Thursday, June 18, 2026
Google search engine
Homeಕಾರ್ಕಳತಾತನ ಸ್ವಯಂ ಸಂಪಾದಿತ ಆಸ್ತಿ ತಂದೆಯ ವೈಯಕ್ತಿಕ, ಪಿತ್ರಾರ್ಜಿತ ಅಲ್ಲ-ಮೊಮ್ಮಕ್ಕಳು ಪಾಲು ಕೇಳಲು ಅವಕಾಶವಿಲ್ಲ

ತಾತನ ಸ್ವಯಂ ಸಂಪಾದಿತ ಆಸ್ತಿ ತಂದೆಯ ವೈಯಕ್ತಿಕ, ಪಿತ್ರಾರ್ಜಿತ ಅಲ್ಲ-ಮೊಮ್ಮಕ್ಕಳು ಪಾಲು ಕೇಳಲು ಅವಕಾಶವಿಲ್ಲ

ತಾತನ ಸ್ವಯಂ ಸಂಪಾದಿತ ಆಸ್ತಿ ವಿಭಜನೆಯ ನಂತರ ತಂದೆಗೆ ಬಂದಾಗ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ. ಆದ್ದರಿಂದ ಮೊಮ್ಮಕ್ಕಳು ಅದರಲ್ಲಿ ಪಾಲು ಕೇಳುವ ಕಾನೂನು ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಾತನು ತನ್ನ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಕೌಟುಂಬಿಕ ಒಪ್ಪಂದದ ಮೂಲಕ ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಈ ಹಂಚಿಕೆಯಲ್ಲಿ ತಂದೆಗೆ ಬಂದ ಭಾಗವು ಅವರ ವೈಯಕ್ತಿಕ ಆಸ್ತಿಯಾಗಿದೆ. ಮಿತಾಕ್ಷರ ಕಾನೂನಿನ ಪ್ರಕಾರ ತಂದೆಗೆ ತನ್ನ ಸ್ವಯಂ ಸಂಪಾದಿತ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡುವ ಅಥವಾ ಮಾರಾಟ ಮಾಡುವ ಪೂರ್ಣ ಸ್ವಾತಂತ್ರ್ಯವಿದೆ. ಮೊಮ್ಮಕ್ಕಳು ಇಲ್ಲಿ ಕಾಪರ್ಸನರ್ (ಸಹ ಒಡೆಯ) ಅಲ್ಲ. ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರ ವಿಭಾಗೀಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments