ಜಿ7 ಶೃಂಗಸಭೆ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನನ್ನ ಜತೆ ಫೋಟೋ ತೆಗೆದುಕೊಳ್ಳುವಂತೆ ಬೇಡಿಕೊಂಡಿದ್ದರು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ತೀಕ್ಷ್ಯವಾಗಿ ಪ್ರತಿಕ್ರಿಯಿಸಿರುವ ಇಟಲಿ ಪ್ರಧಾನಿ ಮೆಲೊನಿ, ‘ಅಮೆರಿಕ ಅಧ್ಯಕ್ಷರು ಹೇಳಿರುವುದೆಲ್ಲ ಕಟ್ಟು ಕಥೆ. ನಾನು ಅಥವಾ ಇಟಲಿ ಎಂದಿಗೂ ಯಾರನ್ನೂ ಯಾವುದಕ್ಕೂ ಬೇಡುವುದಿಲ್ಲ ಎಂದಿದ್ದಾರೆ.



















