ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಬಗ್ಗೆ ಮನನೊಂದು ಬಿಜೆಪಿ ರಾಜ್ಯಾಧ್ಯಕ್ಷರು ಆಣೆ-ಪ್ರಮಾಣದ ಮಾತನಾಡಿದ್ದಾರೆ. ಪವಿತ್ರ ಧರ್ಮಸ್ಥಳವನ್ನು ಈ ವಿಚಾರಕ್ಕೆ ಎಳೆಯುವುದು ಬೇಡ ಎಂದು ಹೇಳಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಶ್ರದ್ದಾಕೇಂದ್ರ ಧರ್ಮಸ್ಥಳವನ್ನು ಇದಕ್ಕೆ ತರುವುದು ಬೇಡ.
ಈಗಾಗಲೇ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ಅದರ ಮೂಲಕ ಪತ್ತೆ ಹಚ್ಚುವ ಕೆಲಸವಾಗಲಿ, ಸದ್ಯಕ್ಕೆ ಪತ್ತೆಯಾಗದಿದ್ದರೂ ಇಂದಲ್ಲ ನಾಳೆ ಬಯಲಾಗಲಿದೆ. ಆಗಲಾದರೂ ಕ್ರಮ ಕೈಗೊಳ್ಳುವುದು ನಿಶ್ಚಿತ. ಹೀಗಾಗಿ ಆಣೆ ಪ್ರಮಾಣ ಕೈಬಿಡುವಂತೆ ಹೇಳಿರುವುದಾಗಿ ತಿಳಿಸಿದರು.



















