“ಯೋಗದಿಂದ ರೋಗ ಬರದ ಹಾಗೆ ತಡೆಗಟ್ಟಬಹುದು. ಯೋಗಾಭ್ಯಾಸವನ್ನು ಪ್ರತಿದಿನವೂ ನಡೆಸುವುದರಿಂದ ಕಾಯಿಲೆಗಳಿಂದ ದೂರವಿರಬಹುದು”. ಎ೦ದು ಕಾರ್ಕಳದ ಪತಂಜಲಿ ಯೋಗ ಸಮತಿಯ ಯೋಗ ತರಬೇತುದಾರರಾದ ಉದಯ ಕುಮಾರ್ ಕಡಂಬರವರು ಅಭಿಪ್ರಾಯಪಟ್ಟರು.
ಕಾರ್ಕಳದ ಕೆ.ಎಂ. ಇ.ಎಸ್.ಸಂಸ್ಥೆಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ತರಬೇತಿಯನ್ನು ನೀಡುತ್ತಾ “ಯೋಗ ದಿನಾಚರಣೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಲಿದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಯೋಗಾಭ್ಯಾಸದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಹಿತಮಿತವಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು”. ಎಂದು ಆಹಾರದ ಸೇವನೆಯ ಬಗ್ಗೆಯೂ ಮಾಹಿತಿ ನೀಡಿದರು.
ಸುಮಾರು ಒಂದು ಗಂಟೆಗಿಂತಲೂ ಹೆಚ್ಚಿನ ಸಮಯದ ವರೆಗೆ ಯೋಗದ ತರಬೇತಿಯನ್ನು ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ರವರು ಸ್ವಾಗತಿಸಿದರು. ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿಯವರು ಧನ್ಯವಾದ ಸಮರ್ಪಣೆಗೈದರು. ಪ್ರೈಮರಿ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.



















