Thursday, June 11, 2026
Google search engine
Homeಕಾರ್ಕಳರೋಟರಿ ಕ್ಲಬ್ ಕಾರ್ಕಳ : 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ ತಪಾಸಣ ಶಿಬಿರ

ರೋಟರಿ ಕ್ಲಬ್ ಕಾರ್ಕಳ : 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ ತಪಾಸಣ ಶಿಬಿರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ,ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಉಡುಪಿ ಅಂಧತ್ವ ನಿವಾರಣ ವಿಭಾಗ ಉಡುಪಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ತಾಲೂಕು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಖಾಯಿಲೆಗಳ ವಿವಿಧ ಘಟಕಗಳು, ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣ ಶಿಬಿರರವನ್ನು ನಡೆಸಲಾಯಿತು.

ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಸಮುದಾಯ ಮಟ್ಟದಲ್ಲಿ ಶೀಘ್ರ ಸಕ್ರಿಯ ಕ್ಷಯರೋಗ ತಪಾಸಣೆ ಮಾಡಿ, ಟಿಬಿ ಮುಕ್ತ ಭಾರತ ಮಾಡುವ ಈ ಅಭಿಯಾನದಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.

ಈ ಶಿಬಿರದಲ್ಲಿ ಉಚಿತವಾಗಿ ಕ್ಷಯರೋಗ ತಪಾಸಣೆಯ ಎದೆಯ ಕ್ಷಕಿರಣ ತಪಾಸಣೆ ಹಾಗೂ ಇತರೆ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಒಟ್ಟು 105 ಜನ ಸ್ಥಳೀಯರಿಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು.

ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದಿಂದ ರೇಡಿಯೋ ಇಮೇಜಿಂಗ್ ಆಫೀಸರ್ ಕೃಷ್ಣ ಪ್ರಸಾದ್, ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿನ ಆಯುಷ್ ವೈದ್ಯಾಧಿಕಾರಿ ಡಾ. ರೇಷ್ಮಾ, ನೇತ್ರಾಲಯ ಉಡುಪಿಯ ಡಾ. ಪ್ರಶಾಂತ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಸಾದ್ ಪೂಜಾರಿ, ತಾಲೂಕು ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಯೋಗೀಶ್ ಕಿಣಿ, ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ. ಚೇತನ್ ನಾಯಕ್, ರೊ. ಜೇರೋಲ್ಡ್ ಕುಟಿನ್ಹೋ, ರೊ. ಶೇಖರ್ ಹೆಚ್. ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments