದದೊಂದಿಗೆ, ಸುಗಂಧ ಜಲವನ್ನು ಚಿಮುಕಿಸಿ, ಪೆನ್ನು ನೀಡುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.ವಿದ್ಯಾರ್ಥಿನಿ ಸಮೃದ್ಧಿ ಪೈ ಪ್ರಾರ್ಥಿಸಿ, ಸಹ ಶಿಕ್ಷಕಿ ಸುಪ್ರಿಯಾಕಾರ್ಯಕ್ರಮ ನಿರ್ವಹಿಸಿದರು.



















