ಮಗ ಮೃತಪಟ್ಟ ಬೇಸರದಿಂದಾಗಿ ಮದ್ಯಪಾನದ ಚಟಕ್ಕೆ ಸಿಲುಕಿ, ಜೀವನದಲ್ಲಿ ಜಿಗುಪ್ಸೆಗೊಂಡು ವಿಶ್ವನಾಥ ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಹೊಸಮನೆಯಲ್ಲಿ ನಡೆದಿದೆ.
ಮೃತ ವಿಶ್ವನಾಥ್ ಅವರು ಜೂ. 10 ರಂದು ಮದ್ಯಪಾನ ಮಾಡಿ ಬಂದು ಮಲಗಿದ್ದು, ಜೂ.೧೧ ರಂದು ಮೃತರ ಹೆಂಡತಿ ಎಂದಿನಂತೆ ಕೆಲಸಕ್ಕೆ ಹೋಗಿ ಮರಳುವ ವೇಳೆ ವಿಶ್ವನಾಥರವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.


















