‘ಪಾತಕಿ ದಾವೂದ್ ಇಬ್ರಾಹಿಂ ಬಿಜೆಪಿಗೆ ಸೇರುವುದು ಮಾತ್ರವೇ ಬಾಕಿ ಉಳಿದಿರುವುದು’ ಎಂದು ಆಪ್ ಸಂಸದ ಸಂಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಟಿಎಂಸಿ, ಶಿವಸೇನೆ (ಯುಬಿಟಿ) ಪಕ್ಷಗಳ ನಾಯಕರು ಬಂಡಾಯವೆದ್ದಿರುವುದನ್ನು ಉಲ್ಲೇಖಿಸಿ, ಸಂಜಯ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಜಯ್, ‘ಟಿಎಂಸಿ ಸಂಸದೆ ಸಯೋನಿ ಘೋಷ್ ಬಿಜೆಪಿ ವಿರುದ್ಧ ಅಷ್ಟೆಲ್ಲ ಮಾತನಾಡಿದರೂ, ಬಂಡಾಯವೆದ್ದ ಮೇಲೆ ಅವರು ಈಗ ಒಳ್ಳೆಯವರಾಗಿದ್ದಾರೆ. ಮುಸ್ಲಿಂ ಸಮುದಾಯದ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರ ಬಗ್ಗೆಯೂ ಬಿಜೆಪಿಗೆ ಈಗಾವುದೇ ಸಮಸ್ಯೆ ಇಲ್ಲ. ಇನ್ನು ಕೇವಲ ದಾವೂದ್ ಇಬ್ರಾಹಿಂ ಒಬ್ಬನೇ ಬಿಜೆಪಿಗೆ ಸೇರಲು ಬಾಕಿ ಉಳಿದಿದ್ದಾನೆ’ ಎಂದಿದ್ದಾರೆ.



















